ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಒಂದು ದೇಶವಾಗಿ ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ- ಸ್ವಾಮಿ ವಿಗ್ಯಾನ್ಆನಂದ ಜಿ

81 ವರ್ಷಗಳ ಪರಂಪರೆ ಹಿನ್ನೆಲೆಯಲ್ಲಿ ಸಹಸ್ರ ಗ್ರಾಹಕ ಚಂದ್ರ ದರ್ಶನ ಎಂಬ ಪರಿಕಲ್ಪನೆ, ಸಾವಿರ ಗ್ರಾಹಕರನ್ನು ಒಂದೇ ದಿನ ಕರೆದು ಅವರಿಗೆ ಆಭರಣ ಮಾರಾಟ ಮಾಡಿ ವರ್ಲ್ಡ್ ರೆಕಾರ್ಡ್ ಮಾಡುವ ಕಲ್ಪನೆ ನಿಜವಾಗಿಯೂ ವಿಶೇಷ ರೀತಿಯ ಇನ್ನೋವೇಶನ್ ಕಾರ್ಯಕ್ರಮ, ಬಹಳ ಸುಂದರ ಮತ್ತು ಆನಂದದಾಯಕ"

ದೇಶವಾಗಿ ಭಾರತ,ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ

-

Ashok Nayak Ashok Nayak Oct 8, 2025 10:25 PM

ಬೆಂಗಳೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಬೆಂಗಳೂರು ಶಾಖೆಯ ಅನಾವರಣವನ್ನು "ಹಿಂದೂ ಎಕನಾಮಿಕ್ ಫೋರಂ" ಇದರ ಜಾಗತಿಕ ಅಧ್ಯಕ್ಷ , ಸ್ವಾಮಿ ವಿಗ್ಯಾನಾನಂದ್, ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಜನರನ್ನು ಉದ್ದೇಶಿಸಿ ಮಾತನಾಡಿದ ಇವರು 'ರಾಷ್ಟ್ರೀಯತೆ ಕುರಿತು ಮಾತನಾಡುತ್ತಾ, ಭಾರತೀಯ ಕಂಪನಿಗಳು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಮೇಲೆ ಹೆಚ್ಚು ಹೊತ್ತು ಕೊಡಬೇಕು, ಹಾಗಾದಾಗ ನಮ್ಮ ವ್ಯವಹಾರಿಕ ಕಂಪನಿಗಳು ಇತರ ಏರೋಪ್ಯ ಮತ್ತು ಅಮೆರಿಕದಂತಹ ರಾಷ್ಟ್ರಗಳ ಜೊತೆಗೆ ಸಮಾನವಾಗಿ ನಿಲ್ಲಬಹುದುನಿಲ್ಲಬಹುದು ಎಂದರು.

ಮುಂದುವರಿಸಿ ಮಾತನಾಡುತ್ತಾ" ಮುಳಿಯ ಸಂಸ್ಥೆ ಏರ್ಪಡಿಸಿದ ಈ ಉದ್ಘಾಟನಾ ಕಾರ್ಯಕ್ರಮ ವಿಭಿನ್ನವಾಗಿದೆ. 81 ವರ್ಷಗಳ ಪರಂಪರೆ ಹಿನ್ನೆಲೆಯಲ್ಲಿ ಸಹಸ್ರ ಗ್ರಾಹಕ ಚಂದ್ರ ದರ್ಶನ ಎಂಬ ಪರಿಕಲ್ಪನೆ, ಸಾವಿರ ಗ್ರಾಹಕರನ್ನು ಒಂದೇ ದಿನ ಕರೆದು ಅವರಿಗೆ ಆಭರಣ ಮಾರಾಟ ಮಾಡಿ ವರ್ಲ್ಡ್ ರೆಕಾರ್ಡ್ ಮಾಡುವ ಕಲ್ಪನೆ ನಿಜವಾಗಿಯೂ ವಿಶೇಷ ರೀತಿಯ ಇನ್ನೋವೇಶನ್ ಕಾರ್ಯಕ್ರಮ , ಬಹಳ ಸುಂದರ ಮತ್ತು ಆನಂದದಾಯಕ" ಎಂದು ಅಭಿನಂದಿಸಿದರು.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಒಂದು ಬಟಾಟೆಯ ತುಂಡುಗಳು ಫಿಂಗರ್ ಚಿಪ್ಸಾಗಿ ಜಗತ್ತಿಗೆ ಹೆಸರುವಾಸಿ ಆಗುವಂತೆ ಮಾರ್ಕೆ ಟಿಂಗ್ ಮಾಡಿ ಜನ ಸಮೂಹದ ಮೆಚ್ಚುಗೆ ಪಡೆಯುತ್ತದೆ. ಅದರಂತೆಯೇ ನಮ್ಮೂರಿನ ಬಗೆ ಬಗೆಯ ರೊಟ್ಟಿಗಳು , ಇಡ್ಲಿ ಮತ್ತು ಮಸಾಲೆ ದೋಸೆ ಮುಂತಾದ ಆಹಾರಗಳು ಯಾಕೆ ಜಗತ್ತಿಗೆ ತಲುಪಿಸ ಬಾರದು!? ಎಂದು ಅವರು ಪ್ರಶ್ನಿಸಿದರು. ನಮ್ಮ ಆಹಾರ ಆರೋಗ್ಯಕ್ಕೂ ಯೋಗ್ಯ ಆದರೂ ನಾವು ಅದನ್ನು ಜಗತ್ತಿನ ಬ್ರಾಂಡ್ ಆಗಿ ತೆಗೆದುಕೊಂಡು ಇನ್ನೂ ಹೋಗಲಾಗುತ್ತಿಲ್ಲ. ಭಾರತದ ವ್ಯಾಪಾರಿ ಸಮೂಹ ಇದನ್ನು ಮಾಡಬೇಕು. ವ್ಯಾಪಾರ ತಪ್ಪಲ್ಲ. "ಸರಿಯಾದ ವ್ಯಾಪಾರ ವನ್ನು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ರೀತಿಯಲ್ಲಿ ಜಗತ್ತಿಗೆ ತೆರೆಯುವುದು ಭಾರತದ ಈಗಿನ ಬಹುದೊಡ್ಡ ಅಗತ್ಯ" ಎಂದರು.

ಮುಳಿಯ ಚೇರ್ಮನ್ ಕೇಶವಪ್ರಸಾದ್ ಧ್ವನಿಗೂಡಿಸಿ "ನಿಮ್ಮ ಮಾತುಗಳನ್ನು ನಾವು ಹಿಂದಿ ನಿಂದಲೂ ಪಾಲಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಹೊಸತನವನ್ನು ತರಲು ಪ್ರಯತ್ನ ಪಡುತ್ತೇವೆ" ನಿಮ್ಮ ಆಶೀರ್ವಾದ ನಮ್ಮ ಸಂಸ್ಥೆಗೆ ಸದಾ ಇರಲಿ ಎಂದು ವಿವರಿಸಿದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಸ್ವಾಮೀಜಿ ಮಾತನ್ನು ಸಮರ್ಥಿಸಿದರು.