ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ನಿಂದ ಸುಸ್ಥಿರತೆಯ ಗುರಿಯ ಗ್ರೀನ್ ಫೀಲ್ಡ್ ಇಂಟಿಗ್ರೇಟೆಡ್ ಘಟಕಕ್ಕೆ ಚಾಲನೆ

ಈ ಪ್ರಮುಖ ವಿಸ್ತರಣೆಯು ಎಂ.ಎಸ್.ಎಸ್.ಎಸ್.ಎಲ್.ಗೆ ಹೆಚ್ಚುತ್ತಿರುವ ಬೇಡಿಕೆಎ ಪೂರೈಸಲು, ಹಸಿರು ಉಕ್ಕು ಆವಿಷ್ಕಾರ ಉತ್ತೇಜಿಸಲು ಮತ್ತು ಭಾರತದ ಸ್ವಾವಲಂಬನೆಯ ಉದ್ದೇಶಗಳನ್ನು ಸುಧಾರಿಸಲು ನೆರವಾಗಲಿದೆ. ₹2,345 ಕೋಟಿ ಹೂಡಿಕೆಯು ಮುಕಂದ್ ಸುಮಿಯ ಹೊಸ ಏಕೀಕೃತ ಉಕ್ಕು ಘಟಕವನ್ನು ಮುನ್ನಡೆಸಲಿದೆ

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್(MSSSL) ಕರ್ನಾಟಕದ ಕೊಪ್ಪಳದ ಕನಕಪುರದಲ್ಲಿ ಹಸಿರು ವಲಯದ ಏಕೀಕೃತ ಉಕ್ಕು ಉತ್ಪಾದನಾ ಘಟಕ ನಿರ್ಮಾಣದಲ್ಲಿ ಗಮನಾರ್ಹ ವಿಸ್ತರಣೆ ಪ್ರಕಟಿಸಿದೆ. ಭಾರತದ ಬಜಾಜ್ ಗ್ರೂಪ್ ಮತ್ತು ಜಪಾನಿನ ಸುಮಿಟೊಮೊ ಕಾರ್ಪೊರೇಷನ್, ಎಂ.ಎಸ್.ಎಸ್.ಎಸ್.ಎಲ್. ಭಾರತದಲ್ಲಿ ಮುಂಚೂಣಿಯ ಉಕ್ಕು ಉತ್ಪಾದಕರಾಗಿ ತನ್ನ ಸ್ಥಾನ ಸದೃಢಗೊಳಿಸಿಕೊಳ್ಳುವುದನ್ನು ಮುಂದುವರಿಸಿದೆ. ಈ ಸಹಯೋಗದ ಮೂಲಕ ಎಂ.ಎಸ್.ಎಸ್.ಎಸ್.ಎಲ್.ನ ಉತ್ಪಾದನೆಯ ಸಾಮರ್ಥ್ಯವು ಪ್ರತಿ ವರ್ಷಕ್ಕೆ 700,000 ಟನ್ನುಗಳಿಗೆ ಹೆಚ್ಚಲಿದ್ದು ಭಾರತದ ಅಗ್ರಮಾನ್ಯ ವಿಶೇಷ ಉಕ್ಕು ಉತ್ಪಾದಕರಲ್ಲಿ ಒಂದಾಗಿಸಲಿದೆ.

ಈ ಹೂಡಿಕೆಯು ಎಂ.ಎಸ್.ಎಸ್.ಎಸ್.ಎಲ್.ನ ದೀರ್ಘಾವಧಿ ಪ್ರಗತಿಯ ಕಾರ್ಯತಂತ್ರದಲ್ಲಿ ಪ್ರಮುಖ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ. ಈ ಬಂಡವಾಳ ಹೂಡಿಕೆಯು ಪ್ರಸ್ತುತ ಪಾರಿಸರಿಕ ಅನುಮೋದನೆಗಳಿಗೆ ಒಳಪಡಬೇಕಿದೆ.

ಇದನ್ನೂ ಓದಿ: Bangalore News: ಶಿಕ್ಷಕರು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ರೂಪಿಸಬೇಕು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ

ಭಾರತದ ಉಪಕ್ರಮಗಳು ಬಲಿಷ್ಠ ಭಾರತದ ಅರ್ಥವ್ಯವಸ್ಥೆಯ ಮತ್ತು ಕೈಗಾರಿಕೆ, ಶಕ್ತಿ ಮತ್ತು ವಾಹನೋದ್ಯಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ “ಆತ್ಮನಿರ್ಭರ ಭಾರತ”ದ ಧ್ಯೇಯಕ್ಕೆ ಅನುಗುಣವಾಗಿದೆ. 2018ರಲ್ಲಿ ಎಂ.ಎಸ್.ಎಸ್.ಎಸ್.ಎಲ್. ಪ್ರಾರಂಭದಿಂದ ಇದು ಪ್ರತಿ ವರ್ಷ 350,000 ಟನ್ನುಗಳಷ್ಟು ಉಕ್ಕಿನ ಉತ್ಪನ್ನಗಳನ್ನು ಪ್ರತಿವರ್ಷ ಪೂರೈಸಿದ್ದು ಅದರಲ್ಲಿ ಬಾರ್ ಗಳು, ವೈರ್ ರಾಡ್ ಗಳು ಮತ್ತು ಸೆಕೆಂಡರಿ ಉತ್ಪನ್ನಗಳಿವೆ.

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಅಧ್ಯಕ್ಷ ಶ್ರೀ ವಿಪುಲ್ ಮಶ್ರುವಾಲಾ, “ಈ ವಿಸ್ತರಣೆ ಯು ನಮ್ಮ ದೀರ್ಘಾವಧಿಯ ಪ್ರಗತಿಯ ನೀಲಿನಕ್ಷೆಯಲ್ಲಿ ಮಹತ್ತರ ಮೈಲಿಗಲ್ಲಾಗಿದೆ. ನಮ್ಮ ಚೇರ್ ಮನ್ ಶ್ರೀ ನೀರಜ್ ಬಜಾಜ್ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ನಾವು ಜಾಗತಿಕ ವಿಶೇಷ ಉಕ್ಕು ಮಾರುಕಟ್ಟೆಯಲ್ಲಿ ನಮ್ಮ ಸ್ಥಾನ ಗಟ್ಟಿಗೊಳಿಸಲು ಸುಸ್ಥಿರ ಮತ್ತು ಭವಿಷ್ಯ ಸನ್ನದ್ಧ ತಂತ್ರ ಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ಉನ್ನತೀಕರಿಸುವ ಮೂಲಕ ನಾವು ನಮ್ಮ ಗ್ರಾಹಕರ ವಿಕಾಸಗೊಳ್ಳುತ್ತಿರುವ ಬೇಡಿಕೆಗಳಿಗೆ ಪೂರೈಸುತ್ತಿರುವುದೇ ಅಲ್ಲದೆ ಸ್ವಾವಲಂಬನೆಯ ವಿಸ್ತಾರ ರಾಷ್ಟ್ರೀಯ ಗುರಿಗೆ ಶ್ರಮಿಸುತ್ತಿದ್ದೇವೆ. ನಮ್ಮ ಗುರಿ ನಮ್ಮ ಗ್ರಾಹಕರಿಗೆ ಅಸಾಧಾರಣ ಮೌಲ್ಯ ನೀಡುವುದಲ್ಲದೆ ಭವಿಷ್ಯ-ಸನ್ನದ್ಧ, ಜವಾಬ್ದಾರಿಯುತ ಉಕ್ಕಿನ ಇಕೊಸಿಸ್ಟಂ ನಿರ್ಮಿಸುವುದು” ಎಂದರು.

ಸುಸ್ಥಿರತೆಗೆ ಆದ್ಯತೆ ನೀಡುವಂತೆ ವಿನ್ಯಾಸಗೊಳಿಸಲಾದ ಈ ಹೊಸ ಘಟಕವು 2,345 ಕೋಟಿ ರೂ.ಗಳ ಹೂಡಿಕೆಯಲ್ಲಿ ನಿರ್ಮಾಣವಾಗಲಿದ್ದು ಶೂನ್ಯ ದ್ರವ, ಘನ ಮತ್ತು ಅನಿಲ ಹೊರಹೊಮ್ಮುವಿಕೆ ಮಾದರಿ ಹೊಂದಿದ್ದು ಶೇ.95ರಷ್ಟು ಶಕ್ತಿಯ ಅಗತ್ಯಗಳನ್ನು ನವೀಕರಿಸಬಲ್ಲ ಮೂಲಗಳಿಂದ ಪಡೆಯುತ್ತದೆ. ಎಂ.ಎಸ್.ಎಸ್.ಎಸ್.ಎಲ್. 2050ರ ವೇಳೆಗೆ ನೆಟ್-ಝೀರೋ ಉಕ್ಕು ಉತ್ಪಾದನೆ ಯನ್ನು ಸಾಧಿಸಲು ಬದ್ಧವಾಗಿದೆ ಮತ್ತು ಈ ವಿಸ್ತರಣೆಯು ಪ್ರಮುಖ ಮೈಲಿಗಲ್ಲಾಗಿದೆ. ಭವಿಷ್ಯದ ಹಂತಗಳು ಹೈಡ್ರೋಜ್- ಸನ್ನದ್ಧ ಮೂಲಸೌಕರ್ಯ ಮತ್ತು ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ ಗಳನ್ನು ಹೊಂದಿರುತ್ತವೆ.