ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿತ್ರಾವತಿ ಹೋರಾಟ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಚಲೋ: ಜಲಾಶಯಕ್ಕೆ ಎಸ್.ಎಂ.ಕೃಷ್ಣ ಹೆಸರು ನಾಮಕರಣ ವಿರೋಧಿಸಿ ಬೈಕ್ ರ್ಯಾಲಿ

ವಿವಿಧ ಪಕ್ಷಗಳ ಮುಖಂಡರು, ರೈತಪರ, ದಲಿತ, ಕೃಷಿ ಕೂಲಿ ಕಾರ್ಮಿಕರು ಹಾಗೂ ಜಿವಿಎಸ್ ಅಭಿಮಾನಿ ಗಳು 100ಕ್ಕೂ ಹೆಚ್ಚು ಜನರು ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಜಲಾಶಯ ಎಂದು ಹೆಸರು ನಾಮಕರಣ ಮಾಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಪಟ್ಟಣದ ಗೂಳೂರು ವೃತ್ತ ದಿಂದ ಬೈಕ್ ರ‍್ಯಾಲಿ ಹೊರಟರು.

ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಅವರ ಹೆಸರು ನಾಮಕರಣ ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ಬೈಕ್ ರ‍್ಯಾಲಿಯಲ್ಲಿ ಬಂದು ಪ್ರತಿಭಟನೆ ನಡೆಸಿದರು.

ಬಾಗೇಪಲ್ಲಿ: ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಅವರ ಹೆಸರು ನಾಮಕರಣ ವಿರೋಧಿಸಿ, ಜಲಾಶಯಕ್ಕೆ ಶ್ರೀರಾಮರೆಡ್ಡಿ ಹೆಸರು ಅಥವಾ ಚಿತ್ರಾವತಿ ಜಲಾಶಯ ಎಂದು ಮುಂದುವರೆಸಬೇಕು ಎಂದು ಒತ್ತಾಯಿಸಿ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಚಿಕ್ಕಬಳ್ಳಾಪುರ ಬೈಕ್ ರ‍್ಯಾಲಿಗೆ ಪಟ್ಟಣದ ಬಸ್ ನಿಲ್ದಾಣದ ಬಳಿ ಜಿ.ವಿ.ಶ್ರೀರಾಮ ರೆಡ್ಡಿ ಅವರ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಎಂ.ಪಿ.ಮುನಿವೆಂಕಟಪ್ಪ ಚಾಲನೆ ನೀಡಿದರು.

ವಿವಿಧ ಪಕ್ಷಗಳ ಮುಖಂಡರು, ರೈತಪರ, ದಲಿತ, ಕೃಷಿ ಕೂಲಿ ಕಾರ್ಮಿಕರು ಹಾಗೂ ಜಿವಿಎಸ್ ಅಭಿಮಾನಿಗಳು 100ಕ್ಕೂ ಹೆಚ್ಚು ಜನರು ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಜಲಾಶಯ ಎಂದು ಹೆಸರು ನಾಮಕರಣ ಮಾಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಪಟ್ಟಣದ ಗೂಳೂರು ವೃತ್ತ ದಿಂದ ಬೈಕ್ ರ‍್ಯಾಲಿ ಹೊರಟರು.

ಇದನ್ನೂ ಓದಿ: Chikkaballapur News: ಮಂಗಳಮುಖಿಯರಿಂದ ಮುರುಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪ ಕಾಣಿಕೆಯಾಗಿ ಸಲ್ಲಿಕೆ

ಎಡಪಂಥೀಯ ಚಿಂತಕ ಹಾಗೂ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ, ಈ ಭಾಗದ ಜನರನ್ನು ಶಾಶ್ವತವಾಗಿ ಕಾಡುತ್ತಿರುವ ಫ್ಲೂರೈಡ್ ಸಮಸ್ಯೆ ನಿವಾರಣೆಗೆ ಅಂತರ್ಜಲ ವೃದ್ಧಿ ಹಾಗೂ ಶಾಶ್ವತ ನೀರಾವರಿ ಕಲ್ಪಿಸುವುದೇ ಪರಿಹಾರವೆಂದು ಆಗಿನ ಶಾಸಕರಾಗಿದ್ದ ಜಿ.ವಿ ಶ್ರೀರಾಮ ರೆಡ್ಡಿಯವರು,ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ತೊಂಬತ್ತರ ದಶಕದಲ್ಲಿ ಹೋರಾಟಗಳ ಮೂಲಕ ಶ್ರಮಿಸಿದವರು. ಆದರೆ ಈಗಿನ ಶಾಸಕ ಸುಬ್ಬಾರೆಡ್ಡಿ ರಾಜಕೀಯ ಕುತಂತ್ರಕ್ಕೆ ಮಾಡು ತ್ತಿದ್ದು, ಆ ಡ್ಯಾಂ ಗೆ ಎಸ್.ಎಂ ಕೃಷ್ಣರವರ ಹೆಸರಿಡಲು ಮುಂದಾಗಿದ್ದಾರೆ. ಹಾಗಾಗಿ ಚಿತ್ರಾವತಿ ಡ್ಯಾಂ ಹೆಸರು ಹಾಗೇ ಇರಬೇಕು,ಬದಲಾಯಿಸಬೇಕೆಂದರೆ ಜಿ.ವಿ ಶ್ರೀರಾಮರೆಡ್ಡಿಯವರ ಹೆಸರಿಡಬೇಕು ಎಂದರು.

ಬಾಗೇಪಲ್ಲಿ ಹೋರಾಟಗಳ ನೆಲೆ ಎಂಬುದನ್ನು ಮರೆಯಬಾರದು

ಶಾಸಕ ಸುಬ್ಬಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ರವರು ತಮ್ಮ ರಾಜಕೀಯ ದುರದ್ದೇಶದಿಂದ ಜಿ.ವಿ ಶ್ರೀರಾಮರೆಡ್ಡಿಯವರ ಹೆಸರನ್ನು ಜನರಿಂದ ದೂರ ಮಾಡುವ ಹುನ್ನಾರ ಮಾಡಿದ್ದಾರೆ. ಅಂಥವ ಜನರ ಭಾವನಾತ್ಮಕ ವಿಚಾರಗಳಿಗೆ ಧಕ್ಕೆ ಬಂದರೆ ಜನರು ಭುಗಿ ಲೇಳುತ್ತಾರೆ. ಈ ಬಾಗೇಪಲ್ಲಿ ಹೋರಾಟಗಳ ತವರೂರಾಗಿದ್ದು, ನೀರು, ಭೂಮಿಗಾಗಿ ಹೋರಾಟ, ಮೌಢ್ಯಾಚಾರಣೆ ಸೇರಿದಂತೆ ಬಡಜನರಿಗೆ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಟಗಳನ್ನು ಕಟ್ಟುವ ನೆಲ ಇದಾಗಿದ್ದು, ರಾಜಕೀಯ ಕುತಂತ್ರಗಳು ನಡೆಯುವುದಿಲ್ಲ ಎಂದು ಡಾ.ಅನಿಲ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರಾವತಿ ಹೋರಾಟ ಸಮಿತಿ ಮುಖಂಡರಾದ ಡಿ.ಟಿ.ಮುನಿಸ್ವಾಮಿ, ಜಿ.ಮುಸ್ತಾಪ್, ದೇವಿಕುಂಟೆ ಶ್ರೀನಿವಾಸ, ಚನ್ನರಾಯಪ್ಪ, ಜಿ.ಎಂ.ರಾಮಕೃಷ್ಣಪ್ಪ, ಜಿ.ಕೃಷ್ಣಪ್ಪ, ಎಂ.ಎನ್. ರಘುರಾಮರೆಡ್ಡಿ, ಈಶ್ವರರೆಡ್ಡಿ, ರಫೀಕ್, ಚಲಪತಿ, ಕೆ.ವಿ.ರಾಮಚಂದ್ರಪ್ಪ, ಲಕ್ಷ್ಮರೆಡ್ಡಿ, ಲಕ್ಷ್ಮೇನಾರಾಯಣರೆಡ್ಡಿ, ಕೋಟೆ ಚೆನ್ನೈಗೌಡ, ಆದಿಶೇಷು, ಜಿ. ಕೃಷ್ಣಪ್ಪ, ಮದಕರಿ ಸುರೇಶ್, ಶ್ರೀನಿವಾಸ ರೆಡ್ಡಿ, ವೆಂಕಟರಾಮಪ್ಪ, ವೆಂಕಟರವಣಪ್ಪ, ಅರುಣ್‌ಕುಮಾರ್, ರಾಮರೆಡ್ಡಿ, ಮುಜಾಮುಲ್, ಇಮ್ರಾನ್, ನರಸಿಂಹರೆಡ್ಡಿ, ವೆಂಕಟರಾಮರೆಡ್ಡಿ ಹಾಜರಿದ್ದರು.