Chikkaballapur News: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ
ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ನಾಡ ಕಚೇರಿ, ಹಾಗೂ ಪೋಸ್ಟ್ ಆಫೀಸ್‌ನಲ್ಲಿ ಆಧಾರ್ ಕಾರ್ಡುಗಳು ನೀಡುವಲ್ಲಿ ವಿಳಂಭಧೋರಣೆಯ ನಿರ್ಲಕ್ಷ್ಯ ಧೋರಣೆ, ಬಡವರ ವಾಸಕ್ಕೆ ಸ್ವಂತ ಸೂರು, ಸಾಗುವಳಿದಾರರಿಗೆ ಸಾಗುವಳಿ ಚೀಟಿ, ಜನ ಸಮಾನ್ಯರ ಮೂಲಸೌಲಭ್ಯಳನ್ನು ಒದಗಿಸುವಲ್ಲಿ ಸರ್ಕಾರ ಗಳ ವಿಳಂಬ ಧೋರಣೆಯನ್ನು ಖಂಡಿಸುತ್ತೇವೆ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ರಿಗೆ ಮನವಿಪತ್ರ ಸಲ್ಲಿಸಿದರು

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಾ ಬಿ. ಆರ್. ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್‌ರಾಮ್ ರವರ ಒಕ್ಕೂಟ, ಜನಪರ ಹೋರಾಟಗಳ ಒಕ್ಕೂಟ, ಕರ್ನಾಟಕ ಜನಪರ ಸಮಿತಿ (ರಿ) ಅಖಂಡ ಜನಪರಗಳ ಒಕ್ಕೂಟ (ರಾಜ್ಯ ಸಮಿತಿ)ಗಳ ವತಿಯಿಂದ ಬಗರ ಹೊರ ವಲಯದ ಜಿಲ್ಲಾ ಪ್ರಜಾ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದವು.
ಈ ವೇಳೆ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್‌ರಾಮ್ ರವರ ಒಕ್ಕೂಟದ ರಾಜ್ಯ ಸಂಚಾಲಕ ಸಿ. ಎನ್. ರಂಗಪ್ಪ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ರವರು ಅಖಂಡ ಭಾರತದ ಸಂವಿಧಾನವನ್ನು ನೀಡಿದ್ದು. ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ ಸ್ವಾಭಿಮಾನ, ಸಾಮಾಜಿಕ ನ್ಯಾಯ ಮೂಲ ಮಂತ್ರವಾಗಿದ್ದು, ಮಕ್ಕಳು ಶೋಷಿತರು, ಮಹಿಳೆಯರು ಹಾಗೂ ಮಕ್ಕಳ ಪರವಾಗಿ ಕಾನೂನುಗಳಿದ್ದರು. ಸಂವಿಧಾನ ಜಾರಿಗೊಳಿಸದೆ, ರಾಜ್ಯದಲ್ಲಿ ಇಂದಿಗೂ ಬಡವರ ಪಾಲಿಗೆ ವಾಸ ಮಾಡಲು ಸ್ವಂತ ಸೂರು ಇಲ್ಲದೆ ನಾನಾ ರೀತಿಯಲ್ಲಿ ವಾಸಿಸುತ್ತಿರುವುದು ಉಂಟು. ಇಂತಹವರನ್ನು ಗುರುತಿಸಿ ಒಂದು ಸ್ವಂತ ಸೂರು ಇಲ್ಲದೆ ವಾಸಿಸುತ್ತಿರುವವರ ಸ್ಥಿತಿಗತಿ ಯನ್ನು ಆದರಿಸಿ ಸರ್ಕಾರದ ಅಧಿಕಾರಿಗಳು ಒಂದು ಸೂರು ಒದಗಿಸದಿರುವುದು ದುರಂತವೇ ಸರಿ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ನಾಡ ಕಚೇರಿ, ಹಾಗೂ ಪೋಸ್ಟ್ ಆಫೀಸ್‌ನಲ್ಲಿ ಆಧಾರ್ ಕಾರ್ಡುಗಳು ನೀಡುವಲ್ಲಿ ವಿಳಂಭಧೋರಣೆಯ ನಿರ್ಲಕ್ಷ್ಯ ಧೋರಣೆ, ಬಡವರ ವಾಸಕ್ಕೆ ಸ್ವಂತ ಸೂರು, ಸಾಗುವಳಿದಾರರಿಗೆ ಸಾಗುವಳಿ ಚೀಟಿ, ಜನ ಸಮಾನ್ಯರ ಮೂಲಸೌಲಭ್ಯಗಳನ್ನು ಒದಗಿಸು ವಲ್ಲಿ ಸರ್ಕಾರಗಳ ವಿಳಂಭ ಧೋರಣೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾಡಳಿತ ಕೂಡಲೆ ಜಿಲ್ಲೆಯ ತೊಂಡೇಭಾವಿ ನಾಡಕಛೇರಿ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಆಧಾರ್ ಕಾರ್ಡು ನೀಡುವಲ್ಲಿ ಏಳಂಭ ದೊರಣೆಯನ್ನು ಕೂಡಲೇ ಸರಿಪಡಿಸುವುದು, ಬೆಳಚಿಕ್ಕನ ಹಳ್ಳಿ ಕಾಲೋನಿಗೆ ಮಂಚೇನಹಳ್ಳಿ ರಸ್ತೆ ಯಿಂದ ನಕಾಶೆಯಂತೆ ಸರ್ವೆ ಮಾಡಿಸಿ ರಸ್ತೆ ಕೂಡಲೇ ಮಾಡಿಸಿಕೊಡಬೇಕು. ಎಲ್ಲಾ ಹೋರಾಟಗಾರರಿಗೆ ಸರ್ಕಾರದ ವತಿಯಿಂದ ಸೂಕ್ತ ರಕ್ಷಣೆ ಒದಗಿಸಿ ತಿಂಗಳ ಮಾಶಸನ ನೀಡುವಂತೆ ಒತ್ತಾಯಿಸಿದರು
ತೊಂಡೇಭಾವಿ ಹೋಬಳಿ ಮಂಚೇನಹಳ್ಳಿ ರಸ್ತೆಯ ಹತ್ತಿರದ ಜಾಗದಲ್ಲಿ ಅಂಬೇಡ್ಕರ್ ಭವನವನ್ನು ಕೂಡಲೇ ನಿರ್ಮಾಣ ಮಾಡಬೇಕು. ತೊಂಡೇಭಾವಿ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗೋಮಾಳ ಓತ್ತುವರಿ ಜಮೀನುಗಳನ್ನು ಓತ್ತುವರಿ ಜಮೀನುದಾರರಿಂದ ಕೂಡಲೇ ಸರ್ವೆ ಮಾಡಿಸಿ ಬಿಡಿಸುವುದು. ಜಿಲ್ಲಾದ್ಯಾಂತ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ಗಳು ಬರುವಂತೆ ಆರೋಗ್ಯ ಇಲಾಖೆಯವರಿಗೆ ಆದೇಶ ನೀಡಬೇಕು. ಮಂಜೇನಹಳ್ಳಿ ತಾಲ್ಲೂಕು ಪೆದ್ದರೆಡ್ಡಿ ನಾಗೇನ ಹಳ್ಳಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಬೇಕು. ವರಣಿ ಸ್ಮಶಾನಕ್ಕೆ ಸೂಕ್ತ. ದಾರಿಯನ್ನು ಮಾಡಿಸಿಕೊಡುವುದು, ಪೋಲೀಸ್ ಠಾಣೆಗಳಲ್ಲಿ ಕೌಂಟರ್ ಕೇಸುಗಳನ್ನು ತಡೆ ಹಿಡಿಯುವಂತೆ ಒತ್ತಾ ಯ ಅನ್ಯಾ ಯ ಒಳಗಾದವರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಪ್ರತಿ ಬ್ಯಾಂಕ್‌ನಲ್ಲಿ ದಲಿತ ವರ್ಗಗಳಿಗೆ ಸೂಕ್ತ ಸಾಲ ಸೌಲಭ್ಯ ನೀಡಲು ಆದೇಶ ನೀಡ ಬೇಕು ಎಂದು ಸುಮಾರು 19 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯ ಮಾಡಿದರಲ್ಲದೇ, ಬೇಡಿಕೆಗಳ ಈಡೇರಿಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. .
ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ರಿಗೆ ಮನವಿ ಪತ್ರ ಸಲ್ಲಿಸಿದರು
ಪ್ರತಿಭಟನೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ನಂಜುಂಡಯ್ಯ, ಉಪಾಧ್ಯಕ್ಷ ಆರ್.ದಶರತ್, ರಾಜ್ಯ ಸಮಿತಿ ಸದಸ್ಯರಾದ ವೆಂಕಟೇಶ್, ಬೈಲಪ್ಪ,ವೆಂಕಟೇಶಪ್ಪ,ಗೋಪಾಲಪ್ಪ ಮತ್ತಿತರರು ಇದ್ದರು.