ಮಲ್ಟಿಪಲ್ ಸ್ಕ್ಲಿರೋಸಿಸ್ (ಎಂಎಸ್) ಇರುವ ಜನರ ಮೂಕ ಹೋರಾಟಗಳನ್ನು “ವಾಕ್ ಇನ್ ಮೈ ಶೂಸ್” ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿ
ಜಾಗತಿಕವಾಗಿ ಲಕ್ಷಗಟ್ಟಲೆ ಜನರು ಮತ್ತು ಅಂದಾಜು 2 ಲಕ್ಷ ಭಾರತೀಯರು ಮಲ್ಟಿಪಲ್ ಸ್ಕ್ಲಿರೋಸಿಸ್ ಎನ್ನುವ ಒಂದು ಜೀವ-ಮಿತಗೊಳಿಸುವ ನರ ಅಸ್ವಸ್ಥತೆಯೊಂದಿಗೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ಕಾಯಿಲೆಯು ಅವರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದು ನಡೆಯು ವುದು, ಅಡುಗೆ ಮಾಡುವುದು, ಸ್ನಾನ ಮಾಡುವುದು ಅಥವಾ ಮಗುವನ್ನು ಹಿಡಿಯಲು ಸಾಧ್ಯವಾಗದ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ


ಬೆಂಗಳೂರು: ಜಾಗತಿಕವಾಗಿ ಲಕ್ಷಗಟ್ಟಲೆ ಜನರು ಮತ್ತು ಅಂದಾಜು 2 ಲಕ್ಷ ಭಾರತೀಯರು ಮಲ್ಟಿ ಪಲ್ ಸ್ಕ್ಲಿರೋಸಿಸ್ ಎನ್ನುವ ಒಂದು ಜೀವ-ಮಿತಗೊಳಿಸುವ ನರ ಅಸ್ವಸ್ಥತೆಯೊಂದಿಗೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ಕಾಯಿಲೆಯು ಅವರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದು ನಡೆಯುವುದು, ಅಡುಗೆ ಮಾಡುವುದು, ಸ್ನಾನ ಮಾಡುವುದು ಅಥವಾ ಮಗುವನ್ನು ಹಿಡಿಯಲು ಸಾಧ್ಯವಾಗದ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ. ಸರಳ ದಿನ ನಿತ್ಯದ ಕೆಲಸ-ಕಾರ್ಯಗಳನ್ನು ಸಹ ನಡೆಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರ ದಿನ ನಿತ್ಯದ ಈ ಸವಾಲು, ಹೋರಾಟ ಯಾರಿಗೂ ಕಾಣಿಸುವುದಿಲ್ಲ ಮತ್ತು ಅವರ ಪ್ರತಿದಿನದ ಹೋರಾಟ ಅವರಿಗೆ ಅದೃಶ್ಯ ಬೆಟ್ಟವನ್ನು ಹತ್ತುವುದಂತೆ ಅವರಿಗೆ ಭಾಸವಾಗುತ್ತದೆ.
ಎಂಎಸ್ ರೋಗಿಗಳು ಅನುಭವಿಸುವ ತೊಳಲಾಟವನ್ನು ಮತ್ತೊಬ್ಬರು ಅನುಭವಿಸಲು ಸಾಧ್ಯ ವಿಲ್ಲ, ಅವರ ಕಣ್ಣಿಗೆ ಕಾಣಿಸುವುದಿಲ್ಲ. ಎಂಎಸ್ ಅವರನ್ನು ಬೆಳಕಿಗೆ ತರಲು, ರಾಷ್ ಫಾರ್ಮಾ, ಇಂಡಿಯಾ, ಭಾರತೀಯ ಮಲ್ಟಿಪಲ್ ಸ್ಕ್ಲಿರೋಸಿಸ್ ಸೊಸೈಟಿ(MSSI) ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಈ ಜೀವ-ಮಿತಗೊಳಿಸುವ ನರ ಅಸ್ವಸ್ಥತೆಯೊಂದಿಗೆ ಜೀವನಗಳನ್ನು ನಡೆಸುತ್ತಿರುವ ರೋಗಿಗಳ ಅದೃಶ್ಯ ಹೋರಾಟಗಳನ್ನು ಬೆಳಕಿಗೆ ತರಲು ಸಾರ್ವಜನಿಕ ಆರೋಗ್ಯ ಜಾಗೃತಿಯ ಉಪಕ್ರಮವಾಗಿ ವಾಕ್ ಇನ್ ಮೈ ಶೂಸ್ ಅನ್ನು ಪ್ರಸ್ತುತಪಡಿಸುತ್ತಿದೆ.
ಇದನ್ನೂ ಓದಿ: Bengaluru Power Cut: ಆ.23, 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಆಗಸ್ಟ್ 20 ರಿಂದ 22 ರವರೆಗೆ ಬೆಂಗಳೂರಿನ ಬ್ರೂಕ್‌ಫೀಲ್ಡ್ ಇಕೋಸ್ಪೇಸ್ ಪಾರ್ಕ್, ಬೆಳ್ಳಂದೂರು (1C ಹತ್ತಿರ) ನಲ್ಲಿರುವ ಸಿಮ್ಯುಲೇಶನ್ ವಲಯದಲ್ಲಿ ಅಳವಡಿಸಿದ #ವಾಕ್ ಇನ್ ಮೈ ಶೂಸ್ ವಲಯಕ್ಕೆ ಭೇಟಿ ನೀಡಿ, ಎಂಎಸ್ ಜೊತೆಗೆ ಜೀವನ ನಡೆಸುವ ಅವರ ಅನುಭವವನ್ನು ಪಡೆಯಬಹುದು. ಇದಲ್ಲದೆ ಆಗಸ್ಟ್ 22 ರಿಂದ 24 ರವರೆಗೆ ಮುಂಬೈ ಫೀನಿಕ್ಸ್ ಮಾರ್ಕೆಟ್‌ಸಿಟಿ, ಕುರ್ಲಾ (ಏಟ್ರಿಯಮ್ 5, ಕೆಳನೆಲ ಮಹಡಿ) ನಲ್ಲಿ ಹಾಗೂ ನವದೆಹಲಿಯ ಸಾಕೇತ್ ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್ ನಲ್ಲಿ (H&M ವಿಂಗ್, ನೆಲಮಹಡಿ) ಆಗಸ್ಟ್ 22 ರಿಂದ 24ರವರೆಗೆ ಭೇಟಿ ನೀಡಬಹುದು. ಇದಲ್ಲದೆ, ಈ ಸಿಮ್ಯುಲೇಶನ್ ವಲಯವು ಎಂಎಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿರುವ ನಾಲ್ಕು ಲಕ್ಷಣಗಳಾದ - ಸಮತೋಲನ ಕಳೆದುಕೊಳ್ಳುವುದು, ಮೋಟಾರ್ ಅಸ್ವಸ್ಥತೆ, ಅಸ್ಪಷ್ಟ ದೃಷ್ಟಿ ಮತ್ತು ಸಂವೇದನೆಯ ನಷ್ಟ ರೀತಿಯ ಸೆನ್ಸರಿ ಅನುಭವವನ್ನು ಪುನರ್ರಚಿಸುವ ಮೂಲಕ ಅಲ್ಲಿಗೆ ಬಂದಿರುವ ಸಂದರ್ಶಕ ರಿಗೆ ‘ಅನುಭವದ ಮೂಲಕ ಶಿಕ್ಷಣ’ವನ್ನು ಒದಗಿಸುತ್ತದೆ.
ನೀವು ಬೇಕಾದರೆ #ವಾಕ್ ಇನ್ ಮೈ ಶೂಸ್ ಬಳಸಿ ಎಂಎಸ್ ರೋಗಿಗಳ ಅದೃಶ್ಯ ಹೋರಾಟಗಳಿಗೆ ನಿಮ್ಮ ಬೆಂಬಲವನ್ನು ಹಂಚಿಕೊಳ್ಳಲು ನಿಮ್ಮ ಧ್ವನಿಯನ್ನು ನೀಡಬಹುದು. ಪ್ರತಿ ಪೋಸ್ಟ್, ಟ್ವೀಟ್ ಅಥವಾ ರೀಲ್ ಎಂಎಸ್ ರೋಗಿಗಳಲ್ಲಿನ ಮೌನವನ್ನು ಮುರಿಯಲು ಸಹಾಯ ಮಾಡುತ್ತದೆ ಮತ್ತು ಅವರ ಹೋರಾಟ ಇನ್ನು ಅಪರಿಚಿತವಾಗಿರದಂತೆ ಖಚಿತಪಡಿಸಿಕೊಳ್ಳುತ್ತದೆ. ಸೆನ್ಸರಿ ಸಿಮ್ಯುಲೇಶನ್ ಕಿಯೋಸ್ಕ್ ಗಳ ಜೊತೆಯಲ್ಲಿ, ಎಂಎಸ್ ಕುರಿತಾಗಿ ಅಧಿಕೃತ, ವಿಶ್ವಾಸಾರ್ಹ ಮತ್ತು ವೈದ್ಯಕೀಯವಾಗಿ ಪರಿಶೀಲಿಸದ ಮಾಹಿತಿಗಾಗಿ ತಿಳಿವಳಿಕೆ ಕೇಂದ್ರವಾಗಿರುವ www.walkinmyshoes.in ಸಹ ಆರಂಭಿಸಲಾಗಿದೆ. ಜನರು ಪುರಾವೆ ಆಧಾರಿತ ಆರೋಗ್ಯ ಮಾಹಿತಿಯ ಮೇಲೆ ಕಾರ್ಯನಿರ್ವಹಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮೂಲಕ www.walkinmyshoes.in ಎಂಎಸ್ ಕುರಿತಾಗಿ ಸಾರ್ವಜನಿಕ ಸಾಕ್ಷರತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಒಂದು ನಂಬಿಕೆಯುತ ಡಿಜಿಟಲ್ ವೇದಿಕೆಯಾಗಲು ಉದ್ದೇಶಿಸಿದೆ.
ರಾಷ್ ಫಾರ್ಮಾದ ಭಾರತ ಮತ್ತು ನೆರೆಹೊರೆಯ ಮಾರುಕಟ್ಟೆಗಳ ನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆಗಿರುವ ರಜ್ಜಿ ಮೆಹ್ದ್ವಾನ್ ಮಾತನಾಡಿ, ನಾವು ಔಷಧಗಳನ್ನು ಮೀರಿದ ಧ್ಯೇಯವನ್ನು ಹೊಂದಿದ್ದೇವೆ. ನಾವು ಮಲ್ಟಿಪಲ್ ಸ್ಕ್ಲಿರೋಸಿಸ್ ರೀತಿಯ ಜೀವ-ಬೆದರಿಕೆಯ ಮತ್ತು ದೀರ್ಘ ಅಸ್ವಸ್ಥತೆಗಳನ್ನು ಹೇಗೆ ನೋಡಲಾಗುತ್ತದೆ, ರೋಗ ನಿರ್ಣಯ ಮಾಡಲಾಗುತ್ತದೆ ಮತ್ತು ನಿರ್ವಹಣೆ ಮಾಡಲಾಗುತ್ತದೆ ಎನ್ನುವುದನ್ನು ಮರು ಊಹಿಸಲು ಬದ್ಧವಾಗಿದ್ದೇವೆ. #ವಾಕ್ ಇನ್ ಮೈ ಶೂಸ್ ನೊಂದಿಗೆ ನಾವು ಕೇವಲ ಜಾಗೃತಿಯನ್ನು ಮಾತ್ರ ಮೂಡಿಸುತ್ತಿಲ್ಲ, ನಾವು ಸಹಾನುಭೂತಿಯನ್ನು ತರಲು ಪ್ರಯತ್ನಿಸುತ್ತಿದ್ದೇವೆ, ರೋಗಿಗಳ ಧ್ವನಿಗಳನ್ನು ಬೆಂಬಲಿಸುತ್ತಿದ್ದೇವೆ ಮತ್ತು ಆರೋಗ್ಯಾರೈಕೆ ವ್ಯವಸ್ಥೆಯಾದ್ಯಂತ ಅರ್ಥಪೂರ್ಣ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. MSSI ಜೊತೆಗೆ ಪಾಲುದಾರಿಕೆ ಮಾಡುವ ಮೂಲಕ, ನಾವು ಎಂಎಸ್ ನಲ್ಲಿರುವ ಮೌನವನ್ನು ಮುರಿಯಲು ಸಹಾನುಭೂತಿಯೊಂದಿಗೆ ವಿಜ್ಞಾನವನ್ನು ಜೋಡಿಸುತ್ತಿದ್ದೇವೆ. ಈ ಮೂಲಕ ಸಕಾಲಿಕ ಮಧ್ಯಸ್ಥಿಕೆ ನಿರ್ವಹಿಸಿ ಒಂದು ಅಂತರ್ಗತ, ರೋಗಿ-ಕೇಂದ್ರಿತ ವಿಧಾನಕ್ಕಾಗಿ ಒತ್ತು ನೀಡುತ್ತಿದ್ದೇವೆ. ಇಲ್ಲಿ ಎಂಎಸ್ ಇರುವ ಯಾವುದೇ ವ್ಯಕ್ತಿಯು ಹಿಂದೆ ಉಳಿಯಲು ಬಿಡುವುದಿಲ್ಲ. ಇದು ಕೇವಲ ಒಂದು ಅಭಿಯಾನವಲ್ಲ - ಇದು ಕ್ರಮಕ್ಕಾಗಿ ಒಂದು ಸ್ಪಷ್ಟ ಕರೆಯಾಗಿದೆ.” ಎಂದರು.
ಸಾಮಾನ್ಯವಾಗಿ ಎಂಎಸ್ 20 ರಿಂದ 10 ವಯಸ್ಸಿನ ಜನರಲ್ಲಿ ಕಂಡುಬರುತ್ತದೆ, ಈ ವಯಸ್ಸು ವೃತ್ತಿಜೀವನವನ್ನು ನಿರ್ಮಿಸುವ, ಆಸೆಗಳನ್ನು ಈಡೇರಿಸುವ ಮತ್ತು ಕುಟುಂಬಗಳನ್ನು ಶುರು ಮಾಡುವ ಸಮಯವಾಗಿದೆ. ಯುವ ಜನರಲ್ಲಿ ಆಘಾತಕಾರಿಯಲ್ಲದ ಅಸಮರ್ಥತೆಗೆ ಮುಖ್ಯ ಕಾರಣ ವಾಗಿದೆ ಮತ್ತು ಇದನ್ನು ಹೀಗೆಯೇ ಬಿಟ್ಟರೆ, ಇದು ಗಂಭೀರ ಮತ್ತು ಜೀವ-ಮಿತಗೊಳಿಸುವ ಅಸಮರ್ಥತೆಗೆ ತಿರುಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಎಂಎಸ್ ಎರಡರಿಂದ ಮೂರು ಪಟ್ಟು ಹೆಚ್ಚಾಗಿ ಕಂಡುಬರುತ್ತದೆ, ಹಾಗಾಗಿ ಇದು ಅವರಿಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡುತ್ತದೆ- ಇದು ಅವರಲ್ಲಿ ಗರ್ಭಿಣಿಯಾಗುವ ಸಾಮರ್ಥ್ಯ, ಗರ್ಭಿಣಿ ಸಮಸ್ಯೆ ಮತ್ತು ಮಗುವಿನ ಆರೈಕೆಯ ಮೇಲೆ ದೊಡ್ಡ ಸವಾಲು ನೀಡುತ್ತದೆ.
ಇದೆ ವೇಳೆಗೆ ಮಾತಾಡಿದ MSSI ಉಪಾಧ್ಯಕ್ಷರಾದ ಶ್ರೀ. ಅರುಣ್ ಮೋಹನ್ ಮಾತನಾಡಿ, “ಇಡೀ ಎಂಎಸ್ ವ್ಯವಸ್ಥೆಯು ಸವಾಲುಗಳೊಂದಿಗೆ ತುಂಬಿದೆ. ರೋಗದ ನಿಖರ ಡೇಟಾದಿಂದ ಮತ್ತು ಅಸಮರ್ಪಕ ವಿಮೆ ವ್ಯಾಪ್ತಿಯಿಂದ ಹಿಡಿದು ಸ್ಪಷ್ಟ ಅಸಮರ್ಥತೆ ಮೌಲ್ಯಮಾಪನ ಮಾರ್ಗ ಸೂಚಿಗಳ ಇಲ್ಲದಿರುವಿಕೆ ಮತ್ತು ಎಂಎಸ್ ಚಿಕಿತ್ಸೆ ನೀಡುವ ಸಂಖ್ಯೆಯಲ್ಲಿ ಅಸಮರ್ಪಕತೆವರೆಗೆ ಈ ಸವಾಲುಗಳು ಕಾಣಿಸುತ್ತವೆ. ಅಧಿಕ ಪರಿಣಾಮಕಾರಿ ಆರಂಭಿಕ ಚಿಕಿತ್ಸೆಯಿಂದಾಗಿ ಆಸ್ಪತ್ರೆಗೆ ಅನೇಕ ಸಲ ಭೇಟಿ ನೀಡುವ ಅಗತ್ಯತೆ, ಪುನರ್ವಸತಿ ಮತ್ತು ದೀರ್ಘಾವಧಿಯ ಆರೈಕೆಯನ್ನು ಕಡಿಮೆ ಮಾಡುತ್ತದೆ, ಈ ಮೂಲಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಮೂಲಸೌಕರ್ಯಗಳು ಸಹ ಕಡಿಮೆಯಾಗುತ್ತವೆ. ಎಂಎಸ್ ಚಿಕಿತ್ಸೆ ನೀಡುವಲ್ಲಿನ ಮುಖ್ಯ ಗುರಿ ಎಂದರೆ ರೋಗದ ಪ್ರಗತಿಯನ್ನು ನಿಧಾನ ಮಾಡುವುದು, ಅಸಮರ್ಥತೆಯನ್ನು ತಡೆಹಿಡಿಯುವು ದಾಗಿದೆ. ಇದಲ್ಲದೆ ಹೆಚ್ಚು ಅನುಕೂಲಕರವಾದ ಔಷಧಿ ಡೋಸಿಂಗ್ ವೇಳಾಪಟ್ಟಿಯನ್ನು ಹೊಂದಿ ರುವುದರಿಂದ ಉತ್ತಮ ಚಿಕಿತ್ಸೆಯ ಅನುಸರಣೆಗೆ, ಕೆಲಸ, ಶಿಕ್ಷಣ ಅಥವಾ ಕುಟುಂಬದ ಜವಾಬ್ದಾರಿ ಗಳಿಗೆ ಕಡಿಮೆ ಅಡೆತಡೆಯೊಂದಿಗೆ ಉತ್ತಮ ಗುಣಮಟ್ಟದ ಜೀವನಕ್ಕೆ ಕಾರಣವಾಗುತ್ತದೆ. ವಾಕ್ ಇನ್ ಶೂಸ್ ಅಭಿಯಾನವು ಇದೇ ದಿಕ್ಕಿನಲ್ಲಿಡುವ ಒಂದು ಮುಂದಿನ ಹೆಜ್ಜೆಯಾಗಿದೆ.” ಎಂದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ನರರೋಗ ವಿಭಾಗಗಳ ಮುಖ್ಯಸ್ಥರಾಗಿರುವ ಡಾ. ಪ್ರಮೋದ್ ಕೃಷ್ಣನ್ ಮಾತನಾಡಿ, “ಮಲ್ಟಿಪಲ್ ಸ್ಕ್ಲಿರೋಸಿಸ್ ಚಿಕಿತ್ಸೆಯಲ್ಲಿ ನಾವು ಒಂದು ಕ್ರಾಂತಿಕಾರಿ ಕ್ಷಣ ದಲ್ಲಿದ್ದೇವೆ. ಸಾಂಪ್ರದಾಯಿಕ ಎಲ್ಲರಿಗೂ-ಹೊಂದಾಣಿಕೆ ವಿಧಾನವನ್ನು ಈಗ ನಾವು ಬದಲಿಸು ತ್ತಿದ್ದೇವೆ, ಮತ್ತು ನಾವು ಮರುಕಳಿಸುವ ಅಥವಾ ಪ್ರಗತಿಪರವಿರುವ ಎಂಎಸ್ ವಿಧದ - ಜೀನ್ಸ್ ರೀತಿಯ ಅಂಶಗಳನ್ನು ಪರಿಗಣಿಸುತ್ತೇವೆ ಮತ್ತು ಸರಿಯಾದ ಚಿಕಿತ್ಸೆಯನ್ನು ನೀಡಲು ಜೀವನಶೈಲಿ ಯನ್ನು ಸಹ ಗಮನದಲ್ಲಿಡುತ್ತೇವೆ. ನಮ್ಮ ಗುರಿಯು ಕೇವಲ ಅಸಮರ್ಥತೆಯನ್ನು ಮಾತ್ರ ವಿಳಂಬ ಮಾಡುವುದಲ್ಲ ಆದರೆ ಅಧಿಕ ಪರಿಣಾಮಕಾರಿ ಚಿಕಿತ್ಸೆಗಳನ್ನು ಬಳಸುವ ಮೂಲಕ ರೋಗದ ವಿಧಾನವನ್ನು ಸಹ ಸಕ್ರಿಯವಾಗಿ ಮಾರ್ಪಡಿಸುವುದಾಗಿದೆ. ರೋಗನಿರ್ಣಯ ತಡವಾಗುವ ಮತ್ತು ಆರೈಕೆಯನ್ನು ಪಡೆಯುವಲ್ಲಿ ಅಸಮಾನತೆ ಇರುವ ಭಾರತ ರೀತಿಯ ದೇಶದಲ್ಲಿ, ನಾವು ಹೆಚ್ಚಿನ ಸಾರ್ವಜನಿಕ ಮತ್ತು ವೈದ್ಯರ ಜಾಗೃತಿಯನ್ನು ಬೆಳೆಸಬೇಕು, ಆರೋಗ್ಯ ಆರೈಕೆಯ ಮೂಲ ಸೌಕರ್ಯದಲ್ಲಿ ಹೂಡಿಕೆ ಮಾಡಬೇಕು ಮತ್ತು ಎಲ್ಲಾ ರೋಗಿಗಳು ಸಕಾಲಿಕ, ಸೂಕ್ತ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. #ವಾಕ್ ಇನ್ ಶೂಸ್ ರೀತಿಯ ಸಾರ್ವಜನಿಕ ಆರೋಗ್ಯ ಜಾಗೃತಿಯು ಒಗ್ಗಟ್ಟು ಮತ್ತು ಸಹಾನುಭೂತಿಯನ್ನು ತೋರಿಸುವ ಮೂಲಕ ಎಂಎಸ್ ಇರುವ ರೋಗಿಗಳಿಗಾಗಿ ದೀರ್ಘಕಾಲಿಕ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.