ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Threat: ಆಲೂರು, ಸರಗೂರು ತಾಲೂಕು ಕಚೇರಿಗಳಿಗೆ ಬಾಂಬ್‌ ಬೆದರಿಕೆ

ಆಲೂರು ಹಾಗೂ ಸರಗೂರು ತಾಲೂಕು ಕಚೇರಿಗಳಿಗೆ ಬಾಂಬ್‌ ಬೆದರಿಕೆಯನ್ನು ಅನಾಮಧೇಯ ವ್ಯಕ್ತಿ ಇಮೇಲ್‌ ಮೂಲಕ ಹಾಕಿದ್ದಾನೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ರಾಜ್ಯದಲ್ಲಿ ಹಲವು ಕಡೆ ಬಾಂಬ್‌ ಬೆದರಿಕೆ ಹಾಕಲಾಗಿದ್ದು, ಪರಿಶೀಲನೆಯ ಬಳಿಕ ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದುಬಂದಿತ್ತು.

ಬಾಂಬ್‌ ಬೆದರಿಕೆ

ಹಾಸನ/ಮೈಸೂರು, ಡಿ.22 : ಹಾಸನ (Hassan) ಹಾಗೂ ಮೈಸೂರು (Mysuru) ಜಿಲ್ಲೆಯ ಹಲವು ಕಡೆಗಳಿಗೆ ಬಾಂಬ್‌ ಬೆದರಿಕೆ (Bomb Threat,) ಸಂದೇಶ ಬಂದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಕಚೇರಿ ಹಾಗೂ ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿದೆ. ಎರಡೂ ಕಡೆಗಳಲ್ಲಿ ಸಮಗ್ರ ಪರಿಶೀಲನೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಆಲೂರು ತಾಲೂಕು ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಇಮೇಲ್ ಬೆದರಿಕೆ ಸಂದೇಶ ಬಂದಿದ್ದು, ಈ ಕುರಿತು ತಹಶೀಲ್ದಾರ್ ಮಲ್ಲಿಕಾರ್ಜುನ್‌ಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ತಹಶಿಲ್ದಾರ್ ಮಲ್ಲಿಕಾರ್ಜುನ್ ಪೊಲೀಸರಿಗೆ ಈ ಕುರಿತು ಮಾಹಿತಿ ತಲುಪಿಸಿದ್ದಾರೆ. ಆಲೂರು ಪೊಲೀಸ್ ಠಾಣೆ ಪಕ್ಕದಲ್ಲಿಯೇ ತಾಲೂಕು ಕಚೇರಿ ಇದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಸೆಂಬರ್ 15ರಂದು ಸಹ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿತ್ತು.

ಅದರ ಬೆನ್ನಲ್ಲೇ, ಮೈಸೂರಿನ ಸರಗೂರು ತಾಲೂಕು ಕಚೇರಿಯಲ್ಲಿ RDX ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಪೋಟಗೊಳ್ಳುತ್ತದೆ ಎಂದು ಸಂದೇಶ ಬಂದಿದೆ. ಇ- ಮೇಲ್ ನೋಡಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸರಗೂರು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

Tumkur News: ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

ಇತ್ತೀಚೆಗೆ ಮಂಗಳೂರಿನ ನೆಹರು ಮೈದಾನದಲ್ಲಿರುವ ಆರ್‌ಟಿಒ ಕಚೇರಿಗೆ ಬಾಂಬ್‌ ಬೆದರಿಕೆ ಮೇಲ್ ಬಂದಿದೆ. ಇನ್ನು 5 ಬಾಂಬ್‌ಗಳಿಂದ ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿಯೂ ಸಂದೇಶ ಬಂದಿತ್ತು. ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಡಿಸಿ ಕಚೇರಿ ಇಮೇಲ್-ಗೆ ಬೆದರಿಕೆ ಬಂದಿತ್ತು. ಬಾಂಬ್ ಸ್ಕ್ಯಾಡ್, ಶ್ವಾನ ದಳ, ASC ಟೀಮ್ ದೌಡಾಯಿಸಿ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಲಾಗಿತ್ತು. ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದುಬಂದಿತ್ತು.

ಹರೀಶ್‌ ಕೇರ

View all posts by this author