ಚಿಂತಾಮಣಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ'ಹೋರಾಟ ಎಂಬ ಘೋಷ ವ್ಯಾಕದೊಂದಿಗೆ ಚಿಂತಾಮಣಿ ಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನ ರ‍್ಯಾಲಿಯನ್ನು ಬಿಜೆಪಿ ಮುಖಂಡ ವೇಣು ಗೋಪಾಲ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚಿಂತಾಮಣಿ ನಗರದ ಆಜಾದ್ ಚೌಕದಿಂದ ಮೆರವಣಿಗೆ ಆರಂಭಗೊಂಡು ನಗರದ ಪ್ರಮುಖ ಬೀದಿಗಳಿಂದ ಚಿಂತಾಮಣಿ ನಗರದ ಪ್ರಜಾಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಮುಖಂಡ ವೇಣುಗೋಪಾಲ್ ರವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆದು ಕೊಂಡು ಬಂದಿದೆ. ಅಪಪ್ರಚಾರವನ್ನು ತಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಮಾಡಲಿಲ್ಲ!
ಇದನ್ನೂ ಓದಿ: Chikkaballapur News: ಭಾರತೀಯ ಸಂಸ್ಕೃತಿಯಲ್ಲಿ ಬಾಗಿನಕ್ಕೆ ವಿಶೇಷ ಸ್ಥಾನಮಾನ, ಸಂಬಂಧಗಳ ಬೆಸೆಯುವಿಕೆ
ಬಿಜೆಪಿಯಿಂದ ರಾಜ್ಯದೆಲ್ಲೆಡೆ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹಮ್ಮಿಕೊಂಡಿದ್ದೇವೆ.ನಮ್ಮ ಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಧಾರ್ಮಿಕ ಅಸ್ಮಿತೆಗೆ ಧಕ್ಕೆ ಬಂದರೆ ರಸ್ತೆಗಿಳಿಯಲು ಸಿದ್ಧ ಎಂದು ಹೋರಾಟಕ್ಕಿಳಿದು ತಾಯಂದಿರು ಕೂಡ ಭಾಗವಹಿಸಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಈ ದೇಶದಲ್ಲಿ ಹಲವಾರು ವರ್ಷಗಳಿಂದ ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದೌರ್ಜನ್ಯ ಮತ್ತು ಅಪಚಾರಗಳು ನಡೆಯುತ್ತಾ ಬಂದಿವೆ.ಧರ್ಮಸ್ಥಳ ಕೂಡ ಅದರ ಒಂದು ಭಾಗ ಎಂದರು.
ನೂರಾರು ಹೆಣ ದಫನ್ ಮಾಡಿದ್ದೇನೆ ಎಂದು ಹೇಳಿದಾಗ ಅವನು ಸಾಮಾನ್ಯ ಸಾಕ್ಷಿ ಅಲ್ಲ ಎಂದು ಮನಗಂಡು ಅವನ ಹಿನ್ನೆಲೆಯನ್ನು ಗುರುತು ಹಚ್ಚಬೇಕಿತ್ತು. 18 ಅಡಿ ಗುಂಡಿ ತೆಗೆಯುವ ಕೆಲಸ ಮಾಡಿದ ಎಸ್ಐಟಿ ಸಾಕ್ಷಿ ಎಲ್ಲಿಂದ ಬಂದ,ಹೇಗೆ ಬಂದ? ಇಷ್ಟು ದಿನ ಏಕೆ ಸುಮ್ಮನಿದ್ದ ?ಇದರ ಹಿಂದೆ ಯಾವ ಷಡ್ಯಂತ್ರವಿದೆ ಎಂದು ತಿಳಿಯುವ ಗೋಜಿಗೆ ಹೋಗಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಅರುಣ್ ಬಾಬು, ಶಿವ, ಮಹೇಶ್ ಬೈ, ನೀಲಿ ಮಂಜುನಾಥ್, ರಾಜಣ್ಣ, ಪ್ರದೀಪ್, ಡಾಬಾ ಮಂಜು, ಗೋವಿಂದ್ ರಾಜು ಸೇರಿದಂತೆ ಮತ್ತಿತರರು ಇದ್ದರು