ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Techie Death: ಗರ್ಭಿಣಿ ಟೆಕ್ಕಿಯ ಅಸಹಜ ಸಾವು, ಪತಿಯೇ ಕೊಂದಿರುವ ಶಂಕೆ

Self Harming: ಕಳೆದ ಹಲವು ತಿಂಗಳ ಹಿಂದೆ ಶಿಲ್ಪ ಹಾಗೂ ಪತಿ ಮನೆಯವರ ನಡುವೆ ಜಗಳ ನಡೆದು, ಶಿಲ್ಪ ತವರು ಮನೆಗೆ ಬಂದಿದ್ದರು. ಪತಿ ಮನೆಯವರು ರಾಜಿ ಪಂಚಾಯ್ತಿ ಮಾಡಿ ಮತ್ತೆ ಗಂಡನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಮೃತ ಶಿಲ್ಪ

ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಒಂದೂವರೆ ತಿಂಗಳ ಗರ್ಭಿಣಿ ಟೆಕ್ಕಿ ಅಸಹಜ ಸಾವಿಗೆ (Pregnant Techie Death) ತುತ್ತಾಗಿದ್ದಾರೆ. ಹುಬ್ಬಳ್ಳಿ ಮೂಲದ ಶಿಲ್ಪ ಎನ್ನುವವರು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಪ್ರವೀಣ್ ಎಂಬವರ ಜೊತೆಗೆ ಶಿಲ್ಪ ಮದುವೆಯಾಗಿದ್ದರು. ಪತಿ- ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಇದು ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ (murder) ಎಂದು ಶಿಲ್ಪ ಪೋಷಕರು ಗಂಭೀರವಾದ ಆರೋಪ ಮಾಡಿದ್ದಾರೆ.

ಶಿಲ್ಪ ಕೊಲೆಯ ಬಗ್ಗೆ ಆಕೆಯ ಪತಿ ಪ್ರವೀಣ್, ಅತ್ತೆ ಶಾಂತ ಹಾಗೂ ನಾದಿನಿ ಪ್ರಿಯ ವಿರುದ್ಧ ಶಿಲ್ಪ ಪೋಷಕರು ಆರೋಪ ಮಾಡಿದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಶಿಲ್ಪ ಹಾಗೂ ಪತಿ ಮನೆಯವರ ನಡುವೆ ಜಗಳ ನಡೆದು, ಶಿಲ್ಪ ತವರು ಮನೆಗೆ ಬಂದಿದ್ದರು. ಪತಿ ಮನೆಯವರು ರಾಜಿ ಪಂಚಾಯ್ತಿ ಮಾಡಿ ಮತ್ತೆ ಗಂಡನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ದಂಪತಿಗೆ ಈಗಾಗಲೇ ಒಂದು ಮಗುವಿದೆ. ಘಟನೆ ಕುರಿತು ಎಸ್.ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎನ್‌ಸಿಸಿ ದೈಹಿಕ ಪರೀಕ್ಷೆ ವೇಳೆ ಹೃದಯಾಘಾತ; ಧಾರವಾಡದ ಐಐಟಿ ವಿದ್ಯಾರ್ಥಿ ಸಾವು

ಧಾರವಾಡ: ಧಾರವಾಡದ ಐಐಟಿಯಲ್ಲಿ ಎನ್‌ಸಿಸಿ ಆಯ್ಕೆಗೆ ದೈಹಿಕ ಪರೀಕ್ಷೆ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ (Heart Attack) ನಡೆದಿದೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಮೃತ ವಿದ್ಯಾರ್ಥಿ. ಈತ ಮೆಕ್ಯಾನಿಕಲ್ ಮೆಟೀರಿಯಲ್ಸ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ (ಎಂ-ಟೆಕ್) ವ್ಯಾಸಂಗ ಮಾಡುತ್ತಿದ್ದ.

ಎರಡು ದಿನಗಳ ಹಿಂದೆ ಐಐಟಿ ಕ್ಯಾಂಪಸ್‌ನಲ್ಲಿ ಎನ್‌ಸಿಸಿ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಸ್ತಿತ್ವ ಗುಪ್ತಾ ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಕೂಡಲೇ ಕ್ಯಾಂಪಸ್‌ನ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ನಂತರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಸಂಜೆವರೆಗೂ ಆರೋಗ್ಯವಾಗಿಯೇ ಇದ್ದ ವಿದ್ಯಾರ್ಥಿ ರಾತ್ರಿ ವೇಳೆಗೆ ಮತ್ತೆ ಹೃದಯಾಘಾತವಾಗಿದೆ. ಈ ವೇಳೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆಂದು ತಿಳಿದುಬಂದಿದೆ.

ಈ ನಡುವೆ ಅಧಿಕಾರಿಗಳು ಮೃತ ವಿದ್ಯಾರ್ಥಿಯ ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದು, ಬಿಹಾರದ ಹುಟ್ಟೂರು ಗೋರ್ಗಾನ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Building Collapses: ಮಹಾರಾಷ್ಟ್ರದಲ್ಲಿ ಅನಧಿಕೃತ ಕಟ್ಟಡ ಕುಸಿತ; 15 ಮಂದಿ ಸಾವು, ಹಲವರಿಗೆ ಗಾಯ

ಹರೀಶ್‌ ಕೇರ

View all posts by this author