ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

ಆಕಾಶ ಏರ್ ಪ್ರಾರಂಭವಾದಗಿನಿಂದಲೂ ಪ್ರತಿ ಹಬ್ಬಕ್ಕೂ ವಿಶೇಷ ಆಹಾರಗಳನ್ನು ಪರಿಚಯಿಸುತ್ತಾ ಬರಲಾಗಿದೆ. ಪ್ರಮುಖವಾಗಿ ಮಕರ ಸಂಕ್ರಾಂತಿ, ಪ್ರೇಮಿಗಳ ದಿನ, ಹೋಳಿ, ಈದ್, ತಾಯಂದಿರ ದಿನ, ಅಂತರರಾಷ್ಟ್ರೀಯ ಯೋಗ ದಿನ, ಮಾನ್ಸೂನ್, ನವರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ವರೆಗೆ ತನ್ನ ಪ್ರಯಾಣಿಕರಿಗೆ ಹಬ್ಬದ ಊಟವನ್ನು ಉಣಬಡಿಸುತ್ತಿದೆ.

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

-

Ashok Nayak Ashok Nayak Oct 8, 2025 11:20 PM

ಬೆಂಗಳೂರು: ಆಕಾಸ ಏರ್‌ ತನ್ನ ಕೆಫೆಯ ಮೆನುವನ್ನು ನವೀಕರಿಸಿದ್ದು, ಎಲ್ಲಾ ಬಗೆಯ ರುಚಿಕರ ಖಾದ್ಯಗಳೂ ಸಹ ಆಕಾಸ ಕೆಫೆಯಲ್ಲಿ ಸಿಗಲಿದೆ.

ಹಬ್ಬದ ಋತು ಪ್ರಾರಂಭವಾಗುತ್ತಿದ್ದಂತೆ, ವಿಮಾನ ಪ್ರಯಾಣವೂ ಹೆಚ್ಚುತ್ತದೆ. ಪ್ರತಿಯೊಬ್ಬರಿಗೂ ಆಹಾರ ಸೇವನೆಯಲ್ಲಿ ವಿಭಿನ್ನ ರುಚಿ ಹೊಂದಿರುತ್ತಾರೆ. ಜೊತೆಗೆ, ತಮ್ಮ ಸ್ಥಳೀಯ ಖಾದ್ಯಗಳನ್ನು ಸವಿಯಲು ಸಹ ಬಯಸುತ್ತಾರೆ.

ಇಂದಿನ ಆಧುನಿಕ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ, ರಿಫ್ರೆಶ್ ಮಾಡಿದ ಕೆಫೆ ಆಕಾಸಾ ಮೆನುವು 45 ವಿಭಿನ್ನ ಊಟದ ಆಯ್ಕೆ ಇಟ್ಟಿದೆ. ಪ್ರಯಾಣಿಕರು ಬಯಸುವ ಸಮತೋಲನವನ್ನು ಸಾಕಾರಗೊಳಿಸುತ್ತದೆ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಆರೋಗ್ಯ-ಪ್ರಜ್ಞೆಯ ಆಯ್ಕೆ, ಇಡೀ ದಿನದ ಊಟದ ನಮ್ಯತೆ, ಭೋಗದ ಟ್ರೀಟ್‌ ಮತ್ತು ಜಾಗತಿಕ ಸುವಾಸನೆ, ಧಾನ್ಯದ ಬಟ್ಟಲುಗಳಿಂದ ಹಿಡಿದು ಗೌರ್ಮೆಟ್ ಪ್ಲೇಟರ್‌, ಪ್ರೋಟೀನ್-ಭರಿತ ಆಹಾರ ಮತ್ತು ಬೆಳ್ಳುಳ್ಳಿ ಪಾಲಕ್‌ನೊಂದಿಗೆ ಚಿಕನ್ ಸ್ಕ್ನಿಟ್ಜೆಲ್, ಎಡಮಾಮ್‌ ನೊಂದಿಗೆ ಟೋಫು ಕರಿ ಪ್ಯಾನ್ ಮತ್ತು ಥಾಯ್ ಸ್ಪೈಸ್ ಸಲಾಡ್‌ನಂತಹ ಸೃಜನಶೀಲ ಖಾಧ್ಯಗಳು, ಕೆಫೆ ಆಕಾಸಾ ವಿಮಾನದಲ್ಲಿ ಲಭ್ಯವಿದೆ

ವಿಶೇಷ ಹಬ್ಬದ ಖಾದ್ಯ: ಆಕಾಶ ಏರ್ ಪ್ರಾರಂಭವಾದಗಿನಿಂದಲೂ ಪ್ರತಿ ಹಬ್ಬಕ್ಕೂ ವಿಶೇಷ ಆಹಾರಗಳನ್ನು ಪರಿಚಯಿಸುತ್ತಾ ಬರಲಾಗಿದೆ. ಪ್ರಮುಖವಾಗಿ ಮಕರ ಸಂಕ್ರಾಂತಿ, ಪ್ರೇಮಿಗಳ ದಿನ, ಹೋಳಿ, ಈದ್, ತಾಯಂದಿರ ದಿನ, ಅಂತರರಾಷ್ಟ್ರೀಯ ಯೋಗ ದಿನ, ಮಾನ್ಸೂನ್, ನವರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ವರೆಗೆ ತನ್ನ ಪ್ರಯಾಣಿಕರಿಗೆ ಹಬ್ಬದ ಊಟವನ್ನು ಉಣಬಡಿಸುತ್ತಿದೆ.