ಬೆಂಗಳೂರು, ಅ.29: ವ್ಯಕ್ತಿಯೊಬ್ಬ ಚಪ್ಪಲಿ ಕಾಲಿನಲ್ಲೇ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲೆ ದಾಳಿಗೆ ಯತ್ನಿಸಿದ ಘಟನೆ ಬೆಂಗಳೂರಿನ (Bengaluru) ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಈತ ಬಾಂಗ್ಲಾ ಮೂಲದ (Bangla immigrant) ವ್ಯಕ್ತಿಯಾಗಿದ್ದು, ನಿನ್ನೆ (ಅಕ್ಟೋಬರ್ 28) ಮಧ್ಯಾಹ್ನ ದೇಗುಲಕ್ಕೆ ನುಗ್ಗಿ ಹುಚ್ಚಾಟ (vandalism) ಮೆರೆದಿದ್ದಾನೆ. ದೇವಸ್ಥಾನದ (Temple) ದ್ವಾರಪಾಲಕ ವಿಗ್ರಹವನ್ನು ಕೂಡ ವಿರೂಪಗೊಳಿಸಿದ್ದಾನೆ ಎನ್ನಲಾಗುತ್ತಿದೆ.
ಪುರಾತನ ಕಾಲದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನುಗ್ಗಿ ಹುಚ್ಚಾಟ ಮೆರೆದು ದ್ವಾರಪಾಲಕ ವಿಗ್ರಹ ವಿರೂಪಗೊಳಿಸಿದ ಆರೋಪಿ ಕಬೀರ್ ಮೊಂಡೆಲ್ ಎಂಬಾತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೊದಲು ದೇವಸ್ಥಾನದ ಗೋಪುರಕ್ಕೆ ಕಲ್ಲು ಹೊಡೆದು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಬಳಿಕ ಚಪ್ಪಲಿ ಕಾಲಿನಲ್ಲಿ ಗರ್ಭಗುಡಿ ಒಳಗೆ ಪ್ರವೇಶ ಮಾಡಿ ಮೂಲ ವಿಗ್ರಹದ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಕುಡಿದ ಅಮಲಿನಲ್ಲಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಕಬೀರ್ ಮಂಡಲ್ ಅಕ್ರಮವಾಗಿ ಭಾರತಕ್ಕೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆಸಾಮಿ, ಪಶ್ಚಿಮ ಬಂಗಾಳ ಮೂಲಕವಾಗಿ ನಗರಕ್ಕೆ ಎಂಟ್ರಿ ಕೊಟ್ಟಿದ್ದ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಸೇರಿ ಈತನನ್ನು ಮಾರತ್ ಹಳ್ಳಿ ಪೊಲೀಸ್‌ರ ವಶಕ್ಕೆ ನೀಡಿದ್ದಾರೆ. ಗ್ರಾಮಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Gas Geyser leak: ಗ್ಯಾಸ್ ಗೀಸರ್ ಸೋರಿಕೆಯಾಗಿ ಅಕ್ಕ- ತಂಗಿ ಉಸಿರುಗಟ್ಟಿ ಸಾವು
ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಈ ಘಟನೆ ನಡೆದಿದ್ದು, ಯುವಕನ ಹುಚ್ಚಾಟ ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ. ದೇವರಬೀಸನಹಳ್ಳಿಯಲ್ಲಿ ಈತ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಘಟನೆ ಬಳಿಕ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ಆರ್ ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿದ್ದಾರೆ.
ಇನ್‌ಸ್ಟಾದಲ್ಲಿ ಬಾಲಕಿಯ ಪರಿಚಯಿಸಿಕೊಂಡು ಕಿರುಕುಳ, ಮೂವರ ಸೆರೆ
ಹಾನಗಲ್: ಇನ್‌ಸ್ಟಾಗ್ರಾಂನಲ್ಲಿ ಪರಿಚಿತವಾದ 10ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರು ಹಾಗೂ ಅವರಿಗೆ ಸಹಾಯ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ. 10ನೇ ತರಗತಿಯ ಓದುತ್ತಿದ್ದ ಬಾಲಕಿಗೆ ಆರೋಪಿ ಉದಯ್ ಎಂಬಾತ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ. ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಪ್ರೀತಿ ಮಾಡುವುದಾಗಿ ನಂಬಿಸಿ, ಮೂಡೂರ ಗ್ರಾಮದ ಮರಿಯಮ್ಮ ಜಾತ್ರೆಗೆ ಹೋದಾಗ, ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಲ್ಲದೆ ತನ್ನ ದೊಡ್ಡಪ್ಪನ ಜಮೀನಲ್ಲಿಯೂ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅನಂತರ ದಿನಗಳಲ್ಲಿ ಅವರಿಬ್ಬರೂ ದೂರವಾಗಿದ್ದರು.
2025ರ ಏಪ್ರಿಲ್‌ನಲ್ಲಿ ಇದೇ ಬಾಲಕಿಯನ್ನು ಇನ್ನೊಬ್ಬ ಆರೋಪಿ ಕಿಶನ್ ಎಂಬಾತ ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು, ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ. ಅನಂತರ ಈತನ ಸ್ನೇಹಿತರಾದ ಆಕಾಶ ಪರಶುರಾಮ ಮಂತಗಿ ಮತ್ತು ಚಂದ್ರು ಬಾಲಕಿಯನ್ನು ಕಿಶನ್‌ನೊಂದಿಗೆ ಹೋಗಲು ಸಹಾಯ ಮಾಡಿದ್ದಲ್ಲದೆ, ಬಾಲಕಿಗೆ ಅವಾಚ್ಯವಾಗಿ ನಿಂದಿಸಿದ್ದರು. ಇದಾದ ಬಳಿಕ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗ ಆಕೆ 8 ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ವೈದ್ಯರಿಂದ ತಿಳಿದುಬಂದಿದೆ. ಈ ಕುರಿತು ಅ. 22ರಂದು ಬಾಲಕಿಯ ತಾಯಿ ನೀಡಿದ ದೂರಿನ ನೀಡಿದ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.