ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದಾರೆ. ಮೆಟ್ರೋ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಯೋಗದ ಯೋಜನೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ. 50 ಮತ್ತು ರಾಜ್ಯ ಸರ್ಕಾರ ಶೇ.50 ಅನುದಾನ ವೆಚ್ಚ ಮಾಡಬೇಕು ಎಂಬುವುದು ಒಪ್ಪಂದವಾಗಿದೆ. ಕೇಂದ್ರ ಹಣಕಾಸು, ತಂತ್ರಜ್ಞಾನ ನೆರವು ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡುತ್ತಿದೆ. ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೆಟ್ರೋ 3ನೇ ಹಂತದ ಮಾರ್ಗದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ಈಗಾಗಲೇ 96.10 ಕಿ.ಮೀ ಉದ್ದದ ಮೆಟ್ರೋಮಾರ್ಗದ ಕೆಲಸ ನಡೆದಿದೆ. ಇದರಲ್ಲಿ ರಾಜ್ಯ ಸರ್ಕಾರ 25,385 ಕೋಟಿ ಖರ್ಚು ಮಾಡಿದರೆ, ಕೇಂದ್ರ ಸರ್ಕಾರ 7,468 ಕೋಟಿ ಅನುದಾನ ನೀಡಿದೆ. ಕೇಂದ್ರವು ಮೆಟ್ರೋ ಯೋಜನೆಗೆ ಚಾಲನೆ ನೀಡುತ್ತದೆ. ಇದಕ್ಕೆ ಸಾಲ ಕೊಡುತ್ತದೆ, ಅದನ್ನು ಬಡ್ಡಿ ಸಮೇತ ವಾಪಸ್ ಕೊಡಬೇಕು ಎಂದು ಹೇಳಿದರು.
2005ರಲ್ಲಿ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರು ಮೆಟ್ರೋ ಪ್ರಾರಂಭವಾಯಿತು. ಸದ್ಯ ಮೆಟ್ರೋದಲ್ಲಿ ನಿತ್ಯ 9 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹಳದಿ ಮಾರ್ಗ ಸೇರ್ಪಡೆಯಿಂದ 12.5 ಲಕ್ಷ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ. ಬೆಂಗಳೂರು ನಗರದ ಬಹಳ ವೇಗವಾಗಿ ಬೆಳೆಯುತ್ತಿದೆ. ಸಂಚಾರ ದಟ್ಟಣೆ ಮಾಡಲು ಮೆಟ್ರೋ ಮಾಡಲಾಗಿದೆ. 2030ರ ವೇಳೆಗೆ 220 ಕಿ.ಮೀ ಉದ್ದದ ಮೆಟ್ರೋ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ 30 ಲಕ್ಷ ಪ್ರಯಾಣಿಕರು ನಿತ್ಯ ಪ್ರಯಾಣಿಸಲು ಸಾಧ್ಯವಾಗುತ್ತಿದೆ.
ಇಂದು ಮೂರನೇ ಹಂತಕ್ಕೆ ಶಂಕುಸ್ಥಾಪನೆಯಾಗಲಿದೆ, ಮೆಟ್ರೋ 3ಎಗೆ ಡಿಪಿಆರ್ ಆಗಿದೆ, ಕೇಂದ್ರ ಅನುಮತಿ ನೀಡಿದರೆ ಅದನ್ನೂ ಪ್ರಾರಂಭಿಸಬಹುದು. ಬಳಿಕ ಮೆಟ್ರೋ 4ನೇ ಹಂತದಲ್ಲಿ 53 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಬೇಕಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು-ಬೆಳಗಾವಿ ಸೇರಿ ಮೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Namma Metro: ನೂತನ ಹಳದಿ ಮಾರ್ಗ ನಮ್ಮ ಮೆಟ್ರೋ ಟಿಕೆಟ್ ದರಗಳು ಎಷ್ಟಿವೆ?
ಇನ್ನು ಅಭಿವೃದ್ಧಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್‌ಗೆ ಹೇಗೆ ಒತ್ತು ನೀಡುತ್ತೀರೋ ಅದೇ ರೀತಿ ನಮ್ಮ ರಾಜ್ಯಕ್ಕೂ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಮೋದಿ ಅವರನ್ನು ಸಿಎಂ ಕೋರಿದರು.