ಗುಡಿಬಂಡೆ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಲ್ಪಸಂಖ್ಯಾತ ಪ್ರತಿನಿಧಿಯಾಗಿ ಗುಡಿಬಂಡೆಯ ಅನುರಾಧ ಆನಂದ್ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದು ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತವರ ಸನ್ಮಾನದೊಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಇದನ್ನೂ ಓದಿ: Chikkaballapur News: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ. ನಾರಾಯಣ ಸ್ವಾಮಿ ಮಾತನಾಡಿ, ಅನುರಾಧ ಆನಂದ್ ಅವರು ಅಧ್ಯಕ್ಷರಾಗಿ ೫ ವರ್ಷಗಳ ಕಾಲ ಕನ್ನಡ ಸೇವೆ ಮಾಡಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಿರಾಗಿರುವುದು ಗುಡಿಬಂಡೆ ತಾಲ್ಲೂಕಿಗೆ ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ಕನ್ನಡ ಸೇವೆ ಮಾಡುವ ಹಾಗೂ ಉನ್ನತ ಸ್ಥಾನಗಳು ದೊರೆಯಬೇಕು ಎಂದು ತಿಳಿಸಿದರು.
ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷರಾದ ಬಿ. ಅಮೀರ್ ಜಾನ್ ಮಾತನಾಡಿದರು. ಈ ಸಂದರ್ಭ ದಲ್ಲಿ ತಾಲ್ಲೂಕು ಅಧ್ಯಕ್ಷ ಬಿ. ಮಂಜುನಾಥ, ಗೌರವ ಕಾರ್ಯದರ್ಶಿಗಳಾದ ವಿ. ಶ್ರೀರಾಮಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುನಿಕೃಷ್ಣ, ಕಸಾಪ ಪದಾಧಿಕಾರಿಗಳಾದ ವಾಹಿನಿ ಸುರೇಶ್, ಸಾದು ಪುರುಶೋತ್ತಮ್, ಶ್ರೀನಿವಾಸ್ ಗಾಂಧಿ, ರಾಜೇಶ್, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್, ಕರವೇ ಅಧ್ಯಕ್ಷ ಶ್ರೀನಿವಾಸ್ ಯಾದವ್, ಮುಖಂಡ ಜಿ.ವಿ ಶ್ರೀನಾಥ್ ಸೇರಿದಂತೆ ಹಲವರು ಇದ್ದರು.