Murder Case: ಪ್ರೀತಿಸಿ ಮದುವೆಯಾದವರ ಜಗಳ ಕೊಲೆಯಲ್ಲಿ ಅಂತ್ಯ; ಕೈ, ಕಾಲು ಕಟ್ಟಿ ಪತಿಯನ್ನೇ ಹತ್ಯೆಗೈದ ಪತ್ನಿ!
Murder Case: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿಯೇ ಪತಿಯ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಕೈ ಕಾಲು ಕಟ್ಟಿಹಾಕಿ ತಲೆಗೆ ಹೊಡೆದಿದ್ದರಿಂದ ಪತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.


ಬೀದರ್: ಪ್ರೀತಿಸಿ ಮದುವೆಯಾದ ಪತಿ ಪತ್ನಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ (Murder Case) ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿಯೇ ಪತಿಯ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಶ್ರೀಧರ (28) ಕೊಲೆಯಾದವರು. ಪತ್ನಿ ಸವಿತಾ ಜೋಜನೆ ಕೊಲೆ ಆರೋಪಿ. ಈತ ಐದು ವರ್ಷದ ಹಿಂದೆ ಲಾಧಾ ಗ್ರಾಮದ ಸವಿತಾ ಜತೆಗೆ ಪ್ರೀತಿಸಿ ಮದುವೆಯಾಗಿದ್ದ. ಈ ನಡುವೆ ಅನೇಕ ಬಾರಿ ಸವಿತಾ ಮತ್ತು ಶ್ರೀಧರ ಮಧ್ಯೆ ಜಗಳವಾಗಿವೆ. ಕೊಲೆ ಮಾಡುವ ಉದ್ದೇಶದಿಂದ ಕೈ ಕಾಲು ಕಟ್ಟಿಹಾಕಿ ತಲೆಗೆ ಹೊಡೆದಿದ್ದರಿಂದ ಪತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪತ್ನಿ ಸವಿತಾ ಜೋಜನೆ, ಆಕೆಯ ತಾಯಿ ವಿಜಯಲಕ್ಷ್ಮೀ ಎಂಪಳ್ಳೆ, ತಂದೆ ಶೆಶಿಕಾಂತ ಎಂಪಳ್ಳೆ ಜತೆ ಸೇರಿ ಹತ್ಯೆ ಮಾಡಿದ್ದಾಳೆ ಎಂದು ಮೃತ ಶ್ರೀಧರ್ ತಂದೆ ಶಿವರಾಜ ಜೋಜನೆ ಅವರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡ ಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೃತನ ತಂದೆ ಶಿವರಾಜ ಜೋಜನೆ ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ನಂದಕುಮಾರ ಮೂಳೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Cheque Bounce Case: ಚೆಕ್ ಬೌನ್ಸ್ ಪ್ರಕರಣ; 7.5 ಲಕ್ಷ ವಂಚಿಸಿದ್ದ ಆರೋಪಿ ಸೆರೆ
ಅಸಹಜ ಲೈಂಗಿಕತೆಗೆ ಒಪ್ಪದ ಪತ್ನಿಯ ಕೊಂದು ನೇಣು ಬಿಗಿದುಕೊಂಡ ಪತಿ!

ಬೆಂಗಳೂರು: ಅಸಹಜ ಲೈಂಗಿಕತೆಗೆ ಹೆಂಡತಿ ಒಪ್ಪಲಿಲ್ಲವೆಂದು ಮಗನ ಎದುರೇ ಆಕೆಯನ್ನು ಕೊಂದು ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Murder Case) ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ನಡೆದಿದೆ. ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ತೋರಿಸಿದ ವ್ಯಕ್ತಿ ನೀನೂ ಕೂಡ ಅದೇ ರೀತಿಯಲ್ಲಿ ಸಹಕರಿಸುವಂತೆ ಒತ್ತಾಯಿಸಿದ್ದರಿಂದ ಹೆಂಡತಿ ನಿರಾಕರಿಸಿದ್ದಾಳೆ. ಈ ಬಗ್ಗೆ ಅಮ್ಮನಿಗೆ ದೂರು ಹೇಳಿ ಬುದ್ಧಿ ಹೇಳಿದ್ದಕ್ಕೆ ಗಂಡ ಕೋಪಗೊಂಡಿದ್ದು. ಬಳಿಕ 6 ವರ್ಷದ ಮಗನ ಕಣ್ಣೆದುರಿಗೆ ಹೆಂಡತಿಯ ಕತ್ತು ಹಿಸುಕಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಮತಾ (33) ಕೊಲೆಯಾದ ಮಹಿಳೆ. ಸುರೇಶ್ (40) ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದಾನೆ.
ಸುರೇಶ್ ಮತ್ತು ಮಮತಾ ದಂಪತಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸುರೇಶ್ ಕುಡಿದು ಬಂದು ಪತ್ನಿ ಜತೆ ಜಗಳ ಮಾಡುತ್ತಿದ್ದ. ಇಂದು ಬೆಳಗ್ಗೆ ಪತಿ-ಪತ್ನಿ ಮಧ್ಯೆ ಜಗಳ ಉಂಟಾಗಿತ್ತು. ಜಗಳದ ವೇಳೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೂಲತಃ ಸುರೇಶ್ ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್. ಪುರದವರು. ಪತ್ನಿ ಮಮತ ತುಮಕೂರು ಜಿಲ್ಲೆ ನಿಡುವಳ್ಳಿಯವರು. ಕಳೆದ 13 ವರ್ಷದ ಹಿಂದೆ ವಿವಾಹ ಮಾಡಿಕೊಂಡಿದ್ದು, ಇತ್ತೀಚೆಗೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೆ, ಹೆಂಡತಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ಸುದ್ದಿಯನ್ನೂ ಓದಿ | Bhadravathi News: ತಡರಾತ್ರಿ ಆಸ್ಪತ್ರೆಯಲ್ಲಿ ಮಹಿಳೆ ಸಾವು; ಬೆಳಗ್ಗೆ ಪುನಃ ಬಂತು ಜೀವ!
ದಂಪತಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಆದರೆ, ಸೆಕ್ಸ್ ವಿಚಾರಕ್ಕೆ ಪತ್ನಿ ಮಮತಾ ಜತೆಗೆ ಸುರೇಶ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ, ಅದೇ ರೀತಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಬೇಸತ್ತಿದ್ದ ಹೆಂಡತಿ ಗಂಡನ ಕಿರುಕುಳದ ಬಗ್ಗೆ ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದಳು. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ದಂಪತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕಡೆ ಮನೆಯವರು ಮಾತಾಡಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು. ಇದರ ಬೆನ್ನಲ್ಲೇ ಸುರೇಶ್ ಹೆಂಡತಿಯನ್ನು ಕೊಲೆಗೈದು, ತಾನೂ ನೇಣಿಗೆ ಶರಣಾಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.