ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ಸರಳ ಹಾಗೂ ಅರ್ಥಪೂರ್ಣವಾಗಿ ವಿಶ್ವಕರ್ಮರ ಜಯಂತಿ ಆಚರಣೆ

ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿ ಯಾಗಿ ವರ್ಣಿಸಲಾಗಿದೆ. ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ವಿಶ್ವಕರ್ಮ. ಮನೆ-ಮಂದಿರಗಳ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕಲೆಯಲ್ಲೂ ವಿಶ್ವ ಕರ್ಮ ಸಮಾಜದ ಅಪ್ರತಿಮ ಕೊಡುಗೆಯಿದೆ. ಪಠ್ಯ-ಪುಸ್ತಕ ಓದದೆ, ಬೇರೆಯವರಿಂದ ತಂತ್ರಜ್ಞಾನ ಕಲಿಯದೆ ಕುಶಲಕರ್ಮಿಗಳಾಗಿರುವ ವಿಶ್ವಕರ್ಮ ಸಮಾಜ ಜಗತ್ತಿನಲ್ಲಿ ಹೊಸ ಶಕ್ತಿಯನ್ನೇ ಹುಟ್ಟು ಹಾಕಿದೆ.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗುಡಿಬಂಡೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಈ ವೇಳೆ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು.

ಈ ವೇಳೆ ಮುಖ್ಯಭಾಷಣಕಾರರಾಗಿ ಮಾತನಾಡಿದ ಬಿಇಒ ಕಚೇರಿಯ ಸಿಬ್ಬಂದಿ ಹರ್ಷ, ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ. ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ವಿಶ್ವಕರ್ಮ. ಮನೆ-ಮಂದಿರಗಳ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕಲೆಯಲ್ಲೂ ವಿಶ್ವ ಕರ್ಮ ಸಮಾಜದ ಅಪ್ರತಿಮ ಕೊಡುಗೆಯಿದೆ. ಪಠ್ಯ-ಪುಸ್ತಕ ಓದದೆ, ಬೇರೆಯವರಿಂದ ತಂತ್ರಜ್ಞಾನ ಕಲಿಯದೆ ಕುಶಲಕರ್ಮಿಗಳಾಗಿರುವ ವಿಶ್ವಕರ್ಮ ಸಮಾಜ ಜಗತ್ತಿನಲ್ಲಿ ಹೊಸ ಶಕ್ತಿಯನ್ನೇ ಹುಟ್ಟು ಹಾಕಿದೆ. ವಿಶ್ವಕರ್ಮ ಸಮುದಾಯವು ಚಿನ್ನಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಕಸುಬುಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಮತಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು ಎಂದರು.

ಇದನ್ನೂ ಓದಿ: Gudibande Crime: ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು

ಬಳಿಕ ತಾಪಂ ಇಒ ನಾಗಮಣಿ ಮಾತನಾಡಿ, ವಿಶ್ವಕರ್ಮ ದೇವರ ಶಿಲ್ಪಿ. ಹಿಂದಿನಿಂದ ಇಂದಿನವ ರಿಗೂ ದೇವಾಲಯ, ಅರಮನೆ, ಮನೆ, ಪೀಠೋಪಕರಣ ಹೀಗೆ ಜಗತ್ತಿನ ಪ್ರತಿಯೊಂದು ಸೃಷ್ಟಿಯಲ್ಲಿ ವಿಶ್ವಕರ್ಮರ‌ ಪಾತ್ರ ಮಹತ್ತರ. ಅಂತಹ ಜಗತ್‌ಸೃಷ್ಟಿಯ ವಿಶ್ವಕರ್ಮರ ಆಚಾರ ವಿಚಾರಗಳನ್ನು ನಮ್ಮ ದೈನಂದಿನ ಕೆಲಸಗಳಲ್ಲಿ ಪಾಲಿಸೋಣ. ಪ್ರವಾಸೋದ್ಯಮದ ಅಭಿವೃದ್ಧಿಗೆ ಸಮುದಾಯ ಕಾರಣವಾಗಿದೆ. ಸಾಮಾಜಿಕ ಕಲ್ಯಾಣಕ್ಕಾಗಿ ವಿಶ್ವಕರ್ಮ ಸಮಾಜ ನೀಡಿದ ಕೊಡುಗೆ ಅವಿಸ್ಮರ ಣೀಯ. ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ಮಿಗಳಾಗಿ ಸಮಾಜದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಈ ವೇಳೆ ಬಿ.ಇ.ಒ ಕೃಷ್ಣಕುಮಾರಿ, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ಕರುನಾಡು ಸಾಹಿತ್ಯ ಪರಿಷತ್ ನ ಪರಿಮಳ, ವಿಶ್ವಕರ್ಮ ಸಂಘದ ಅಧ್ಯಕ್ಷ ಬ್ರಹ್ಮಾಚಾರಿ, ಕಾರ್ಯದರ್ಶಿ ವೀರಾಚಾರಿ, ಮುಖಂಡರಾದ ವೆಂಕಟರಮಣಚಾರಿ, ಅಣ್ಣಿ ಆಚಾರಿ, ವೆಂಕಟಾಚಲಪತಿ, ವೆಂಕಟಾಚಾರಿ ಸೇರಿ ದಂತೆ ಹಲವರು ಇದ್ದರು.