ಬೆಂಗಳೂರು, ನ.11: ಓದಿನ ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ಪ್ರಕಾಶಕ ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕ ಬುಕ್ಸ್ ವತಿಯಿಂದ 'ವೀರಲೋಕ ಪುಸ್ತಕ ಸಂತೆ – 3' (Veeraloka Pustaka Santhe-3) ಕನ್ನಡದ ಹಬ್ಬವನ್ನು ನವೆಂಬರ್ 14ರಿಂದ 16ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10ರವರೆಗೆ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಾಶಕ ವೀರಕಪುತ್ರ ಎಂ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಹಲವು ಸಾಂಸ್ಕೃತಿಕ ಗುರುತುಗಳನ್ನು ಮೂಡಿಸುತ್ತಾ ಬಂದಿರುವ ವೀರಲೋಕ ಬುಕ್ಸ್ ಸಂಸ್ಥೆಯು, ಓದುಗ-ಲೇಖಕ-ಪ್ರಕಾಶಕ ಮೂವರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ಆವೃತ್ತಿಗಳಿಗೆ ಕನ್ನಡಿಗರು ತೋರಿಸಿದ ಪ್ರೀತಿ ಅಪಾರ. ಈ ಬಾರಿಯೂ ಪುಸ್ತಕ ಸಂತೆ-3 ಅದ್ಧೂರಿಯಾಗಿ ಆಯೋಜನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪುಸ್ತಕ ಸಂತೆ -3ರ ವಿಶೇಷತೆಗಳು
- 2 ಲಕ್ಷಕ್ಕೂ ಹೆಚ್ಚು ಓದುಗರ ಆಗಮನದ ನಿರೀಕ್ಷೆ
- 1000 ಕ್ಕೂ ಹೆಚ್ಚು ಲೇಖಕರ ಸಂಗಮವಾಗಲಿದೆ
- ಮುನ್ನೂರು ಪ್ರಕಾಶಕರ ಸಂಪರ್ಕ ಸಿಗಲಿದೆ
- 200 ಕ್ಕೂ ಹೆಚ್ಚು ಮಳಿಗೆಗಳಿವೆ
- ಮಕ್ಕಳಿಗೆ ಆಟದ ಯಂತ್ರಗಳಿರುತ್ತವೆ
- ಶಾಪಿಂಗ್ ಸೌಲಭ್ಯವಿದೆ
- ಎರಡು ವೇದಿಕೆಗಳಲ್ಲಿ ನಿರಂತರವಾಗಿ ಇಡೀ ದಿನ ಕಾರ್ಯಕ್ರಮ ಆಯೋಜನೆಯಾಗಿವೆ
- ಓಲೇ ವಿಭಾಗದಲ್ಲಿ ನೂರರಷ್ಟು ಲೇಖಕರ ನೇರ ಮುಖಾಮುಖಿ ಸಾಧ್ಯವಾಗಲಿದೆ
- 40 ಜನರ ಲೇಖಕರಿಂದ ಇಪ್ಪತ್ತು ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ
- 22 ನೂತನ ಕೃತಿಗಳ ಲೋಕಾರ್ಪಣೆ ಇದೆ
- 10 ರೀತಿಯ ಚಟುವಟಿಕೆಗಳನ್ನು ರೂಪಿಸಲಾಗಿದೆ
- ನಾಟಕ, ಗೀತ ಗಾಯನಗಳು ಇರಲಿವೆ

ಕಾರ್ಯಕ್ರಮದ ವೇಳಾಪಟ್ಟಿ
ನ.14ರಂದು ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ 4 ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಮಾಜಿ ಸಚಿವ ಎಸ್. ಟಿ. ಸೋಮಶೇಖರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಸಂಸದ ವಿ.ಎಸ್. ಉಗ್ರಪ್ಪ, ಶಾಸಕ ಸಿ.ಕೆ. ರಾಮಮೂರ್ತಿ ಉಪಸ್ಥಿತರಿರಲಿದ್ದಾರೆ.
ಕೃತಿಕಾರರು ಮತ್ತು ಕೃತಿಗಳು:
- ಹಂಝ ಮಲಾರ್
ಕೃತಿ: ಅರ್ಧ ಹಿಂದೂ ಅರ್ಧ ಮುಸ್ಲಿಂ - ರೋಹಿತ್ ನಾಗೇಶ್
ಕೃತಿ: ಅವಿತಿದ್ದ ಕವಿತೆಗಳು - ಸಾತನೂರು ದೇವರಾಜ್
ಕೃತಿ: ವಂಶವಾಹಿ ಪರಿಷ್ಕರಣ ತಂತ್ರಜ್ಞಾನ - ರವೀಂದ್ರ ಕೊಟಕಿ
ಕೃತಿ: ಲವ್ ಆದಮೇಲೆ
- 11.30 ರಿಂದ 1ವರೆಗೆ ಚಟುವಟಿಕೆ: ಟಂಗ್ ಟ್ವಿಸ್ಟರ್ (ನಡೆಸಿಕೊಡುವವರು: ಶ್ರೀ ಎಲ್.ಜಿ. ಜ್ಯೋತೀಶ್ವರ)2.00-3.00 ಸಂಕಿರಣ: ಲೈಫ್ ಸ್ಕಿಲ್ಸ್
ನಡೆಸಿಕೊಡುವವರು: ಶ್ರೀಮತಿ ಯಮುನಾ ಶ್ರೀನಿಧಿ
3.00-5.00 ಚಟುವಟಿಕೆ: ಓರಿಗಾಮಿ ಮತ್ತು ಪೇಪರ್ ಆರ್ಟ್ಸ್
ನಡೆಸಿಕೊಡುವವರು: ಮರಳೀಧರ್ ಮತ್ತು ಹುಸೇನಿ
ಉದ್ಘಾಟನಾ ಸಮಾರಂಭ
ಸಂಜೆ 5 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ವೇಳೆ ನಾಲ್ಕು ಕೃತಿಗಳ ಬಿಡುಗಡೆಯಾಗಲಿವೆ. ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕೆ. ಸೋಮಶೇಖರ, ಶಾಸಕ ಸಿ. ಕೆ. ರಾಮಮೂರ್ತಿ ಭಾಗಿಯಾಗಲಿದ್ದಾರೆ.
ಕೃತಿಕಾರರು ಮತ್ತು ಕೃತಿಗಳು:
- ವಿಶ್ವೇಶ್ವರ ಭಟ್- ಕೈ ಹಿಡಿದು ನೀ ನಡೆಸು ತಂದೆ! - 02
- ಸಂತೋಷ ಹಾನಗಲ್ಲ-ಸದನದಲ್ಲಿ ಡಾ.ವಿಷ್ಣುವರ್ಧನ್
- ಸತೀಶ್ ಹುಳಿಯಾರ್- ಡಾ. ಎಚ್.ಎಸ್.ವಿ ಅವರ ಗೀತರೂಪಕಗಳು
- ಬೊಳುವಾರು ಮೊಹಮ್ಮದ್ ಕುಂಞ- ಮುತ್ತುಪ್ಪಾಡಿಯ ಮಾಟಗಾತಿ
ಸಂವಾದ ವಿಭಾಗದಲ್ಲಿ: ಬೆಳಗ್ಗೆ 11 ರಿಂದ 6ರವರೆಗೆ
ಕುಸುಮಾ ಆಯರಹಳ್ಳಿ- ದೀಪಾ ರವಿಶಂಕರ್, ಕಾ.ವೆಂ. ಶ್ರೀನಿವಾಸಮೂರ್ತಿ - ಆನಂದ ಮಾದಲಗೆರೆ, ಬೇಲೂರು ರಘುನಂದನ - ಶಿವಪ್ರಸಾದ್ ಪಟ್ಟಣಗೆರೆ, ಭಾರತಿ ಹೆಗಡೆ - ಸುಮಾ ಸತೀಶ್, ವೆಂಕಟೇಶ ಮಾಚಕನೂರ- ಟಿ. ಎಸ್. ದಕ್ಷಿಣಾಮೂರ್ತಿ, ಮಧು ವೈ.ಎನ್ - ಶಿವಕುಮಾರ ಮಾವಲಿ
ಓಲೇ ವಿಭಾಗದಲ್ಲಿ: ಮಧ್ಯಾಹ್ನ 2 ರಿಂದ 5ರವರೆಗೆ
ಬೇಲೂರು ರಾಮಮೂರ್ತಿ, ಮಳವಳ್ಳಿ ಪ್ರಸನ್ನ, ಎಂ. ಆರ್. ದತ್ತಾತ್ರಿ, ಅನು ಬೆಳ್ಳಿ, ದಾದಾಪೀರ್ ಜೈಮನ್, ಶ್ರೀ ಶರತ್ ಎಂ.ಎಸ್, ನಾಮದೇವ ಕಾಗದಗಾರ, ಬಸವರಾಜ ನಡಗಡ್ಡಿ, ಪ್ರಮೋದ್ ಕರಣಂ, ಅರ್ಜುನ್ ದೇವಾಲಾದಕೆರೆ, ವೆಂಕಟೇಶ್ ಎಸ್, ಜಗದೀಶ ನಡಹಳ್ಳಿ, ಇಮ್ಮಡಿ ಸಂತೋಷ್, ಶಾಲಿನಿ ಮೂರ್ತಿ, ವಿದ್ಯಾರಶ್ಮಿ ಪೆಲತಡ್ಕ
ನಿರೂಪಕರು: ಶ್ರೀಮತಿ ಸಂಧ್ಯಾ ಭಟ್, ಕು. ಸ್ನೇಹ ಗೌಡ, ಎಸ್. ದಿವಾಕರ್
ನವೆಂಬರ್ 15ರ ಕಾರ್ಯಕ್ರಮಗಳು
ಬೆಳಗ್ಗೆ 10ರಿಂದ 11.30ರವರೆಗೆ 5 ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಸಚಿವ ಎನ್. ಚಲುವರಾಯಸ್ವಾಮಿ, ಕಾದಂಬರಿಕಾರ ವಸುಧೇಂದ್ರ ಉಪಸ್ಥಿತರಿರಲಿದ್ದಾರೆ.
ಕೃತಿಕಾರರು ಮತ್ತು ಕೃತಿಗಳು:
1.ಸುಮತಿ ಬಿಕೆ, ಕಾನ್ಸೆಪ್ಟಾ ಫೆರ್ನಾಂಡಿಸ್, ಚಂದೂ
ಕೃತಿ: ಕನ್ನಡ ಕಜ್ಜಾಯ
2.ಡಾ. ಲಕ್ಷ್ಮಣ ಕೌಂಟೆ
ಕೃತಿ: ಕಿತ್ತೂರು ಹುಲಿ ಸಂಗೊಳ್ಳಿರಾಯಣ್ಣ
3.ಶ್ರೀದೇವಿ ಕೆರೆಮನೆ
ಕೃತಿ: ಕಡಲಂಚಿನ ಮೌನ ಧ್ಯಾನ
4.ಟಿ. ಗೋವಿಂದರಾಜು
ಕೃತಿ: ಕೃಷ್ಣಯ್ಯನ ಕೊಳಲು
5.ಉಷಾ ನರಸಿಂಹನ್
ಕೃತಿ: ಕಾಲ ಹೊರಳಿನ ಚಹರೆ
- 11.30-1ರವರೆಗೆ ವಿಚಾರ ಸಂಕಿರಣ: ವಾಯುಸೇನೆ ತರಬೇತಿ ಮಾಹಿತಿ
ನಡೆಸಿಕೊಡುವವರು: ಪೂರ್ಣಿಮಾ ಮಾಳಗಿಮನಿ - 2.00-3.00 ಚಟುವಟಿಕೆ: ಮಕ್ಕಳ ಆಟಗಳು
ನಡೆಸಿಕೊಡುವವರು: ತನುಶ್ರೀ - 3.00-4.00 ಗಜಲ್ ಗಾಯನ
ನಡೆಸಿಕೊಡುವವರು: ಶ್ರೀ ಅನುರಾಗ್ ಗದ್ದಿ
ಸಂಜೆ 4ರಿಂದ-5ರವರೆಗೆ ಸಂಕಿರಣ: ಸಾಹಿತ್ಯದಲ್ಲಿ ಸಂಪಾದಿಸುವುದು ಹೇಗೆ?
ಭಾಗವಹಿಸುವವರು: ಶ್ರೀ ದೊಡ್ಡಗೌಡ ಆರ್, ರಂಗಸ್ವಾಮಿ ಮೂಕನಹಳ್ಳಿ
ಸಂದರ್ಶಿಸುವವರು: ಮಹೇಶ ಅರಬಳ್ಳಿ
ಸಂಜೆ 5ಕ್ಕೆ ಐದು ಕೃತಿಗಳ ಲೋಕಾರ್ಪಣೆ ಸಮಾರಂಭ
ಅತಿಥಿಗಳು:
ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ
ಶೋಭಾ ಕಂರದ್ಲಾಜೆ, ಸಣ್ಣ & ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವರು
ಮಲ್ಲೇಪುರ ಜಿ ವೆಂಕಟೇಶ, ಹಿರಿಯ ಸಾಹಿತಿಗಳು
ಕೃತಿಕಾರರು ಮತ್ತು ಕೃತಿಗಳು:
- ದೀಪಾ ಹಿರೇಗುತ್ತಿ
ಕೃತಿ: ಸೋಲು ಗೆಲುವಿನ ಗೆಳೆಯ
2. ಜಯಪ್ರಕಾಶ ನಾರಾಯಣ
ಕೃತಿ: ಜೀವ ಜೀವದ ನಂಟು
3. ಎಸ್. ದಿವಾಕರ್
ಕೃತಿ: ಎರಡು ರಟ್ಟುಗಳ ನಡುವೆ
4. ಪುಂಡಲೀಕ ಕಲ್ಲಿಗನೂರು
ಕೃತಿ: ಶಿಲ್ಪಕಲೆಯಲ್ಲಿ ರಾಮಾಯಣ
5. ಎಂ.ಎಸ್. ಶ್ರೀರಾಮ್
ಕೃತಿ: ನದಿಯ ಮೂರನೆಯ ದಂಡೆ
ಸಂವಾದ ವಿಭಾಗದಲ್ಲಿ: ಬೆಳಿಗ್ಗೆ 11ರಿಂದ ರಿಂದ ಸಂಜೆ 6ರವರೆಗೆ
ಜಿ.ಬಿ. ಹರೀಶ - ಕು. ದಿವ್ಯಾ ಹೆಗಡೆ, ಹನೂರು ಕೃಷ್ಣಮೂರ್ತಿ - ಎಚ್.ಎಲ್. ಪುಷ್ಪಾ, ಶಿವಕುಮಾರ ಮಾವಲಿ - ಗೀತಾ, ಕೇಶವ ಮಳಗಿ - ಸುಧಾಕರ ದೇವಾಡಿಗ, ನಾ. ದಾಮೋದರ ಶೆಟ್ಟಿ - ಅಣಕು ರಾಮನಾಥ್, ಜಯಶ್ರೀ ಕಾಸರವಳ್ಳಿ - ಸರಳ, ಸೇತುರಾಂ - ಶ್ರೀಮತಿ ಶೋಭಾ ರಾವ್
ಓಲೇ ವಿಭಾಗದಲ್ಲಿ: ಮಧ್ಯಾಹ್ನ 11 ರಿಂದ ಸಂಜೆ 5
ಶರತ್ ಭಟ್ ಸೇರಾಜೆ, ಎನ್ ಗುಣಶೀಲ, ನಾಗವೇಣಿ ಹೆಗ್ಡೆ, ದೇವರಾಜು ಚನ್ನಸಂದ್ರ, ಜಯರಾಮಚಾರಿ, ನವೀನ್ ಕೃಷ್ಣ ಉಪ್ಪಿನಂಗಡಿ, ಗುಂಡೂರಾವ್ ದೇಸಾಯಿ, ಜಯಶ್ರೀ ಬಿ ಕದ್ರಿ, ಗಿರೀಶ್ ವಿ ಎಸ್, ಎ ಸರಸಮ್ಮ, ಸತ್ಯಕಿ, ಅಶ್ವಿನಿ ಶಾನುಭಾಗ, ಕಿರಣ್ ಹಿರಿಸಾವೆ, ಶೈಲೇಶ್ ಕುಮಾರ್, ರವೀಂದ್ರ ಮುದ್ದಿ, ಕೃಪಾ ದೇವರಾಜ್, ಗಣೇಶ ಕಾಸರಗೋಡು, ಗಜಾನನ ಶರ್ಮಾ, ಮಧು ವೈ ಎನ್, ಮಂಜುನಾಥ್ ಚಾಂದ್, ಶುಭಶ್ರೀ ಭಟ್ಟ, ಸಂತೋಷ ಕುಮಾರ್ ಮೆಹೆಂದಳೆ, ನಾಗೇಶ್ ಕುಮಾರ್ ಸಿ ಎಸ್, ಗುರುಪ್ರಸಾದ್ ಕಂಟಲಗೆರೆ
ಸಂಜೆ 6.00 ರಿಂದ ಗೀತ ಗಾಯನ
ನಡೆಸಿಕೊಡುವವರು: ಎಂ.ಡಿ. ಪಲ್ಲವಿ ಮತ್ತು ತಂಡ
ನಿರೂಪಕರು: ಯದೀಶ್ , ವಿಜಯಲಕ್ಷ್ಮಿ , ಬಿ.ಕೆ. ಸುಮತಿ, ಎಸ್. ದಿವಾಕರ್
ನವೆಂಬರ್ 16ರ ಕಾರ್ಯಕ್ರಮಗಳು
ಬೆಳಗ್ಗೆ 10ರಿಂದ 11.30ರವರೆಗೆ ಐತಿಹಾಸಿಕ ಕಥಾಸ್ಪರ್ಧೆ ಬಹುಮಾನ ವಿತರಣೆ ಮತ್ತು ಪ್ರಾತಿನಿಧಿಕ ಕಥಾಸಂಕಲನ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಸಂಸದ ತೇಜಸ್ವಿ ಸೂರ್ಯ, ತೀರ್ಪುಗಾರರಾದ ಡಾ. ಲಕ್ಷ್ಮಣ ಕೌಂಟೆ, ನಾಗರಾಜ ವಸ್ತಾರೆ, ಪುಸ್ತಕ ಸಂತೆ ರೂವಾರಿಗಳು ವೀರಕಪುತ್ರ ಶ್ರೀನಿವಾಸ ಉಪಸ್ಥಿತರಿರಲಿದ್ದಾರೆ.
ಕೃತಿ: ಇತಿಹಾಸದ ಪುಟಗಳಿಂದ
11.30-2.00 ಥಟ್ ಅಂತ ಹೇಳಿ ಮಹಾಸಂಚಿಕೆ
ನಡೆಸಿಕೊಡುವವರು: ಡಾ. ನಾ ಸೋಮೇಶ್ವರ