ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ನಾರಾಯಣ ಸೇವಾ ಸಂಸ್ಥಾನದಿಂದ ದಕ್ಷಿಣ ಭಾರತದ 700ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ

ದಿವ್ಯಾಂಗರು ಮತ್ತವರ ಕುಟುಂಬಕ್ಕೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾ ಗಿತ್ತು. ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಉಸ್ತುವಾರಿ ಖುಬಿಲಾಲ್ ಮೆನಾರಿಯಾ, ಮುಂಬೈ ಶಾಖೆ ಮುಖ್ಯಸ್ಥ ಲಲಿತ್ ಲೋಹರ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ವೈಷ್ಣವ್, ಗಾನವಿ ಮತ್ತು ಮಾಧ್ಯಮ ಸಂಯೋಜಕರಾದ ಚಂದ್ರಶೇಖರಯ್ಯ ಮತ್ತಿತರರು ದಿವ್ಯಾಂಗರಿಗೆ ನೆರವಾದರು.

ದಕ್ಷಿಣ ಭಾರತದ 700 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ

Profile Ashok Nayak Apr 27, 2025 11:20 PM

ಬೆಂಗಳೂರು: ನಾರಾಯಣ ಸೇವಾ ಸಂಸ್ಥಾನದಿಂದ ಬೆಂಗಳೂರಿನಲ್ಲಿ ಉಚಿತ ನಾರಾಯಣ್ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಜೋಡಣಾ ಶಿಬಿರದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 700 ಕ್ಕೂ ಅಧಿಕ ಮಂದಿಗೆ ಕೃತಕ ಅಂಗಾಂಗ ಜೋಡಣೆ ಮಾಡಲಾಯಿತು. ಬಸವನ ಗುಡಿಯ ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ ಮೊದಲೇ ನೋಂದಾಯಿಸಿ ಕೊಂಡ ಅಂಗವಿಕಲರಿಗೆ ಉಚಿತವಾಗಿ ಕೃತಕ ಅಂಗಗಳನ್ನು ಜೋಡಿಸಲಾಯಿತು. ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಶಾಖೆಯ ಮುಖ್ಯಸ್ಥ ವಿನೋದ್ ಜೈನ್. ನಿರ್ದೇಶಕ ಭಗವಾನ್ ಪ್ರಸಾದ್ ಗೌರ್ ನೇತೃತ್ವದಲ್ಲಿ ಕೃತಕ ಅಂಗಾಂಗ ಜೋಡಿಸಲಾಯಿತು.

ದಿವ್ಯಾಂಗರು ಮತ್ತವರ ಕುಟುಂಬಕ್ಕೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾ ಗಿತ್ತು. ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಉಸ್ತುವಾರಿ ಖುಬಿಲಾಲ್ ಮೆನಾರಿಯಾ, ಮುಂಬೈ ಶಾಖೆ ಮುಖ್ಯಸ್ಥ ಲಲಿತ್ ಲೋಹರ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ವೈಷ್ಣವ್, ಗಾನವಿ ಮತ್ತು ಮಾಧ್ಯಮ ಸಂಯೋಜಕರಾದ ಚಂದ್ರಶೇಖರಯ್ಯ ಮತ್ತಿತರರು ದಿವ್ಯಾಂಗರಿಗೆ ನೆರವಾದರು.

ಇದನ್ನೂ ಓದಿ: Grater Bangalore: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ನಾರಾಯಣ ಸೇವಾ ಸಂಸ್ಥೆ 4 ದಶಕಗಳಿಂದ ದಿವ್ಯಾಂಗರ ಪರವಾಗಿ ಕೆಲಸ ಮಾಡುತ್ತಿದೆ. ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ 1,050 ಕ್ಕೂ ಹೆಚ್ಚು ಮಂದಿ ಕೃತಕ ಅಂಗಾಂಗ ಜೋಡಣೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ರಸ್ತೆ ಅಥವಾ ಇತರ ಅಪಘಾತಗಳಿಂದಾಗಿ ಕೈಕಾಲುಗಳನ್ನು ಕಳೆದುಕೊಂಡ 700 ಮಂದಿಯನ್ನು ಅಂಗಾಂಗ ಜೋಡಣೆಗಾಗಿ ಹೆಸರು ನೋಂದಾಯಿಸಿ ಕೊಳ್ಳಾಗಿತ್ತು. ಜರ್ಮನ್ ತಂತ್ರಜ್ಞಾನದಿಂದ ತಯಾರಿಸಿದ ನಾರಾಯಣ್ ಲಿಂಬ್ಸ್ ಅಳವಡಿಸ ಲಾಯಿತು. ಫಿಟ್ಮೆಂಟ್ ನಂತರ ಸಂಸ್ಥಾನದ 60 ಸದಸ್ಯರ ಸಮರ್ಪಿತ ತಂಡದ ಮಾರ್ಗದರ್ಶನದಲ್ಲಿ ಸರಿಯಾದ ನಡಿಗೆ ತರಬೇತಿ ನೀಡಲಾಯಿತು. ಈ ಮಾನವೀಯ ಸೇವೆಗಾಗಿ 500 ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರು, ಸಮುದಾಯ ಮುಖಂಡರು ಮತ್ತು ಪ್ರಮುಖ ನಾಗರಿಕರು ಭಾಗವ ಹಿಸಲಿದ್ದಾರೆ.

ನಾರಾಯಣ ಸೇವಾ ಸಂಸ್ಥಾನವು ದೇಶದ ವಿವಿಧ ಪ್ರದೇಶಗಳಲ್ಲಿ ಪ್ರತಿ ವಾರ ಇದೇ ರೀತಿಯ ಶಿಬಿರಗಳನ್ನು ನಡೆಸುತ್ತದೆ. ಅಂತರರಾಷ್ಟ್ರೀಯವಾಗಿ, ಕೀನ್ಯಾ, ಉಗಾಂಡಾ, ಮೇರು, ತಾಂಜಾನಿಯಾ ಮತ್ತು ನೇಪಾಳದಂತಹ ದೇಶಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಲಾಗಿದೆ. ಪ್ರತಿ ತಿಂಗಳು ಸರಾಸರಿ 1,800 ಕೃತಕ ಅಂಗಗಳನ್ನು ಅಳವಡಿಸಲಾಗುತ್ತದೆ.

ನಾರಾಯಣ ಸೇವಾ ಸಂಸ್ಥಾನವು ಎಲ್ಲಾ ಸಹಾನುಭೂತಿಯುಳ್ಳ ವ್ಯಕ್ತಿಗಳು ಮುಂದೆ ಬಂದು ಈ ಉದಾತ್ತ ಉದ್ದೇಶವನ್ನು ಬೆಂಬಲಿಸುವಂತೆ ಮನವಿ ಮಾಡುತ್ತದೆ. ಉದ್ಘಾಟನಾ ಸಮಾರಂಭ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ. ಈ ಸೇವೆ ಮತ್ತು ಮನ್ನಣೆಯ ಕಾರ್ಯಕ್ರಮವು ಅನೇಕರಿಗೆ ಸ್ಫೂರ್ತಿ ನೀಡುವ ನಿರೀಕ್ಷೆಯಿದೆ.

1985 ರಲ್ಲಿ "ಮಾನವೀಯತೆಯ ಸೇವೆಯೇ ದೇವರ ಸೇವೆ" ಎಂಬ ಮನೋಭಾವದೊಂದಿಗೆ ಸ್ಥಾಪನೆ ಯಾದ ನಾರಾಯಣ ಸೇವಾ ಸಂಸ್ಥಾಪಕ ಕೈಲಾಶ್ ಮಾನವ್ ಅವರನ್ನು ನಿಸ್ವಾರ್ಥ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ಅವರು ವೈದ್ಯ ಕೀಯ ನೆರವು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಕ್ರೀಡಾ ಅಕಾಡೆಮಿಗಳ ಮೂಲಕ ಲಕ್ಷಾಂತರ ಅಂಗವಿಕಲರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಲಪಡಿಸುವ ಮೂಲಕ ಸಬಲೀಕರಣಗೊಳಿಸಿದ್ದಾರೆ. 2023 ರಲ್ಲಿ, ಅವರಿಗೆ ರಾಷ್ಟ್ರಪತಿಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದರು. ಇಲ್ಲಿಯವರೆಗೆ, ಸಂಸ್ಥೆಯು 40,000 ಕ್ಕೂ ಹೆಚ್ಚು ಕೃತಕ ಅಂಗಗಳನ್ನು ಅಳವಡಿ ಸಿದೆ.