ವಿಶೇಷ ಆಫರ್ ಗಳ ಒದಗಿಸುವ ಮೂಲಕ ಸ್ವಾತಂತ್ರ್ಯೋತ್ಸವ ದಿನ ಆಚರಿಸಲಿರುವ ತನೈರ
79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಟಾಟಾ ಅಧೀನದ ತನೈರ ಸಂಸ್ಥೆಯು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಆಚರಿಸಲು ಗ್ರಾಹಕರಿಗೆ ಆಹ್ವಾನ ನೀಡುತ್ತಿದ್ದು, ದೇಶಾ ದ್ಯಂತ ಇರುವ ನೇಕಾರರ ಕೇಂದ್ರಗಳಿಂದ ತಯಾರಾದ, ವಿವಿಧ ಕೈಗಳು ನೇಯ್ದ ಸೀರೆಗಳನ್ನು ಪ್ರದರ್ಶಿಸುತ್ತಿದೆ.


ಹಬ್ಬದ ಋತುವಿಗೆ ಮುಂಚಿತವಾಗಿ ‘ಪ್ರತೀ ದಾರದಲ್ಲಿ ಭಾರತ’ ಒಂದೇ ಸೂರಿನಡಿ ತರುತ್ತಿದೆ
ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಟಾಟಾ ಅಧೀನದ ತನೈರ ಸಂಸ್ಥೆಯು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಆಚರಿಸಲು ಗ್ರಾಹಕರಿಗೆ ಆಹ್ವಾನ ನೀಡುತ್ತಿದ್ದು, ದೇಶಾ ದ್ಯಂತ ಇರುವ ನೇಕಾರರ ಕೇಂದ್ರಗಳಿಂದ ತಯಾರಾದ, ವಿವಿಧ ಕೈಗಳು ನೇಯ್ದ ಸೀರೆಗಳನ್ನು ಪ್ರದರ್ಶಿಸುತ್ತಿದೆ.
ಒಂದೇ ಸೂರಿನಡಿ ಯಲ್ಲಿ, ‘ಪ್ರತೀ ದಾರದಲ್ಲಿ ಭಾರತ’ ಕ್ಕೆ ಜೀವ ಒದಗಿಸುವ ಅಪರೂಪದ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲಿ ವಿವಿಧ ನೇಕಾರರ ಕೇಂದ್ರಗಳಿಂದ ತಯಾರಾದ ನೇಯ್ದ ಸೀರೆ ಗಳನ್ನು ಪ್ರದರ್ಶಿಸುತ್ತಿದ್ದು, ಈ ಪ್ರತಿಯೊಂದು ಸೀರೆಯೂ ಶತಮಾನಗಳಷ್ಟು ಹಳೆಯ ಸಂಪ್ರದಾಯ ಗಳಿಗೆ ಗೌರವವನ್ನು ನೀಡುವುದರ ಜೊತೆಗೆ ಇಂದಿನ ಕಾಲಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸ ಲಾಗಿದೆ. ಜೊತೆಗೆ ಈ ಸಂದರ್ಭವನ್ನು ಸಂಭ್ರಮಿಸಲು ತನೈರ ಸಂಸ್ಥೆಯು ವಿಶೇಷ ಹಬ್ಬದ ಆಫರ್ ಅನ್ನು ಒದಗಿಸುತ್ತಿದೆ. 2 ಸೀರೆಗಳನ್ನು ಖರೀದಿಸಿದರೆ ಶೇ.10 ರಿಯಾಯಿತಿ ಅಥವಾ 3 ಸೀರೆಗಳನ್ನು ಖರೀದಿಸಿದರೆ ಶೇ.15 ರಷ್ಟು ರಿಯಾಯಿತಿ ಆಯ್ದ ಸರಕುಗಳ ಮೇಲೆ, ಸೀಮಿತ ಕಾಲಾವಧಿಗೆ ಲಭ್ಯ ವಿದೆ.
ಇದನ್ನೂ ಓದಿ: Special Economic Zone: ಇಟ್ಟಿಗಟ್ಟಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ SEZ ಘೋಷಣೆ; 28 ಎಕರೆ ವಿಶೇಷ ಆರ್ಥಿಕ ವಲಯಕ್ಕೆ ಗೆಜೆಟ್
ತಮ್ಮ ಹೊಳೆಯುವ ಹೊಳಪು ಮತ್ತು ಅತ್ಯಾಕರ್ಷಕ ಜರಿ ಅಂಚುಗಳಿಗೆ ಹೆಸರಾಗಿರುವ ಕೊಯಂಬ ತ್ತೂರಿನ ಅದ್ದೂರಿ ಕಾಂಜೀವರಂ ಸೀರೆಗಳಿಂದ ಹಿಡಿದು ತಮ್ಮ ವಿಶಿಷ್ಟ ಬ್ರೊಕೇಡ್‌ಗಳಿಗೆ ಪ್ರಸಿದ್ಧ ವಾಗಿರುವ ಗಂಗೆಯ ಘಾಟ್ ಗಳಿಂದ ಬಂದ ಬನಾರಸಿ ನೇಯ್ಗೆ, ನೈಸರ್ಗಿಕ ಚಿನ್ನದ ಬಣ್ಣದಿಂದ ಹೊಳೆಯುವ ಬಗಲ್ ಪುರ್ದಿಂದ ಬರುವ ತಸರ್ ರೇಷ್ಮೆ, ರಾಜ್ ಕೋಟ್ ನ ಇಕಟ್ ಶೈಲಿಯ ರೋಮಾಂಚಕ ಬಣ್ಣಗಳ ಸೀರೆಗಳವರೆಗೆ ಗ್ರಾಹಕರು ಭಾರತದ ಸಮೃದ್ಧ ಜವಳಿ ಸಂಸ್ಕೃತಿಯ ಸಂಪ್ರದಾಯ ಮತ್ತು ಕರಕುಶಲತೆ ಯನ್ನು ಪಯಣ ಮಾಡಬಹುದಾಗಿದೆ.
ಈ ಕುರಿತು ಮಾತನಾಡಿದ ತನೈರ ಸಂಸ್ಥೆಯ ಸಿಇಓ ಶ್ರೀ ಅಂಬುಜ್ ನಾರಾಯಣ್ ಅವರು, “ಸೀರೆಗಳು ಭಾರತದ ಹೆಮ್ಮೆಯಾಗಿವೆ ಮತ್ತು ರಾಷ್ಟ್ರದಾದ್ಯಂತ ಆದರಿಸಲ್ಪಡುವ ಉಡುಗೆಯಾಗಿದೆ ಮತ್ತು ಅಭಿವ್ಯಕ್ತಿ ವೈವಿಧ್ಯಮಯವಾದ ನಮ್ಮ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ. ತನೈರದಲ್ಲಿ ನಾವು ಪ್ರತಿಯೊಬ್ಬ ಮಹಿಳೆಯೂ ಭಾರತೀಯ ಪರಂಪರೆಯ ಭಾಗವಾಗಿರುವಂತೆ ನೋಡಿಕೊಳ್ಳುವ ಕನಸು ಕಂಡಿದ್ದೇವೆ. ಮಹಿಳೆಯು ಶುಭ ಸಂದರ್ಭಕ್ಕೆ ಆಯ್ಕೆ ಮಾಡುವ ಮೊದಲ ಸೀರೆಯಿಂದ ಹಿಡಿದು ಜೀವನಪರ್ಯಂತ ತನ್ನ ಜೊತೆಗೆ ಇಡಬಯಸುವ ಕುಟಂಬದ ಕಾಣಿಕೆಯವರೆಗೆ ಅಪೂರ್ವ ಸೀರೆಗಳನ್ನು ಒದಗಿಸುತ್ತದೆ. ನಮ್ಮ ಸಂಗ್ರಹಗಳನ್ನು ಭಾರತದ ಹಬ್ಬಗಳ ಸೊಗಸನ್ನು ಪ್ರತಿಬಿಂಬಿಸು ವಂತೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.
ತನೈರ ಪ್ರತೀ ಪ್ರಮುಖ ನೇಯ್ಗೆ ಕೇಂದ್ರದಿಂದ ಕೈಯಿಂದ ನೇಯ್ದ ಸೀರೆಗಳನ್ನು ಒದಗಿಸುತ್ತದೆ, ಆದ್ದರಿಂದ ಇಲ್ಲಿ ಪ್ರತಿ ಸಂದರ್ಭಕ್ಕೂ ವಿಶೇಷವಾದದ್ದು ಇರುತ್ತದೆ. ಪ್ರತಿ ಸೀರೆಯು ಅದನ್ನು ರಚಿಸಿದ ಕುಶಲಕರ್ಮಿಗಳ ಕೌಶಲ್ಯ, ತಾಳ್ಮೆ ಮತ್ತು ಉತ್ಸಾಹದ ಗುರುತಾಗಿದೆ. ಹಬ್ಬದ ಋತುವೂ ನಮ್ಮ ಮುಂದಿದ್ದು, ಈ ಸ್ವಾತಂತ್ರ್ಯ ದಿನಾಚರಣೆ ತನೀರಾದಲ್ಲಿ ನಮಗೆ ದುಪ್ಪಟ್ಟು ಸಂಭ್ರಮಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ನಿಖರತೆ ಮತ್ತು ಕಾಳಜಿಯಿಂದ ಕುಶಲಕರ್ಮಿಗಳಿಂದ ರಚಿತವಾದ ಪ್ರತಿಯೊಂದು ಸೀರೆಯು ಕಾಲಾತೀತ ಸಂಪ್ರದಾಯ ಮತ್ತು ಸಮಕಾಲೀನ ಸೊಬಗಿನ ಸಮ್ಮಿಶ್ರಣವಾಗಿದೆ. ಪ್ರೀಮಿಯಂ ಕೈ ಮಗ್ಗದ ಸೀರೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುತ್ತದೆ. ಉತ್ಸವಗಳು ಹತ್ತಿರವಾಗುತ್ತಿದ್ದಂತೆ ಗ್ರಾಹಕರು ತನೈರದ ಕೈಯಿಂದ ನೇಯ್ದ ಸೀರೆಗಳನ್ನು ಕಂಡುಕೊಳ್ಳಬಹುದು. ಇವು ಸಣ್ಣ ಕುಟುಂಬ ದ ಸಂಭ್ರಮಗಳಿಂದ ಹಿಡಿದು ದೊಡ್ಡ ಉತ್ಸವ ಸಮಾರಂಭಗಳವರೆಗೆ ಸೂಕ್ತವಾಗಿವೆ.
ತನೈರ ಮಳಿಗೆಗೆ ಭೇಟಿ ನೀಡಿ ಮತ್ತು ಮುಂಬರುವ ಉತ್ಸವದ ಸಂದರ್ಭಗಳಿಗೆ ಭಾರತದ ಶ್ರೀಮಂತ ಜವಳಿ ಪರಂಪರೆಯ ಒಂದು ಭಾಗವನ್ನು ಮನೆಗೆ ತನ್ನಿ.