ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Road Accident: ಯುಗಾದಿಯಂದೇ ಭೀಕರ ಅಪಘಾತ, ದಂಪತಿ ಸಾವು

ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್​ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ ಕಾಲೋನಿಯತ್ತ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.

ಪ್ರಾತಿನಿಧಿಕ ಚಿತ್ರ

ಬೀದರ್, ಮಾ.19 : ಯುಗಾದಿ ಹಬ್ಬದಂದೇ (Ugadi festival) ಬೀದರ್‌ನಲ್ಲಿ (bidar) ಭೀಕರವಾದ ಅಪಘಾತ (Road Accident) ಸಂಭವಿಸಿದ್ದು, ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ (death) ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.

ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್​ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ ಕಾಲೋನಿಯತ್ತ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಪಘಾತ ಸ್ಥಳಕ್ಕೆ ಬಸವಕಲ್ಯಾಣ ಸಿಪಿಐ ಅಲಿಸಾಬ್, ಸಂಚಾರ ಠಾಣೆ ಪಿಎಸ್‌ಐ ಸಿದ್ದೇಶ್ವರ ಹಾಗೂ ನಗರ ಠಾಣೆ ಪಿಎಸ್‌ಐ ಚಂದ್ರಶೇಖರ್ ನಾರಾಯಣಪುರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bidar News: ಬೀದರ್‌ನ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಸಾವು

ಟ್ರಾಕ್ಟರ್-‌ ಟ್ರೇಲರ್‌ ನಡುವೆ ಸಿಲುಕಿ ಚಾಲಕ ಸಾವು

ಹಾವೇರಿ: ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ (Tractor) ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ (Driver) ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಗುತ್ತಲ ತಾಂಡಾದ ನಿವಾಸಿ ದೇವರಾಜ್ ಲಮಾಣಿ (26) ಮೃತ ಚಾಲಕ. ದೇವರಾಜ್ ಬೆಳಗ್ಗೆ ಎರಡೂವರೆ ಸಾವಿರ ಇಟ್ಟಿಗೆ ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಏಕಾಏಕಿ ಟ್ರ‍್ಯಾಕ್ಟರ್‌ನ ಎಂಜಿನ್ ಮೇಲೆ ಎದ್ದು ನಡುವಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೀಶ್‌ ಕೇರ

View all posts by this author