ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Building Collapses: ಮಹಾರಾಷ್ಟ್ರದಲ್ಲಿ ಅನಧಿಕೃತ ಕಟ್ಟಡ ಕುಸಿತ; 15 ಮಂದಿ ಸಾವು, ಹಲವರಿಗೆ ಗಾಯ

ಮಹಾರಾಷ್ಟ್ರದ ವಿರಾರ್‌ನಲ್ಲಿ ಬುಧವಾರ ಮುಂಜಾನೆ (Building Collapse) ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಹಿಂಭಾಗದ ಭಾಗ ಪಕ್ಕದ ಖಾಲಿ ಚಾಲ್ ಮೇಲೆ ಕುಸಿದು ಬಿದ್ದದೆ. ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಅನಧಿಕೃತ ಕಟ್ಟಡ ಕುಸಿತ; 15 ಮಂದಿ ಸಾವು, ಮುಂದುವರಿದ ಕಾರ್ಯಾಚರಣೆ

Vishakha Bhat Vishakha Bhat Aug 28, 2025 11:44 AM

ಮುಂಬೈ: ಮಹಾರಾಷ್ಟ್ರದ ವಿರಾರ್‌ನಲ್ಲಿ ಬುಧವಾರ ಮುಂಜಾನೆ (Building Collapse) ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಹಿಂಭಾಗದ ಭಾಗ ಪಕ್ಕದ ಖಾಲಿ ಚಾಲ್ ಮೇಲೆ ಕುಸಿದು ಬಿದ್ದದೆ. ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳು ಸೇರಿದ್ದಾರೆ ಮತ್ತು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ 20 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಘಟಕಗಳು ಅವಶೇಷಗಳಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಿವೆ. ಕೆಲವು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಇಂದು ರಾಣಿ ಜಾಖರ್ ತಿಳಿಸಿದ್ದಾರೆ. ಏಕಾಏಕಿ ಕಟ್ಟಡ ಕುಸಿತದಿಂದಾಗಿ, ಹಲವಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ, ಅವರೆಲ್ಲರನ್ನೂ ಚಂದನ್ಸರ್ ಸಮಾಜಮಂದಿರಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಆಹಾರ, ನೀರು ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಹಿ ಓಂಕಾರ್ ಜೋವಿಲ್ (24), ಆಕೆಯ ಮಗಳು ಉತ್ಕರ್ಷ (1), ಲಕ್ಷ್ಮಣ್ ಕಿಸ್ಕು ಸಿಂಗ್ (26), ದಿನೇಶ್ ಪ್ರಕಾಶ್ ಸಪ್ಕಲ್ (43), ಸುಪ್ರಿಯಾ ನಿವಾಲ್ಕರ್ (38), ಅರ್ನವ್ ನಿವಾಲ್ಕರ್ (11) ಮತ್ತು ಪಾರ್ವತಿ ಸಪ್ಕಾಲ್ ಸೇರಿದಂತೆ ಏಳು ಮಂದಿ ಮೃತರನ್ನು ಗುರುತಿಸಲಾಗಿದೆ. ಇನ್ನೂ ಹಲವರ ಶವವನ್ನು ಹೊರ ತೆಗೆಯಲಾಗುತ್ತಿದೆ. ಅಪಘಾತದ ಸ್ಥಳದಲ್ಲಿ ಒಟ್ಟು 50 ಫ್ಲಾಟ್‌ಗಳಿದ್ದು, ಕುಸಿದ ಭಾಗದಲ್ಲಿ 12 ಅಪಾರ್ಟ್‌ಮೆಂಟ್‌ಗಳಿವೆ. ಪಕ್ಕದ ವಸತಿ ಕಟ್ಟಡಗಳಲ್ಲಿನ ಹತ್ತಿರದ ನಿವಾಸಿಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Landslide: ಜಮ್ಮು-ಕಾಶ್ಮೀರದಲ್ಲಿ ಭಾರೀ ಭೂ ಕುಸಿತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ

ಏತನ್ಮಧ್ಯೆ, ವಿವಿಎಂಸಿ ದೂರು ದಾಖಲಿಸಿದ ನಂತರ ಪೊಲೀಸರು ಬಿಲ್ಡರ್ ನಿತಲ್ ಗೋಪಿನಾಥ್ ಸಾನೆ ಅವರನ್ನು ಬಂಧಿಸಿದ್ದಾರೆ. ಭೂಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ (ಎಂಆರ್‌ಟಿಪಿ) ಕಾಯ್ದೆಯ ಸೆಕ್ಷನ್ 52, 53 ಮತ್ತು 54 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 105 ರ ಅಡಿಯಲ್ಲಿ ಉಲ್ಲಂಘನೆ ಆರೋಪಗಳು ಸೇರಿವೆ. ಸದ್ಯಕ್ಕೆ, ಅವಶೇಷಗಳ ತೆರವು ಕಾರ್ಯ ಇನ್ನೂ ನಡೆಯುತ್ತಿದೆ. ಮೊದಲ ಕೆಲವು ಗಂಟೆಗಳ ಕಾಲ, ನಾಗರಿಕ ತಂಡಗಳು ಮತ್ತು NDRF ನ ಎರಡು ಘಟಕಗಳು ಅವಶೇಷಗಳನ್ನು ತೆಗೆಯುತ್ತಿವೆ ಎಂದು ವಿವಿಎಂಸಿ ಸಹಾಯಕ ಆಯುಕ್ತ ಗಿಲ್ಸನ್ ಗೊನ್ಸಾಲ್ವಿಸ್ ತಿಳಿಸಿದ್ದಾರೆ.