JC Road: ಜೆಸಿ ರಸ್ತೆಯಲ್ಲಿ 5 ದಿನಗಳ ಕಾಲ ಸಂಚಾರ ನಿರ್ಬಂಧ, ವೈಟ್ ಟಾಪಿಂಗ್ ಕಾಮಗಾರಿ
White Topping: ಈ ಕುರಿತಾಗಿ ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಜೆ.ಸಿ ರಸ್ತೆಯಲ್ಲಿ ಬಸ್ ಹಾಗೂ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಜೊತೆಗೆ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ.


ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಜೆ.ಸಿ ರಸ್ತೆಯಲ್ಲಿ (J C road) ಕಳೆದ ಕೆಲ ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನಿತ್ಯ ಇಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಇದೀಗ ಜೆ.ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ (White tapping work) ನಡೆಯುತ್ತಿದ್ದು, ಇಂದಿನಿಂದ (ಆ. 25) ಆಗಸ್ಟ್ 30ರ ವರೆಗೆ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು, ಬಸ್ ಇತ್ಯಾದಿ ವಾಹನಗಳ ಸಂಚಾರವನ್ನು (traffic alert) ನಿರ್ಬಂಧಿಸಲಾಗಿದೆ.
ಈ ಕುರಿತಾಗಿ ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಜೆ.ಸಿ ರಸ್ತೆಯಲ್ಲಿ ಬಸ್ ಹಾಗೂ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಜೊತೆಗೆ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ.
ಯಾವೆಲ್ಲಾ ವಾಹನ ಸಂಚಾರ ನಿರ್ಬಂಧ
ಜೆಸಿ ರಸ್ತೆ, ಮಿನರ್ವಾ ಸರ್ಕಲ್ ಕಡೆಗೆ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್‌ಗಳಿಗೆ ಅವಕಾಶವಿಲ್ಲ.
"Traffic Advisory" #ಸಂಚಾರಸಲಹೆ White tapping work is going on J C road @citymarkettrps@CPBlr@Jointcptraffic @BlrCityPolice @blrcitytraffic pic.twitter.com/l1ojNq3NiV
— DCP TRAFFIC WEST (@DCPTrWestBCP) August 24, 2025
ಪರ್ಯಾಯ ಮಾರ್ಗಗಳು ಹೀಗಿವೆ
ರಾಮಕೃಷ್ಣ ಆಶ್ರಮ, ಬುಲ್ ಟೆಂಪಲ್ ರಸ್ತೆ, ಚಾಮರಾಜ ಪೇಟೆ, ಗೂಡ್ಸ್ ಶೆಡ್ ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವುದು.
ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಕೆ ಆರ್ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್, ಅಶೋಕ ಪಿಲ್ಲರ್ ಸಿದ್ಧಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ಸೇರುವುದು.
ಹೊಸೂರು ರಸ್ತೆಯಿಂದ ಡಬಲ್ ರಸ್ತೆ, ರಿಚ್ಮಂಡ್ ಸರ್ಕಲ್, ಹಡ್ಸನ್ ಸರ್ಕಲ್, ಕೆ.ಜಿ. ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದು.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜೆ.ಸಿ ರಸ್ತೆಯಲ್ಲಿ ಅತಿಹೆಚ್ಚು ವಾಹನಗಳ ಸಂಚಾರದಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸದ್ಯ ರಸ್ತೆಯ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಆಮೆಗತಿಯ ಈ ಕಾಮಗಾರಿಯನ್ನು ವೇಗವಾಗಿ ಮಾಡುವಂತೆ ಬಿಬಿಎಂಪಿಗೆ ಜನರು ಒತ್ತಾಯಿಸಿದ್ದಾರೆ.