ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Senior Advocate K.S. Vyasarao: ವಕೀಲರಾಗಿ 50 ವರ್ಷ ಪೂರ್ಣ; ಕೆ.ಎಸ್‌. ವ್ಯಾಸರಾವ್‌ಗೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸನ್ಮಾನ

Karnataka High court: ಮೂಲತಃ ಉಡುಪಿಯ ಕುಂಜೂರಿನವರಾದ ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಸ್‌. ವ್ಯಾಸರಾವ್‌ ಅವರು, ಭೂ ಸುಧಾರಣಾ ಕಾನೂನುಗಳಲ್ಲಿ ತಜ್ಞರು ಎನಿಸಿದ್ದಾರೆ. ಹಲವಾರು ಕಾನೂನು ಪಂಡಿತರನ್ನು ರೂಪಿಸಿರುವ ವ್ಯಾಸರಾವ್‌ ಅವರು ʼಲೆಜೆಂಡ್‌ ಆಫ್‌ ಬಾರ್‌ʼ ಎಂಬ ಬಿರುದು ಪಡೆದಿದ್ದಾರೆ.

ಬೆಂಗಳೂರು: ವಕೀಲರಾಗಿ 50 ವರ್ಷ ಪೂರೈಸಿದ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಸ್‌. ವ್ಯಾಸರಾವ್‌ (Senior Advocate K.S. Vyasarao) ಅವರನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಇತ್ತೀಚೆಗೆ ಸನ್ಮಾನಿಸಿದರು. ಮೂಲತಃ ಉಡುಪಿಯ ಕುಂಜೂರಿನವರಾದ ವ್ಯಾಸರಾವ್‌ ಅವರು, ಭೂ ಸುಧಾರಣಾ ಕಾನೂನುಗಳಲ್ಲಿ ತಜ್ಞರು ಎನಿಸಿದ್ದಾರೆ.

ಇವರು 1974ರಲ್ಲಿ ಶ್ರೀನಂದಳಿಕೆ ಬಾಲಚಂದ್ರ ರಾವ್‌ ಅವರ ಬಳಿ ಉಡುಪಿಯಲ್ಲಿ ವಕೀಲಿಕೆ ಆರಂಭಿಸಿದ್ದರು. ನಂತರ ಬೆಂಗಳೂರಿಗೆ ಸ್ಥಳಾಂತರವಾಗಿದ್ದ ವ್ಯಾಸರಾವ್‌ ಅವರು ಹಿರಿಯ ವಕೀಲ ಯು.ಎಲ್‌. ನಾರಾಯಣ ರಾವ್‌ ಅವರ ಚೇಂಬರ್ಸ್‌ನಲ್ಲಿ ಪ್ರಾಕ್ಟೀಸ್‌ ಮುಂದುವರಿಸಿದ್ದರು.

ಸಂವಿಧಾನದ 21ನೇ ವಿಧಿಯಡಿ ವಿದ್ಯುಚ್ಛಕ್ತಿ ಹಕ್ಕು ಮೂಲಭೂತ ಹಕ್ಕಿನ ಭಾಗ ಎಂದು ಘೋಷಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅರ್ಜಿದಾರರನ್ನು ವ್ಯಾಸರಾವ್‌ ಪ್ರತಿನಿಧಿಸಿದ್ದರು. ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಅವರಿಗೆ ʼಕಲಾಪೋಷಕ ಪುರಷ್ಕಾರʼ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.‌

ಈ ಸುದ್ದಿಯನ್ನೂ ಓದಿ | Justice Surya Kant: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ನ್ಯಾ. ಸೂರ್ಯಕಾಂತ್

K.S. Vyasarao honored by Tushar Mehta

ಹಲವಾರು ಕಾನೂನು ಪಂಡಿತರನ್ನು ರೂಪಿಸಿರುವ ವ್ಯಾಸರಾವ್‌ ಅವರು ʼಲೆಜೆಂಡ್‌ ಆಫ್‌ ಬಾರ್‌ʼ (Legend of Bar) ಎಂಬ ಬಿರುದು ಪಡೆದಿದ್ದಾರೆ. ವಕೀಲರಿಗೆ ಹಲವಾರು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ. ಕಾನೂನು ಕ್ಷೇತ್ರದಲ್ಲಿರುವವರಿಗೆ ಹಲವು ಬಗೆಯ ಸಹಾಯಗಳನ್ನುಮಾಡಿದ್ದಾರೆ. ಕಾನೂನು ವಕೀಲಿಕೆಯನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಜೊತೆ ಬೆಸೆದಿರುವುದು ಸಮಾಜಕ್ಕೆ ಅವರ ಬಹುಮುಖ ಪ್ರತಿಭೆಯ ಕೊಡುಗೆಯಾಗಿದೆ.‌