ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಸಂಸ್ಥೆಯು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂ. ಲಿಮಿಟೆಡ್‌ನ ಅಂಗಸಂಸ್ಥೆಯಾದ ನ್ಯೂರೋಲಾಜಿಕಾ ಜೊತೆಗಿನ ಸಹಯೋಗದಲ್ಲಿ ಭಾರತದಲ್ಲಿ ತನ್ನ ಅತ್ಯಾಧುನಿಕ ಮೊಬೈಲ್ ಸಿಟಿ ಉತ್ಪನ್ನ ಸಂಗ್ರಹ ವನ್ನು ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂ. ಲಿಮಿಟೆಡ್ ಅತ್ಯಾಧುನಿಕ ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನ ಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಹೊಸ ಉತ್ಪನ್ನಗಳು ಬಿಡುಗಡೆ ಯಾಗಿದ್ದು, ಭಾರತದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ರೇಡಿಯಾಲಜಿ ವಿಭಾಗ ವನ್ನು ಪರಿವರ್ತಿಸಲು ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಅತ್ಯಾಧುನಿಕ ವ್ಯವಸ್ಥೆ ಗಳು ಚಲನಶೀಲತೆ, ಎಐ ಶಕ್ತಿ ದಕ್ಷತೆ ಮತ್ತು ರೋಗಿಗಳಿಗೆ ಆದ್ಯತೆ ನೀಡುವ ವಿನ್ಯಾಸವನ್ನು ಹೊಂದಿದ್ದು, ವೈದ್ಯಕೀಯ ಸೇವೆ ಒದಗಿಸುವವರಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಗುಣಮಟ್ಟದ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Lokesh Kaayarga Column: ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?
ಹೊಸದಾಗಿ ಪರಿಚಯಿಸಲಾದ ಶ್ರೇಣಿಯಲ್ಲಿ ಸೆರಿಟೋಮ್® ಎಲೈಟ್, ಓಮ್ನಿಟೋಮ್® ಎಲೈಟ್, ಓಮ್ನಿಟೋಮ್® ಎಲೈಟ್ ಪಿಸಿಡಿ, ಮತ್ತು ಬಾಡಿಟೋಮ್® 32/64 ಉತ್ಪನ್ನಗಳು ಸೇರಿವೆ. ಈ ಉತ್ಪನ್ನಗಳನ್ನು ಆಸ್ಪತ್ರೆಗಳು ಮತ್ತು ಸ್ಪೆಷಾಲಿಟಿ ಸೆಂಟರ್ ಗಳ ವಿವಿಧ ಅಗತ್ಯಗಳನ್ನು ಪೂರೈಸಲು ರೂಪಿಸಲಾಗಿದೆ. ಎಲ್ಲಾ ಗಾತ್ರದ ಆಸ್ಪತ್ರೆಗಳು, ವಿಶೇಷವಾಗಿ ಸೇವೆಯಿಲ್ಲದ ಪ್ರದೇಶಗಳಲ್ಲಿರುವ ಆರೋಗ್ಯ ಕೇಂದ್ರಗಳು, ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ರೂಪಿಸ ಲಾಗಿದ್ದು, ಸ್ಯಾಮ್‌ಸಂಗ್ ಭಾರತದಲ್ಲಿ ಅತ್ಯಾಧುನಿಕ ಇಮೇಜಿಂಗ್ ವ್ಯವಸ್ಥೆಯನ್ನು ಎಲ್ಲರಿಗೂ ಲಭ್ಯವಾಗಿಸಿದೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಚ್ಎಂಇ ಬಿಸಿನೆಸ್ ವಿಭಾಗದ ಮುಖ್ಯಸ್ಥ ಅತಂತ್ರಾ ದಾಸ್ ಗುಪ್ತಾ ಅವರು, “ಸ್ಯಾಮ್‌ಸಂಗ್ ಭಾರತದಲ್ಲಿ ಮೊಬೈಲ್ ಸಿಟಿ ಉತ್ಪನ್ನ ಗಳ ಬಿಡುಗಡೆ ಮಾಡುವ ಮೂಲಕ ಅತ್ಯಾಧುನಿಕ ವೈದ್ಯಕೀಯ ಇಮೇಜಿಂಗ್ ವ್ಯವಸ್ಥೆಯನ್ನು ಹೆಚ್ಚು ಸುಲಭ, ದಕ್ಷ ಮತ್ತು ರೋಗಿ ಕೇಂದ್ರಿತವಾಗಿಸುವ ಕಡೆಗೆ ಹೆಜ್ಜೆ ಇಟ್ಟಿದೆ. ಈ ಆವಿಷ್ಕಾರಗಳು ಆರೋಗ್ಯ ಸೇವೆ ಒದಗಿಸುವವರಿಗೆ ನೆರವಾಗುತ್ತವೆ. ಮಹಾ ನಗರಗಳು ಮತ್ತು ಎರಡನೇ/ ಮೂರನೇ ಹಂತದ ನಗರಗಳ ನಡುವಿನ ವೈದ್ಯಕೀಯ ಸೇವೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಉತ್ಪನ್ನ ಸಂಗ್ರಹವು ಭಾರತದ ವೈದ್ಯಕೀಯ ಮೂಲ ಸೌಕರ್ಯವನ್ನು ಬಲಪಡಿಸುತ್ತದೆ. ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಹೇಳಿದರು.
ಸ್ಯಾಮ್‌ಸಂಗ್‌ನ ಮೊಬೈಲ್ ಸಿಟಿ ಉತ್ಪನ್ನಗಳು ಇಮೇಜಿಂಗ್ ಅನ್ನು ಒದಗಿಸುವ ರೀತಿಯಲ್ಲಿ ದೊಡ್ಡ ಸುಧಾರಣೆಯನ್ನು ತೋರಿಸುತ್ತವೆ. ಸ್ಕ್ಯಾನರ್ ಗಳನ್ನು ರೋಗಿಯ ಬಳಿಗೆ ನೇರವಾಗಿ ತೆಗೆದುಕೊಂಡು ಹೋಗಬಹುದಾಗಿದ್ದು, ಈ ಮೂಲಕ ನ್ಯೂರೋ ಐಸಿಯು, ಆಪರೇಷನ್ ರೂಮ್, ತುರ್ತು ಚಿಕಿತ್ಸಾ ವಿಭಾಗ, ಆಂಕಾಲಜಿ ಘಟಕ ಅಥವಾ ಮಕ್ಕಳ ತೀವ್ರ ಆರೈಕೆ ಘಟಕದಲ್ಲಿ ಹೀಗೆ ಎಲ್ಲಿ ಬೇಕಾದರೂ ಇಮೇಜಿಂಗ್ ವ್ಯವಸ್ಥೆ ಒದಗಿಸಬಹುದು. ಆಸ್ಪತ್ರೆಗಳು ಅಪಾಯಗಳನ್ನು ಕಡಿಮೆ ಮಾಡಬಹುದು, ಕ್ಲಿನಿಕಲ್ ಸುರಕ್ಷತೆಯನ್ನು ಸುಧಾರಿಸಬಹುದು ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ವಾಗುತ್ತದೆ. ಇದರ ಜೊತೆಗೆ ಈ ವ್ಯವಸ್ಥೆಗಳು ದುಬಾರಿ ಮೂಲಸೌಕರ್ಯ ಸುಧಾರಣೆಗಳಿಲ್ಲದೆಯೂ ಆಸ್ಪತ್ರೆಗಳ ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ಇದು ಭಾರತದ ವೈದ್ಯಕೀಯ ವ್ಯವಸ್ಥೆಯಾದ್ಯಂತ ಸುಧಾರಿತ ಇಮೇಜಿಂಗ್ ಅನ್ನು ಸುಲಭವಾಗಿ ದೊರೆಯುವಂತೆ ಮಾಡುತ್ತದೆ.
ಮೊಬೈಲ್ ಸಿಟಿ ಇಮೇಜಿಂಗ್ ನಲ್ಲಿ ಕ್ರಾಂತಿ- ಹೆಚ್ಚು ಸ್ಮಾರ್ಟ್, ಸುರಕ್ಷಿತ ಹೆಚ್ಚು ಸುಲಭ ವ್ಯವಸ್ಥೆ
- ಸೆರಿಟೋಮ್® ಎಲೈಟ್: 8-ಸ್ಲೈಸ್ ಸಿಟಿ ಸ್ಕ್ಯಾನರ್, 32 ಸೆಂಮೀ ರೋಗಿಯ ಓಪನಿಂಗ್ ಮತ್ತು 25 ಸೆಂ.ಮೀ ಎಫ್ಓವಿ, 2- ಗಂಟೆಗಳ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಅತ್ಯುತ್ತಮ ಇಮೇಜಿಂಗ್ ಅನ್ನು ಒದಗಿಸುತ್ತದೆ.
- ಓಮ್ನಿಟೋಮ್® ಎಲೈಟ್: ಯುಎಚ್ಆರ್ (ಅಲ್ಟ್ರಾ ಹೈ ರೆಸಲ್ಯೂಶನ್) ಮೋಡ್ ನಲ್ಲಿ 0.125 ಎಂಎಂ x 80 ಸ್ಲೈಸ್ ರೀಕನ್ ಸ್ಟ್ರಕ್ಷನ್ ಮಾಡಬಹುದಾಗಿದ್ದು, 40 ಸೆಂಮೀ ರೋಗಿಯ ಓಪನಿಂಗ್ ಮತ್ತು 30 ಸೆಂಮೀ ಎಫ್ಓವಿ, 1.5-ಗಂಟೆಗಳ ಬ್ಯಾಟರಿ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಇಮೇಜಿಂಗ್ ಒದಗಿಸುತ್ತದೆ. ಇದು ನರಶಸ್ತ್ರಚಿಕಿತ್ಸೆಯ ಕಾರ್ಯಪ್ರವಾಹಕ್ಕೆ ನೆರವಾಗುತ್ತಿದ್ದು, ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ನಂತಹ ಸಂಕೀರ್ಣ ಕಾರ್ಯವಿಧಾನಗಳನ್ನು ಸಾಂಪ್ರದಾಯಿಕ 8-10 ಗಂಟೆಗಳಿಗೆ ಹೋಲಿಸಿದರೆ ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳಿಸಲು ಅವಕಾಶ ನೀಡುತ್ತದೆ. ಇದರ ಜೊತೆಗೆ ಓಮ್ನಿಟೋಮ್® ಎಲೈಟ್ ಆಪರೇಷನ್ ರೂಮ್ ನಲ್ಲಿಯೇ ಶಸ್ತ್ರಚಿಕಿತ್ಸೆಯ ನಂತರದ ತಕ್ಷಣದ ಸ್ಕ್ಯಾನ್‌ಗಳನ್ನು ಸಾಧ್ಯವಾಗಿಸುತ್ತದೆ. ಇದರಿಂದ ರಕ್ತಸ್ರಾವದಂತಹ ತೊಡಕುಗಳನ್ನು ತಕ್ಷಣವೇ ಗುರುತಿಸಿ, ಸರಿಪಡಿಸುವ ಕ್ರಮ ತೆಗೆದುಕೊಳ್ಳ ಬಹುದು. ಇದು ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಪುನರ್ ಶಸ್ತ್ರಚಿಕಿತ್ಸೆಯ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
- ಓಮ್ನಿಟೋಮ್® ಎಲೈಟ್ ಪಿಸಿಡಿ: ಫೋಟಾನ್ ಕೌಂಟಿಂಗ್ ಡಿಟೆಕ್ಟರ್ (ಪಿಸಿಡಿ) ತಂತ್ರಜ್ಞಾನ ವನ್ನು ಹೊಂದಿದ್ದು, ಇದು ಉತ್ತಮ ಇಮೇಜ್ ಗುಣಮಟ್ಟ ಮತ್ತು ಸುಧಾರಿತ ಆರ್ಟಿಫ್ಯಾಕ್ಟ್ ರಿಡಕ್ಷನ್ ಅನ್ನು ಒದಗಿಸುತ್ತದೆ.
- ಬಾಡಿಟೋಮ್® 32/64: 32/64-ಸ್ಲೈಸ್ ಸಿಟಿ ಸ್ಕ್ಯಾನರ್, 85 ಸೆಂಮೀ ರೋಗಿಯ ಓಪನಿಂಗ್ ಮತ್ತು 60 ಸೆಂಮೀ ಎಫ್ಓವಿ ಹೊಂದಿದ್ದು, ಇದನ್ನು ಸಂಪೂರ್ಣ ದೇಹ ಚಿತ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. 12-ಗಂಟೆಗಳ ಸ್ಟ್ಯಾಂಡ್‌ಬೈ ಸಾಮರ್ಥ್ಯದ ಲೀಥಿಯಂ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ.
ಸ್ಯಾಮ್‌ಸಂಗ್‌ನ ಮೊಬೈಲ್ ಸಿಟಿ ಉತ್ಪನ್ನಗಳು ದಕ್ಷತೆಯ ಜೊತೆಗೆ, ಭವಿಷ್ಯದ ವೈದ್ಯಕೀಯ ಸೇವೆ ಒದಗಿಸಲು ನಿರ್ಮಿತವಾಗಿವೆ. ಎಐ ಆಧರಿತ ಇಮೇಜಿಂಗ್ ಮತ್ತು ಆಸ್ಪತ್ರೆಯ ಪಿಎಸಿಎಸ್ ಮತ್ತು ಇಎಂಆರ್ ವ್ಯವಸ್ಥೆಗಳೊಂದಿಗೆ ಸುಗಮ ಸಂಯೋಜನೆಯನ್ನು ಒದಗಿಸುತ್ತವೆ. ಇದು ತ್ವರಿತ ಮತ್ತು ನಿಖರವಾದ ರೋಗನಿರ್ಣಯವನ್ನು ಸಾಧ್ಯವಾಗಿಸುತ್ತದೆ ಮತ್ತು ಇದು ದೇಶಾದ್ಯಂತ ಡಿಜಿಟಲ್ ವೈದ್ಯಕೀಯ ಬದಲಾವಣೆ ಯೋಜನೆಗಳಿಗೆ ಬೆಂಬಲಿಸುತ್ತದೆ.
ವಿವಿಧ ವಿಭಾಗಗಳಲ್ಲಿ ಬಳಕೆ
ಈ ಉತ್ಪನ್ನ ಸಂಗ್ರಹವು ವಿವಿಧ ವೈದ್ಯಕೀಯ ಸಂದರ್ಭಗಳಿಗೆ ಸೂಕ್ತವಾಗಿದೆ, ವಿವಿಧ ವಿಭಾಗಗಳಲ್ಲಿ ನಿಖರ ಮತ್ತು ದಕ್ಷ ಸೇವೆಯನ್ನು ಒದಗಿಸುತ್ತದೆ. ನರಶಸ್ತ್ರಚಿಕಿತ್ಸೆಯಲ್ಲಿ, ಇದು ಶಸ್ತ್ರಚಿಕಿತ್ಸೆಯ ಯೋಜನೆ ಮತ್ತು ಪರಿಶೀಲನೆಗೆ ಇಂಟ್ರಾ ಆಪರೇಟಿವ್ ಇಮೇಜಿಂಗ್ ಅನ್ನು ಒದಗಿಸುತ್ತದೆ. ತುರ್ತು ಚಿಕಿತ್ಸೆಯಲ್ಲಿ, ಇದು ಆಘಾತ ಮತ್ತು ಸ್ಟ್ರೋಕ್ ರೋಗನಿರ್ಣಯಕ್ಕೆ ತ್ವರಿತ ಇಮೇಜಿಂಗ್ ಅನ್ನು ಒದಗಿಸುತ್ತದೆ. ಚಿಕಿತ್ಸಕ ರೇಡಿಯಾಲಜಿ ತಂಡಗಳು ಸಿಟಿ-ಮಾರ್ಗದರ್ಶಿತ ಬಯಾಪ್ಸಿಗಳು, ಎಬ್ಲೇಶನ್ ಗಳು ಮತ್ತು ಡ್ರೈನೇಜ್ ಕಾರ್ಯವಿಧಾನಗಳ ಮಾಹಿತಿ ಪಡೆದು ಲಾಭ ಪಡೆಯುತ್ತವೆ. ಆಂಕಾಲಜಿ ಯಲ್ಲಿ, ಈ ವ್ಯವಸ್ಥೆಗಳು ಬ್ರಾಕಿಥೆರಪಿ ಮತ್ತು ಟ್ಯೂಮರ್ ರಿಸೆಕ್ಷನ್ ಗೆ ಇಮೇಜಿಂಗ್ ಅನ್ನು ಒದಗಿಸುತ್ತವೆ. ಮತ್ತು ಮಕ್ಕಳ ಇಮೇಜಿಂಗ್ ವಿಭಾಗದಲ್ಲಿ ಮಕ್ಕಳು ಮತ್ತು ನವಜಾತ ಶಿಶುಗಳ ಅಗತ್ಯಗಳಿಗೆ ತಕ್ಕಂತೆ ಸುರಕ್ಷಿತ ಮತ್ತು ದಕ್ಷ ಸೇವೆಯನ್ನು ಒದಗಿಸುತ್ತವೆ.