ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bomb threat: ಧಾರವಾಡ ಹೈಕೋರ್ಟ್‌ ಪೀಠ, ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ

ಬಾಂಬ್ ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಮಾಹಿತಿಯನ್ನು ಸಿಬ್ಬಂದಿಗಳು ಪೊಲೀಸರಿಗೆ ತಕ್ಷಣ ತಿಳಿಸಿದ್ದು, ಹೈಕೋರ್ಟ್ ಪೀಠದಿಂದ ವಕೀಲರು ಮತ್ತು ಸಿಬ್ಬಂದಿಗಳು ತಕ್ಷಣ ಹೊರಗಡೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ. ಒಂದು ತಿಂಗಳ ಹಿಂದೆ ಇದೇ ರೀತಿ ಸ್ಪೋಟಿಸುವುದಾಗಿ ಈ ಮೇಲ್ ಸಂದೇಶ ಬಂದಿತ್ತು.

ಧಾರವಾಡ, ಫೆ.16: ಧಾರವಾಡ (Dharawad) ಹೈಕೋರ್ಟ್ ಪೀಠ (high court bench) ಸೇರಿದಂತೆ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ (bomb threat) ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಬಾಂಬ್ ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಮಾಹಿತಿಯನ್ನು ಸಿಬ್ಬಂದಿಗಳು ಪೊಲೀಸರಿಗೆ ತಕ್ಷಣ ತಿಳಿಸಿದ್ದು, ಹೈಕೋರ್ಟ್ ಪೀಠದಿಂದ ವಕೀಲರು ಮತ್ತು ಸಿಬ್ಬಂದಿಗಳು ತಕ್ಷಣ ಹೊರಗಡೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ. ಒಂದು ತಿಂಗಳ ಹಿಂದೆ ಇದೇ ರೀತಿ ಸ್ಪೋಟಿಸುವುದಾಗಿ ಈ ಮೇಲ್ ಸಂದೇಶ ಬಂದಿತ್ತು.

ಅದೇ ರೀತಿ ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದೆ. RDX ಸ್ಪೋಟಿಸೋದಾಗಿ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ತಮಿಳುನಾಡು ಮೂಲದ ವ್ಯಕ್ತಿಯಿಂದ ನ್ಯಾಯಾಧೀಶರಿಗೆ ಈ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 12:30ಕ್ಕೆ RDX ಮುಖಾಂತರ ಸ್ಫೋಟಿಸುವುದಾಗಿ ಕಳುಹಿಸಿದ್ದಾರೆ. ವಿಷಯ ತಿಳಿದು ಕೋರ್ಟ್ ಕಲಾಪವನ್ನು ಸಿಬ್ಬಂದಿಗಳು ಸ್ಥಗಿತಗೊಳಿಸಿ ಹೊರಬಂದಿದ್ದಾರೆ. ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಮಡಿಕೇರಿ ನ್ಯಾಯಾಲಯಕ್ಕೂ ಕೂಡ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನ್ಯಾಯಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ಬಂದಿದೆ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಈ ಸಂದೇಶ ಬಂದಿದೆ. ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಪತ್ತೆ ದಳ, ಭದ್ರತಾ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.

Bomb Threat: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ

ಅದೇ ರೀತಿಯಾಗಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯ ಹಾಗೂ ಮಂಡ್ಯ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೂ ಕೂಡ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ತಿಳಿದ ತಕ್ಷಣ ಕೋರ್ಟ್ ನಲ್ಲಿ ಕಲಾಪ ಸ್ಥಗಿತಗೊಳಿಸಿ ಎಲ್ಲಾ ಸಿಬ್ಬಂದಿಗಳು ಹಾಗೂ ವಕೀಲರು ಕೋರ್ಟ್ ಹೊರಗಡೆ ಓಡಿ ಬಂದಿದ್ದಾರೆ.

ಹರೀಶ್‌ ಕೇರ

View all posts by this author