ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande Crime: ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು

ಲೈನ್‌ಮನ್ ಒಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಸಾವನ್ನು ಮುಚ್ಚಿಟ್ಟು ದಫನ್ ಮಾಡಿದ್ದ ಲೈನ್‌ಮನ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನಂತರ ಮೃತ ರವಿಯ ಹೆಣವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಗುರುವಾರ ಗುಡಿಬಂಡೆ ಯಲ್ಲಿ ನಡೆದಿದೆ.

ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿರುವುದು. -

Ashok Nayak Ashok Nayak Sep 12, 2025 1:47 AM

ಗುಡಿಬಂಡೆ : ಲೈನ್‌ಮನ್ ಒಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಸಾವನ್ನು ಮುಚ್ಚಿಟ್ಟು ದಫನ್ ಮಾಡಿದ್ದ ಲೈನ್‌ಮನ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನಂತರ ಮೃತ ರವಿಯ ಹೆಣವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಗುರುವಾರ ಗುಡಿಬಂಡೆಯಲ್ಲಿ ನಡೆದಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ವಿದ್ಯುತ್ ಕೆಲಸಕ್ಕೆ ಹೋಗಿದ್ದ ರವಿ ಎಂಬಾತ ಕೆಲಸ ಮಾಡುವ ವೇಳೆ ವಿದ್ಯುತ್ ಅವಗಡದಿಂದ ಸಾವನ್ನಪ್ಪಿದ್ದರು.ಈ ವಿಚಾರ ಯಾರಿಗೂ ತಿಳಿಯದಂತೆ ಲೈನ್‌ಮನ್ ಚಂದ್ರಶೇಖರ್ ಬೀಚಗಾನಹಳ್ಳಿ ಸಮೀಪದ ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತು ಪರಾರಿ ಯಾಗಿದ್ದ. ಗುರುವಾರ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ರವಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು ಸ್ಥಳಕ್ಕೆ ಎಸ್‌ಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿದ್ದರು.

ಇದನ್ನೂ ಓದಿ: Gudibande News: ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಗತ್ಯ: ನ್ಯಾ.ಸವಿತಾ ರುದ್ರಗೌಡ

ಘಟನೆಯ ವಿವರ

ಗುಡಿಬಂಡೆ ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಗ್ರಾಮದ ಲೈನ್ ಮೆನ್ ಚಂದ್ರಕುಮಾರ್ ಎಂಬಾತ ರವಿ ಎಂತಾನನ್ನು ಇಲಾಖೆಯ ಅನುಮತಿ ಇಲ್ಲದೆ ಸಹಾಯಕನಾಗಿ ಮಾಡಿಕೊಂಡಿದ್ದರು. ವಿದ್ಯುತ್ ಸಮಸ್ಯೆ ಸರಿಪಡಿಸಿಲು ಭಾನುವಾರ ಬೆಳಿಗ್ಗೆ ರವಿಯನ್ನು ಕರೆದು ಕೊಂಡು ಹೋಗಿದ್ದ. ಈ ಸಮಯದಲ್ಲಿ ರವಿ ವಿದ್ಯುತ್ ಸ್ಪರ್ಷವಾಗಿ ಕಂಬದಿಂದ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ.

cbpm8a

ಬಳಿಕ ಮೃತ ರವಿ ಶವವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತುಹಾಕಿ ಏನು ತಿಳಿಯದಂತೆ ಚಂದ್ರಶೇಖರ್ ಪರಾರಿಯಾಗಿದ್ದ. ಇತ್ತ ಮೃತ ರವಿ ಸಂಬAಧಿಕರು ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಲೈನ್ ಮೆನ್ ಚಂದ್ರಕುಮಾರ್ ಮೇಲೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ, ಆತ ಮೊಬೈಲ್ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಆಂಧ್ರಪ್ರದೇಶದಲ್ಲಿದ್ದ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲೀ ಸತ್ಯವನ್ನು ಆತ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ ಶಿವಕುಮಾರ್, ತಹಸೀ ಲ್ದಾರ್ ಸಿಗ್ಬತ್ ಉಲ್ಲಾ, ಗುಡಿಬಂಡೆ ಸಬ್ ಇನ್ಸ್ ಪೆಕ್ಟರ್ ಗಣೇಶ್ ಸೇರಿದಂತೆ  ಸ್ಥಳಕ್ಕೆ ವಿಧಿವಿಜ್ಞಾನ ತಂತ್ರಜ್ಞರು, ಜಿಲ್ಲಾ ಸರ್ಜನ್ ಸೇರಿದಂತೆ ವೈದ್ಯಕೀಯ ತಂಡ ಹಾಗೂ ಸಂಬAಧಿಕರ ಸಮ್ಮುಖದಲ್ಲಿ ಶವವನ್ನು ಹೊರತೆಗೆಯಲಾಯಿತು. ಇನ್ನೂ ರವಿ ಶವವನ್ನು ಹೊರತೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸಾವಿನ ಕುರಿತು ಮೃತನ ಪೋಷಕರು  ಅನುಮಾನ ವ್ಯಕ್ತಪಡಿಸಿದ್ದಾರೆ. ಒಬ್ಬನಿಂದ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಜೊತೆಗೆ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿ ದ್ದಾರೆ.