ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಮಾರ್ಟ್, ವಿದ್ಯುತ್- ದಕ್ಷ ಕೂಲಿಂಗ್ ಸಾಮರ್ಥ್ಯ ಹೊಂದಿರುವ ಮೇಡ್ ಇನ್ ಇಂಡಿಯಾ ವಿಂಡ್‌ಫ್ರೀ™ ಕ್ಯಾಸೆಟ್ ಏಸಿಗಳ ಬಿಡುಗಡೆ ಮಾಡಿದ ಸ್ಯಾಮ್‌ ಸಂಗ್

ಸ್ಮಾರ್ಟ್ ಕಂಟ್ರೋಲ್, ದಕ್ಷ ಕಾರ್ಯಕ್ಷಮತೆ ಮತ್ತು ಗ್ರಾಹಕರಿಗೆ ಅನುಕೂಲತೆ ಒದಗಿಸಲು ವಿನ್ಯಾಸ ಗೊಳಿಸಲಾದ ಈ ಹೊಸ ಶ್ರೇಣಿಯು, ಸ್ಮಾರ್ಟ್‌ಥಿಂಗ್ಸ್ ಏಕೀಕರಣಕ್ಕಾಗಿ ಬಿಲ್ಟ್- ಇನ್ ವೈ- ಫೈ ಸೌಕರ್ಯ ಮತ್ತು ಸ್ಯಾಮ್‌ ಸಂಗ್‌ ನ ವಿಶಿಷ್ಟ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಉತ್ಪನ್ನ ವು ತೀಕ್ಷ್ಣವಾದ ತಂಪು ಗಾಳಿಯನ್ನು ಹೊರಸೂಸುವ ಬದಲಿಗೆ ಸ್ಥಿರವಾದ ಕೂಲಿಂಗ್ ಸೌಕರ್ಯವನ್ನು ಒದಗಿಸುತ್ತದೆ

ಬಿಲ್ಟ್- ಇನ್ ವೈ-ಫೈ ಮತ್ತು ಸ್ಮಾರ್ಟ್‌ಥಿಂಗ್ಸ್ ಇಂಟಿಗ್ರೇಷನ್ ಸಾಮರ್ಥ್ಯ ಹೊಂದಿದೆ ಮತ್ತು ಶಬ್ದ ರಹಿತ, ಸುಗಮವಾಗಿ ತಂಪಾಗಿಸುವ ಸೌಲಭ್ಯ ಒದಗಿಸುವ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನ ಹೊಂದಿದೆ. ಪರಿಸರ ಸ್ನೇಹಿ ಆರ್32 ರೆಫ್ರಿಜರೆಂಟ್ ಬಳಸುತ್ತದೆ, ಶೇ.48ರಷ್ಟು ವಿದ್ಯುತ್ ಉಳಿತಾಯ [1] ಮಾಡುತ್ತದೆ ಮತ್ತು ಭಾರತದ ಪ್ರಾದೇಶಿಕ ವಾತಾವರಣಗಳಿಗೆ ಹೊಂದುವಂತೆ ವಿನ್ಯಾಸಗೊಳಿಸ ಲಾಗಿದೆ. ಅಕ್ಟೋಬರ್ 14, 2025 ರಿಂದ ಭಾರತದಾದ್ಯಂತ ಸ್ಯಾಮ್‌ ಸಂಗ್‌ ನ ಎಲ್ಲಾ ಅಧಿಕೃತ ವಾಣಿಜ್ಯ ಏಸಿ ಪಾಲುದಾರರ ಬಳಿ ಲಭ್ಯವಿದೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್, ತನ್ನ ಹೊಚ್ಚ ಹೊಸ ಮೇಡ್ ಇನ್ ಇಂಡಿಯಾ ಸ್ಮಾರ್ಟ್ ವಿಂಡ್‌ಫ್ರೀ™ ಕ್ಯಾಸೆಟ್ ಏರ್ ಕಂಡಿಷನರ್‌ ಗಳನ್ನು ಇಂದು ಬಿಡುಗಡೆ ಮಾಡಿದೆ. ಈ ಹೊಸ ಏಸಿ ಶ್ರೇಣಿಯು ಸ್ಮಾರ್ಟ್ ಕನೆಕ್ಟಿವಿಟಿ ಸೌಲಭ್ಯ, ಪರಿಸರ ಸ್ನೇಹಿ ವಿನ್ಯಾಸ ಮತ್ತು ಪ್ರೀಮಿಯಂ ಸೌಕರ್ಯವನ್ನು ಒದಗಿಸುತ್ತಿದ್ದು, ವಾಣಿಜ್ಯ ಮತ್ತು ವಸತಿ ಎರಡೂ ವಿಭಾಗಗಳಿಗೂ ಹೊಂದಿಕೊಳ್ಳುವ ಅತ್ಯುತ್ತಮ ಉತ್ಪನ್ನವಾಗಿದೆ.

ಸ್ಮಾರ್ಟ್ ಕಂಟ್ರೋಲ್, ದಕ್ಷ ಕಾರ್ಯಕ್ಷಮತೆ ಮತ್ತು ಗ್ರಾಹಕರಿಗೆ ಅನುಕೂಲತೆ ಒದಗಿಸಲು ವಿನ್ಯಾಸ ಗೊಳಿಸಲಾದ ಈ ಹೊಸ ಶ್ರೇಣಿಯು, ಸ್ಮಾರ್ಟ್‌ಥಿಂಗ್ಸ್ ಏಕೀಕರಣಕ್ಕಾಗಿ ಬಿಲ್ಟ್- ಇನ್ ವೈ- ಫೈ ಸೌಕರ್ಯ ಮತ್ತು ಸ್ಯಾಮ್‌ ಸಂಗ್‌ ನ ವಿಶಿಷ್ಟ ವಿಂಡ್‌ಫ್ರೀ™ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಉತ್ಪನ್ನವು ತೀಕ್ಷ್ಣವಾದ ತಂಪು ಗಾಳಿಯನ್ನು ಹೊರಸೂಸುವ ಬದಲಿಗೆ ಸ್ಥಿರವಾದ ಕೂಲಿಂಗ್ ಸೌಕರ್ಯವನ್ನು ಒದಗಿಸುತ್ತದೆ ಮತ್ತು ಭಾರತದಾದ್ಯಂತ ಬಳಕೆದಾರರಿಗೆ ಅತ್ಯುನ್ನತ ಅನುಕೂಲತೆ ನೀಡುತ್ತದೆ. ಪರಿಸರ ಸ್ನೇಹಿ ಆರ್32 ರೆಫ್ರಿಜರೆಂಟ್‌ ನ ಬಳಕೆಯು ಸ್ಯಾಮ್‌ ಸಂಗ್‌ ನ ಸುಸ್ಥಿರತೆ ಕಡೆಗಿನ ಬದ್ಧತೆಯನ್ನು ಮತ್ತಷ್ಟು ದೃಢೀಕರಿಸುತ್ತದೆ.

ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ

ಈ ಕುರಿತು ಮಾತನಾಡಿರುವ ಸ್ಯಾಮ್‌ ಸಂಗ್ ಇಂಡಿಯಾದ ಸಿಸ್ಟಮ್ ಏಸಿ ಮುಖ್ಯಸ್ಥ ವಿಪಿನ್ ಅಗರವಾಲ್ ಅವರು, “ಕೇವಲ ಕೊಠಡಿಯನ್ನು ತಂಪಾಗಿರಿಸುವುದರಷ್ಟೇ ಸಾಕಾಗುವುದಿಲ್ಲ, ಬದಲಿಗೆ ಬುದ್ಧಿವಂತ, ಸುಸ್ಥಿರ ಮತ್ತು ಭಾರತದ ಗ್ರಾಹಕರ ಅಗತ್ಯಗಳನ್ನು ನಿಜವಾಗಿಯೂ ಪೂರೈಸುವ ಒಂದೊಳ್ಳು ಅನುಭವವನ್ನು ಕಟ್ಟಿಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಹೊಸ ವಿಂಡ್‌ಫ್ರೀ™ ಕ್ಯಾಸೆಟ್ ಏಸಿಗಳು ಕಾರ್ಯನಿರ್ವಹಿಸುತ್ತವೆ.

ಈ ಉತ್ಪನ್ನಗಳು ಮೇಡ್ ಅನ್ ಇಂಡಿಯಾ ಆಗಿದ್ದು, ಪ್ರೀಮಿಯಂ ಸೊಬಗಿನ ವಿನ್ಯಾಸ, ಪರಿಸರ ಸ್ನೇಹಿ ರೆಫ್ರಿಜರೆಂಟ್‌ ಗಳು ಮತ್ತು ಸ್ಮಾರ್ಟ್‌ಥಿಂಗ್ಸ್ ಸಂಪರ್ಕ ಮುಂತಾದ ಆಕರ್ಷಣೆಯನ್ನು ಹೊಂದಿವೆ. ಇವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುವುದು ಮಾತ್ರವಲ್ಲದೆ ವಿದ್ಯುತ್ ಉಳಿತಾಯ, ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಗುಣ ಮತ್ತು ಅತ್ಯುತ್ತ ಸೌಲಭ್ಯ ಹೊಂದಿದೆ ಮತ್ತು ಈ ಮೂಲಕ ಗ್ರಾಹಕರಿಗೆ ದೀರ್ಘಕಾಲೀನ ಯೋಗಕ್ಷೇಮವನ್ನು ಕಾಪಾಡಿ ಕೊಳ್ಳಲು ನೆರವಾಗುತ್ತದೆ. ಈ ಉತ್ಪನ್ನ ಬಿಡುಗಡೆಯ ಮೂಲಕ ದೇಶದಾದ್ಯಂತ ಇರುವ ಉದ್ದಿಮೆ ಗಳು ಮತ್ತು ಗ್ರಾಹಕರ ವಿಕಸನಗೊಳ್ಳುತ್ತಿರುವ ಜೀವನಶೈಲಿಗೆ ತಕ್ಕಂತೆ ಏರ್ ಕಂಡಿಷನಿಂಗ್ ವ್ಯವಸ್ಥೆ ಹೇಗೆ ಸ್ಮಾರ್ಟ್ ಆಗಿರಬೇಕು, ಹಸಿರು ಸ್ನೇಹಿ ಆಗಿರಬೇಕು ಮತ್ತು ಹೆಚ್ಚು ತೊಡಗಿಸಿಕೊಳ್ಳುವಂತಿರ ಬೇಕು ಎಂಬ ಮಾನದಂಡವನ್ನು ನಾವು ಹಾಕಿಕೊಡುತ್ತಿದ್ದೇವೆ” ಎಂದು ಹೇಳಿದರು.

ಯಾವುದೇ ಸಮಯದಲ್ಲಿ, ಎಲ್ಲಿಂದಾದರೂ ನಿಯಂತ್ರಿಸಬಹುದಾದ ಸ್ಮಾರ್ಟ್ ಕಂಟ್ರೋಲ್ ಬಳಕೆದಾರರು ತಮ್ಮ ಕ್ಯಾಸೆಟ್ ಏಸಿಗಳನ್ನು ಸ್ಯಾಮ್‌ ಸಂಗ್ ಸ್ಮಾರ್ಟ್‌ ಥಿಂಗ್ಸ್ ಆಪ್‌ ನೊಂದಿಗೆ ಬಿಲ್ಟ್-ಇನ್ ವೈ-ಫೈ ಮೂಲಕ ಹೆಚ್ಚುವರಿ ಮಾಡ್ಯೂಲ್‌ಗಳ ಅಗತ್ಯವಿಲ್ಲದೆ ಕನೆಕ್ಟ್ ಮಾಡಬಹುದು. ಈ ಮೂಲಕ ಮನೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಎಲ್ಲಿಗಾದರೂ ಹೋಗುತ್ತಿರುವಾಗಲೇ ಆಗಲಿ ತಮ್ಮ ಸ್ಮಾರ್ಟ್‌ ಫೋನ್‌ ನಿಂದ ನೇರವಾಗಿ ಒಳಾಂಗಣ ವಾತಾವರಣವನ್ನು ನಿಯಂತ್ರಣ ಮಾಡಬಹುದು, ನಿರ್ವಹಿಸಬಹುದು.

ಪ್ರಮುಖ ಸ್ಮಾರ್ಟ್‌ ಥಿಂಗ್ಸ್ ಫೀಚರ್ ಗಳು:

  • ವಾಯ್ಸ್ ಕಂಟ್ರೋಲ್: ಸ್ಯಾಮ್‌ ಸಂಗ್ ಬಿಕ್ಸ್‌ ಬಿ, ಅಮೆಜಾನ್ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್‌ ನಂತಹ ವಾಯ್ಸ್ ಅಸಿಸ್ಟೆಂಟ್ ಗಳನ್ನು ಬಳಸಿಕೊಂಡು ತಾಪಮಾನ ಮತ್ತು ಸೆಟ್ಟಿಂಗ್‌ ಗಳನ್ನು ನಿಯಂತ್ರಿಸಬಹುದು.
  • ವೆಲ್‌ ಕಮ್ ಕೂಲಿಂಗ್ ಮೋಡ್: ಜಿಪಿಎಸ್ ಟ್ರ್ಯಾಕಿಂಗ್ ಬಳಸಿಕೊಂಡು ನೀವು ಆಗಮಿಸುವ ಮೊದಲೇ ನಿಮ್ಮ ಆದ್ಯತೆಯ ಸೆಟ್ಟಿಂಗ್‌ ಗಳಿಗೆ ತಕ್ಕಂತೆ ಆ ಸ್ಥಳವನ್ನು ಸ್ವಯಂಚಾಲಿತವಾಗಿ ತಂಪಾಗಿಸುತ್ತದೆ.
  • ಗುಡ್ ಸ್ಲೀಪ್ ಮೋಡ್: ನಿಮ್ಮ ನಿದ್ರಾ ರೀತಿಗೆ ಹೊಂದಿಕೊಳ್ಳುತ್ತದೆ ಮತ್ತು ಶೇ.48ರಷ್ಟು ವಿದ್ಯುತ್ ಅನ್ನು ಶಕ್ತಿಯನ್ನು ಉಳಿಸುತ್ತದೆ. [1]
  • ಕಂಫರ್ಟ್ ಹ್ಯುಮಿಡಿಟಿ ಕಂಟ್ರೋಲ್: ಟೆಂಪರೇಚರ್ ಮತ್ತು ಹ್ಯುಮಿಡಿಟಿ ಸೆನ್ಸರ್ ಗಳನ್ನು ಬಳಸಿಕೊಂಡು ಒಳಾಂಗಣ ತಾಪಮಾನವನ್ನು ಸ್ಥಿರವಾಗಿ ಇರುವಂತೆ ನೋಡಿಕೊಳ್ಳುತ್ತದೆ, ಡ್ರೈ ಮೋಡ್‌ನಲ್ಲಿ 19% ವಿದ್ಯುತ್ ಅನ್ನು ಉಳಿಸುತ್ತದೆ. [2]

ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಕೂಲಿಂಗ್ ವ್ಯವಸ್ಥೆ

ಈ ಶ್ರೇಣಿಯು ಆರ್32 ರೆಫ್ರಿಜರೆಂಟ್ ಬಳಸುತ್ತದೆ, ಇದು ಸಾಂಪ್ರದಾಯಿಕ ರೆಫ್ರಿಜರೆಂಟ್‌ಗಳಿಗಿಂತ ಗಣನೀಯವಾಗಿ ಕಡಿಮೆ ಗ್ಲೋಬಲ್ ವಾರ್ಮಿಂಗ್ ಪೊಟೆನ್ಷಿಯಲ್ (ಜಿಡಬ್ಲ್ಯೂಪಿ) ಹೊಂದಿದೆ. ಶುದ್ಧವಾದ ಒಳಾಂಗಣ ವಾತಾವರಣಕ್ಕಾಗಿ, ಐಚ್ಛಿಕ ಪಿಎಂ 1.0 ಫಿಲ್ಟರೇಶನ್ ಸಿಸ್ಟಮ್ ಲಭ್ಯವಿದ್ದು, ಇದು ಅತಿ-ಸೂಕ್ಷ್ಮ ಧೂಳಿನ ಕಣಗಳನ್ನು ಸೆರೆಹಿಡಿಯುತ್ತದೆ ಮತ್ತು ಗಾಳಿಯ ಶುದ್ಧತೆಯನ್ನು ಹೆಚ್ಚಿಸುತ್ತದೆ.

ಕೂಲಾಗಿರಿ ಆರಾಮಾಗಿರಿ- ವಿಂಡ್‌ಫ್ರೀ™ ಸೌಲಭ್ಯ

ಸಾಂಪ್ರದಾಯಿಕ ಏರ್ ಕಂಡಿಷನರ್‌ಗಳು ತೀಕ್ಷ್ಣವಾದ ತಂಪು ಗಾಳಿಯನ್ನು ತೀವ್ರವಾಗಿ ಹೊರ ಸೂಸುತ್ತವೆ, ಅದಕ್ಕಿಂತ ಭಿನ್ನವಾಗಿ, ಸ್ಯಾಮ್‌ ಸಂಗ್‌ ನ ವಿಂಡ್‌ಫ್ರೀ™ ಕೂಲಿಂಗ್ ವ್ಯವಸ್ಥೆಯು ಸಾವಿರಾರು ಸೂಕ್ಷ್ಮ ರಂಧ್ರಗಳ ಮೂಲಕ ತಂಪು ಗಾಳಿಯನ್ನು ಸೌಮ್ಯವಾಗಿ ಹರಡುವಂತೆ ನೋಡಿಕೊಳ್ಳುತ್ತದೆ. ಕನಿಷ್ಠ ಫ್ಯಾನ್ ವೇಗದ ಮೂಲಕ “ಸ್ಟಿಲ್ ಏರ್” ವಾತಾವರಣವನ್ನು ಸೃಷ್ಟಿಸು ತ್ತದೆ, ಇದರಿಂದ ತಂಪು ಗಾಳಿಯ ಹೊಡೆತದ ಅಸೌಕರ್ಯವನ್ನು ತಡೆಯಬಹುದು ಮತ್ತು ಸ್ಥಿರ, ಶಾಂತ ಮತ್ತು ವಿದ್ಯುತ್- ದಕ್ಷ ಕೂಲಿಂಗ್ ವ್ಯವಸ್ಥೆಯನ್ನು ಹೊಂದಬಹುದು. ಈ ಏಸಿಗಳ ಶ್ರೇಣಿಯು ಕಚೇರಿಗಳು, ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ಮತ್ತು ಯೋಗಕ್ಷೇಮ ಆರೈಕೆ ಒದಗಿಸುವ ಸ್ಥಳಗಳಿಗೂ ಸೂಕ್ತವಾಗಿದೆ.

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ ಸಂಗ್‌ ನ ಹೊಸ ಸ್ಮಾರ್ಟ್ ಕ್ಯಾಸೆಟ್ ಏಸಿಯ ಆರಂಭಿಕ ಬೆಲೆ ರೂ. 65,000 (ಜಿ ಎಸ್ ಟಿ ಹೊರತುಪಡಿಸಿ) ಆಗಿದ್ದು, ಅಕ್ಟೋಬರ್ 2025 ರಿಂದ ಭಾರತದಾದ್ಯಂತ ಇರುವ ಸ್ಯಾಮ್‌ ಸಂಗ್‌ ನ ಅಧಿಕೃತ ವಾಣಿಜ್ಯ ಏಸಿ ಚಾನಲ್ ಪಾಲುದಾರರ ಬಳಿ ಲಭ್ಯವಿರುತ್ತದೆ.

ವಿಭಾಗ ಕೂಲಿಂಗ್ ಕೆಪಾಸಿಟಿ (ಟಿ) ಪ್ರಮುಖ ಫೀಚರ್ ಗಳು

1-ವೇ ಕ್ಯಾಸೆಟ್ 1.0|1.5|2.0 ಸಿಂಗಲ್ ಏರ್ ಫ್ಲೋ ಡೈರೆಕ್ಷನ್, ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ ಸ್ಥಳಗಳಿಗೆ ಸೂಕ್ತ

4-ವೇ ಕ್ಯಾಸೆಟ್ 1.5|2.0|3.0|4.0 ಫೋರ್ ಡೈರೆಕ್ಷನ್ ಏರ್ ಫ್ಲೋ, ಮಧ್ಯಮ ಗಾತ್ರದಿಂದ ಹಿಡಿದು ವಿಶಾಲ ಸ್ಥಳಗಳಿಗೆ ಏಕರೂಪದ ಕೂಲಿಂಗ್

360 ಕ್ಯಾಸೆಟ್ 2.0|3.0|4.0 ಸಂಪೂರ್ಣ 360-ಡಿಗ್ರಿ ಗಾಳಿ ವಿತರಣೆ, ವಿಶಾಲ, ಓಪನ್ ಸ್ಪೇಸ್ ಗಳಿಗೆ ಸೂಕ್ತ

ಉತ್ಪನ್ನದ ಬಗ್ಗೆ ಇನ್ನಷ್ಟು ತಿಳಿಯಲು, ಭೇಟಿ ನೀಡಿ: Cassette AC (CAC)

ಡಿಸ್ ಕ್ಲೈಮರ್:

[1] ಆಂತರಿಕ ಪರೀಕ್ಷಾ ಫಲಿತಾಂಶ. AC071FE1DKF/EA ಮಾದರಿಯಲ್ಲಿ ಕಾರ್ಯಾಚರಣೆಯ ಮೋಡ್‌ ಗೆ ಅನುಗುಣವಾಗಿ ಪರೀಕ್ಷಿಸಲಾಗಿದೆ. ಪರೀಕ್ಷಾ ಸ್ಥಿತಿ: ಗುರಿ ತಾಪಮಾನ: 26℃, 8 ಗಂಟೆಗಳವರೆಗೆ, ಮೋಡ್‌ ನಲ್ಲಿ ಒಟ್ಟು ವಿದ್ಯುತ್ ಬಳಕೆಗೆ ಹೋಲಿಸಿದರೆ.

[2] *ಆಂತರಿಕ ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ, ಮತ್ತು ವಿದ್ಯುತ್ ಬಳಕೆಯನ್ನು 4 ಗಂಟೆಗಳ ಕಾರ್ಯಾಚರಣೆಗಾಗಿ ಬಳಸಲಾಗಿದೆ

– ಟೆಸ್ಟ್ ಮಾಡೆಲ್: 4ವೇ 14kW (AC145BXAFHH1PP / AC145CN4FHH1PP)

– ಟೆಸ್ಟ್ ಸ್ಟೇಟಸ್: ಔಟ್ ಡೋರ್ ಡ್ರೈ ಬಲ್ಬ್ 27℃, ಹ್ಯುಮಿಡಿಟಿ ಬಲ್ಬ್ 24℃.

– ಟೆಸ್ಟ್ ಮೋಡ್: ಡಿಹ್ಯೂಮಿಡಿಫಿಕೇಶನ್ ಮೋಡ್, ಗುರಿ ತಾಪಮಾನ 24℃.

ನಿಜವಾದ ವಿದ್ಯುತ್ ಉಳಿತಾಯವು ಮಾದರಿ ಮತ್ತು ಪರೀಕ್ಷಾ ಸ್ಥಿತಿಗಳಿಗಿಂತ ಭಿನ್ನವಾಗಿರಬಹುದು.