Bidar News: ಮಂಗ ಓಡಿಸಲು ಹೋದ ವೇಳೆ ಹೆಜ್ಜೇನು ದಾಳಿ; ಮರದಿಂದ ಬಿದ್ದು ವ್ಯಕ್ತಿ ಸಾವು
Bidar News: ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ.


ಬೀದರ್: ಜಮೀನಲ್ಲಿ ಬಂದ ಮಂಗ ಓಡಿಸಲು ಹೋದ ವೇಳೆ ಹೆಜ್ಜೇನು ದಾಳಿ ಮಾಡಿದ್ದರಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ನಡೆದಿದೆ.
ಯುವರಾಜ ನಾಗಶಟ್ಟಿ ಬಿರಾದಾರ (42) ಮೃತ ವ್ಯಕ್ತಿ.
ಜಮೀನಿಗೆ ಬಂದಿದ್ದ ಮಂಗಗಳನ್ನು ಓಡಿಸಲೆಂದು ತಂದೆ ಹಾಗೂ ಸಹೋದರನೊಂದಿಗೆ ಯುವರಾಜ ನಾಗಶಟ್ಟಿ ಬಿರಾದಾರ ತೆರಳಿದ್ದ ವೇಳೆ ಜಮೀನಿನಲ್ಲಿರುವ ಮಾವಿನ ಮರದಲ್ಲಿದ್ದ ಹೆಜ್ಜೇನು ಓಡಿಸಲು ಮರದ ಕೆಳಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಮಂಗಗಳನ್ನು ಓಡಿಸಲು ಯುವರಾಜ ಮರ ಹತ್ತಿದ್ದಾನೆ.
ಮರ ಹತ್ತಿದ ವೇಳೆ ಏಕಾಏಕಿಯಾಗಿ ಈತನ ಮೇಲೆ ಹೆಜ್ಜೇನು ನೋಣಗಳು ದಾಳಿ ನಡೆಸಿದ್ದು, ಇದರಿಂದ ಮರದ ಮೇಲಿಂದ ಈತ ನೇರವಾಗಿ ಕೆಳಗೆ ಹಾಕಿದ್ದ ಬೆಂಕಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಚಿಕಿತ್ಸೆಗೆಂದು ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಸಿಪಿಐ ಅಲಿಸಾಬ್, ಪಿಎಸ್‌ಐ ಶಿವಪ್ಪ ಮೇಟಿ ಸೇರಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಶರಣು ಸಲಗರ್ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಮೃತ ವ್ಯಕ್ತಿ ಗಡಿಗೌಂಡಗಾಂವ ಗ್ರಾಮದ ಪಿಕೆಪಿಎಸ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತಿದ್ದ. ಈತನ ಸಾವಿನಿಂದಾಗಿ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ಹೀಗಾಗಿ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಮೇಲೆ ನೌಕರಿ ಕೋಡಿಸಬೇಕು ಎಂದು ಕುಟುಂಬಸ್ಥರು ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ರೈಲು ಹತ್ತಲು ಮುಗಿಬಿದ್ದ ಪ್ರಯಾಣಿಕರು; ಕಾಲ್ತುಳಿತ ಸ್ಥಿತಿ ನಿರ್ಮಾಣ; ಅಷ್ಟಕ್ಕೂ ಆಗಿದ್ದೇನು?
ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ
ವಿಜಯಪುರ: ಹಾಡಹಗಲೇ ಗುಂಡಿನ ದಾಳಿ (Vijayapura shootout case) ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ನಡೆದಿದೆ. ಕಾರಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದಿದ್ದಾರೆ. ಸತೀಶ್ ರಾಠೋಡ್ ಕೊಲೆಯಾದ ವ್ಯಕ್ತಿ. ರಮೇಶ್ ಚವ್ಹಾಣ್ ಹಾಗೂ ಇತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ರಮೇಶ್ ಚವ್ಹಾಣ್ ಹಾಗೂ ಇತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಗುಂಡಿನ ದಾಳಿಯಿಂದ ಸ್ಥಳದಲ್ಲೇ ಸತೀಶ್ ಮೃತಪಟ್ಟಿದ್ದು, ದಾಳಿ ಮಾಡಿದ ಓರ್ವ ಹಲ್ಲೆಕೋರನ ಕಿವಿ ತುಂಡಾಗಿ ಬಿದ್ದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂಬುವುದನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಸತೀಶ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ತಿರುಮಣಿ ಸೋಲಾರ್ ಪಾರ್ಕ್‌ನಲ್ಲಿ ಬಂಡೆ ಸ್ಫೋಟದ ವೇಳೆ ಕಾರ್ಮಿಕ ಸಾವು, ಮತ್ತೊಬ್ಬ ಗಂಭೀರ
ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸಮೀಪ ಸೋಲಾರ್ ಪಾರ್ಕ್‌ನಲ್ಲಿ (Pavagada Solar Park) ಬಂಡೆ ಸ್ಫೋಟದ ವೇಳೆ ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ರಾಯಚೂರು ಮೂಲದ ಬಸವರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ:
KSPDCL ನಿಂದ 1002 ಎಕರೆ ಪ್ರದೇಶವನ್ನು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ JSW ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಪಾರ್ಕ್ ನಿರ್ಮಾಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಸಮೀಪದಲ್ಲಿ ಇದ್ದ ಬಸವರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದು, ಕಾರ್ಮಿಕ ಶಿವಯ್ಯ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಿಂದ ಅಕ್ಕಪಕ್ಕದ ಜಾಗ ಹಾಗೂ ಬೆಟ್ಟಕ್ಕೂ ಬೆಂಕಿ ಹಬ್ಬಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Madhugiri News: ಗ್ರಾಮಸ್ಥರ ಹೆಸರಿನಲ್ಲಿ ಲಕ್ಷ ಲಕ್ಷ ಸಾಲ ಪಡೆದು ದಂಪತಿ ಪರಾರಿ!
ಬಂಡೆ ಬ್ಲಾಸ್ಟ್ ಮಾಡಲು ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ KSPSCL ಎಇಇ ಮಹೇಶ್, ಗ್ರಾಮಾಂತರ ಸಿಪಿಐ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.