ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‘ಕಿಡ್ಸ್ ಡೇ@ಸ್ಯಾಮ್‌ಸಂಗ್- 2025’ ಕಾರ್ಯಕ್ರಮ ಆಯೋಜನೆ: ಹೊಸತನದ ಆಟದ ಮೈದಾನವಾಗಿ ಪರಿವರ್ತನೆಗೊಂಡ ಸ್ಯಾಮ್ ಸಂಗ್ ಕಚೇರಿ

ಕುತೂಹಲ ಹಾಗೂ ಸೃಜನಶೀಲತೆಯನ್ನು ಹುಟ್ಟುಹಾಕುವ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕನಸು ಕಾಣಲು, ಹೊಸತನದ ಹುಡುಕಾಟ ನಡೆಸಲು ಪ್ರೋತ್ಸಾಹಿಸಲಾಯಿತು. ಮಕ್ಕಳು ಬಿಜಿನೆಸ್ ಎಕ್ಸ್‌ಪೀರಿಯನ್ಸ್ ಸ್ಟುಡಿಯೋಗೆ ಭೇಟಿ ನೀಡಿದರು, ಸ್ಯಾಮ್‌ಸಂಗ್‌ನ ಉತ್ಪನ್ನಗಳ ಸಂಗ್ರಹ, ಇತ್ತೀಚಿನ ಆವಿಷ್ಕಾರಗಳು ಮತ್ತು ಸ್ಮಾರ್ಟ್‌ಥಿಂಗ್ಸ್‌ ನ ಜಗತ್ತನ್ನು ನೋಡಿದರು. ಈ ಕಾರ್ಯಕ್ರಮದಲ್ಲಿ ಉದ್ಯೋಗಿ ಗಳ ಸಂಗಾತಿಗಳು ಸಹ ಭಾಗವಹಿಸಿದ್ದು, ಈ ದಿನವು ಕೌಟುಂಬಿಕ ಬಂಧಗಳು ಮತ್ತು ಸ್ಯಾಮ್‌ಸಂಗ್ ಸಮುದಾಯದ ಸಂಭ್ರಮಾಚರಣೆಯ ದಿನವಾಗಿ ಮೂಡಿ ಬಂತು.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ‘ಕಿಡ್ಸ್ ಡೇ@ಸ್ಯಾಮ್‌ಸಂಗ್- 2025’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಉದ್ಯೋಗಿಗಳು, ಅವರ ಮಕ್ಕಳು ಮತ್ತು ಸಂಗಾತಿಗಳು ಒಂದೇ ಕಡೆ ಸೇರಿ ಸಂಭ್ರಮಾಚರಣೆ ಮಾಡಿದರು. ಎಲ್ಲರೂ ಸ್ಯಾಮ್‌ಸಂಗ್ ಕುಟುಂಬದ ಭಾಗವಾಗಿರುವುದಕ್ಕೆ ಹೆಮ್ಮೆಯಿಂದ ಖುಷಿ ಹಂಚಿಕೊಂಡರು.

ಗುರುಗ್ರಾಮದ ಸ್ಯಾಮ್‌ಸಂಗ್‌ನ ಕಾರ್ಪೊರೇಟ್ ಕಚೇರಿಯಲ್ಲಿ ದಿನವಿಡೀ ನಡೆದ ಈ ಕಾರ್ಯಕ್ರಮ ದಲ್ಲಿ ಕುಟುಂಬಗಳು ಅವಿಸ್ಮರಣೀಯ ನೆನಪುಗಳನ್ನು ಸೃಷ್ಟಿಸಿದರು. ವಿಶೇಷವಾಗಿ ಈ ಕಾರ್ಯಕ್ರಮ ದಲ್ಲಿ ಮುಂದಿನ ಪೀಳಿಗೆಗೆ ಕನಸು ಕಾಣಲು, ಹೊಸತನದ ಹುಡುಕಾಟ ನಡೆಸಲು ಮತ್ತು ತಂತ್ರಜ್ಞಾನವನ್ನು ಅನ್ವೇಷಿಸಲು ಪ್ರೇರೇಪಿಸಲಾಯಿತು.

ಸ್ಯಾಮ್‌ಸಂಗ್ ಕುಟುಂಬದ ಸಂಭ್ರಮಾಚರಣೆ

ಈ ಕಾರ್ಯಕ್ರಮವು ತಮ್ಮ ತಂದೆ-ತಾಯಿಯೊಂದಿಗೆ ಬಂದ ಮಕ್ಕಳಿಗೆ ಸ್ಯಾಮ್‌ಸಂಗ್‌ನ ಜಗತ್ತನ್ನು ನೋಡಲು, ತಮ್ಮ ಪೋಷಕರು ಕೆಲಸ ಮಾಡುವ ಸ್ಥಳವನ್ನು ನೋಡಲು ಮತ್ತು ಕಂಪನಿಯ ಹೊಸತನ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಅನುಭವಿಸಲು ಅವಕಾಶ ಒದಗಿಸಿತು. ಉದ್ಯೋಗಿಗಳ ಸಂಗಾತಿಗಳು ಸಹ ಭಾಗವಹಿಸಿದ್ದರಿಂದ ಕುಟುಂಬದ ಮತ್ತು ಒಗ್ಗಟ್ಟಿನ ಸಂಭ್ರಮವಾಯಿತು.

ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ಇಂಡಿಯಾದ ಪೀಪಲ್ ಟೀಮ್‌ನ ಮುಖ್ಯಸ್ಥ ರಿಷಭ್ ನಾಗ್‌ಪಾಲ್ ಅವರು, “ಕಿಡ್ಸ್ ಡೇ@ಸ್ಯಾಮ್‌ಸಂಗ್ ಎನ್ನುವುದು ಸ್ಯಾಮ್ ಸಂಗ್ ಕುಟುಂಬ ಗಳಿಗೆ ನಮ್ಮ ಬಾಗಿಲುಗಳು ಮತ್ತು ಹೃದಯಗಳನ್ನು ತೆರೆಯುವ ಕಾರ್ಯಕ್ರಮ ಮಾತ್ರವೇ ಅಲ್ಲ, ಜೊತೆಗೆ ಯುವ ಮನಸ್ಸುಗಳನ್ನು ಹೊಸತನದ ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮವೂ ಹೌದು. ಕುಟುಂಬ ಸದಸ್ಯರನ್ನು ನಮ್ಮ ಕಚೇರಿಗೆ ಕರೆತಂದು, ಸ್ಯಾಮ್‌ಸಂಗ್‌ನ ಭಾಗವಾಗಿರುವುದಕ್ಕೆ ಹೆಮ್ಮೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತೇವೆ. ಈ ವರ್ಷದ ಕಾರ್ಯಕ್ರಮವು ಮುಂದಿನ ಪೀಳಿಗೆಯ ಕ್ರಿಯೇಟರ್ ಗಳು, ಚಿಂತಕರು ಮತ್ತು ಸಂಶೋಧಕರಾಗಲು ಪ್ರೇರೇಪಿಸುವ ನಮ್ಮ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ನಮ್ಮ ಸ್ಯಾಮ್‌ಸಂಗ್ ಕುಟುಂಬದ ಬಂಧಗಳನ್ನು ಬಲಪಡಿಸುತ್ತದೆ” ಎಂದು ಹೇಳಿದರು.

ಯುವ ಮನಸ್ಸುಗಳಿಗೆ ಪ್ರೇರೇಪಣೆ

“ಸ್ಯಾಮ್‌ಸಂಗ್ ಕುರಿತು ತಿಳಿಯಿರಿ” ಕಾರ್ಯಕ್ರಮದ ಭಾಗವಾಗಿ, ಮಕ್ಕಳು ಬಿಜಿನೆಸ್ ಎಕ್ಸ್‌ಪೀರಿಯನ್ಸ್ ಸ್ಟುಡಿಯೋಗೆ ಭೇಟಿ ನೀಡಿದರು, ಅಲ್ಲಿ ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಉತ್ಪನ್ನಗಳು ಮತ್ತು ಸ್ಮಾರ್ಟ್‌ ಥಿಂಗ್ಸ್ ವ್ಯವಸ್ಥೆಯ ಲೈವ್ ಪ್ರದರ್ಶನಗಳನ್ನು ನೋಡಿದರು.

ವಿಶೇಷವಾಗಿ ಮಕ್ಕಳು ಮಿನಿ ಸಿಇಓ ಚಾಲೆಂಜ್‌ ನಲ್ಲಿ ಭಾಗವಹಿಸಿದರು, ಈ ಚಾಲೆಂಜ್ ನಲ್ಲಿ “ನಾನು ಸ್ಯಾಮ್‌ಸಂಗ್‌ನ ಸಿಇಓ ಆಗಿದ್ದರೆ, ಯಾವ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದ್ದೆ?” ಎಂಬ ವಿಷಯ ದ ಬಗ್ಗೆ ಚಿಂತನೆ ನಡೆಸಿ, ಸೃಜನಶೀಲವಾಗಿ ಯೋಚಿಸಲು ಮತ್ತು ಭವಿಷ್ಯದ ತಂತ್ರಜ್ಞಾನ ವನ್ನು ಪರಿಕಲ್ಪಿಸಲು ಪ್ರೋತ್ಸಾಹಿಸಲಾಯಿತು.

ಕುಟುಂಬಗಳ ಸಂಭ್ರಮ

  • ಸ್ಯಾಮ್‌ಸಂಗ್ ಸ್ಟುಡಿಯೋ- ಸ್ಯಾಮ್‌ಸಂಗ್ ತನ್ನ ಉತ್ಪನ್ನದ ಜಾಹೀರಾತುಗಳನ್ನು ಹೇಗೆ ರಚಿಸುತ್ತದೆ ಎಂಬುದರ ಬಿಹೈಂಡ್ ದಿ ಸೀನ್ಸ್ ತೋರಿಸಲಾಯಿತು.
  • ಜಿಮ್ & ಯೋಗ ರೂಮ್- ಕಂಪನಿಯು ಉದ್ಯೋಗಿಗಳ ಯೋಗಕ್ಷೇಮಕ್ಕೆ ತೋರಿಸುವ ಕಾಳಜಿಯನ್ನು ಪರಿಚಯಿಸಲಾಯಿತು.
  • ಪೋಷಕರ ಕೆಲಸದ ಸ್ಥಳ- ಮಕ್ಕಳು ತಮ್ಮ ಪೋಷಕರ ಕಚೇರಿಯನ್ನು ಹೆಮ್ಮೆಯಿಂದ ನೋಡಿದರು ಮತ್ತು ಸಹೋದ್ಯೋಗಿಗಳ ಕುಟುಂಬಗಳನ್ನು ಭೇಟಿಯಾದರು.

ತಮಾಷೆ, ಆಟ ಮತ್ತು ಒಗ್ಗಟ್ಟಿನ ಆಚರಣೆ

ಉತ್ಸವದ ಸಂಭ್ರಮ ಹೆಚ್ಚಿಸಲು, ಕಿಡ್ಸ್ ಪ್ಲೇ ಝೋನ್‌ನಲ್ಲಿ ಆಟದ ಸ್ಟಾಲ್‌ ಗಳು, ಟ್ಯಾಟೂ ಆರ್ಟ್, ಕ್ಯಾರಿಕೇಚರ್ ಸ್ಕೆಚ್‌ ಗಳು, ಕೂದಲು ಹೆಣೆಯುವುದು ಮತ್ತು ನೇಲ್ ಪೇಟಿಂಗ್ ನಂತಹ ಚಟುವಟಿಕೆ ಗಳನ್ನು ಆಯೋಜಿಸಲಾಗಿತ್ತು. ನಗು, ಆಟ ಮತ್ತು ಸಂತೋಷದಿಂದ ದಿನ ಕಳೆಯಲಾಯಿತು ಮತ್ತು ಮಕ್ಕಳು ಉಡುಗೊರೆಗಳನ್ನು ಗೆದ್ದು ಸಂತೋಷಪಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗಾಗಿ ವಿಶೇಷ ತಿಂಡಿಗಳ ಬಾಕ್ಸ್‌ ಗಳು ಮತ್ತು ಕ್ಯುರೇಟೆಡ್ ಗಿಫ್ಟ್ ಹ್ಯಾಂಪರ್‌ ಗಳನ್ನು ನೀಡಲಾಯಿತು. ಸ್ಯಾಮ್‌ಸಂಗ್‌ ಈ ಮೂಲಕ ತನ್ನ ಕುಟುಂಬಕ್ಕೆ ಕೃತಜ್ಞತೆ ಮತ್ತು ಪ್ರೀತಿಯನ್ನು ಸಲ್ಲಿಸಿತು.