ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಂಗಳಮುಖಿಯರಿಂದ ಮುರುಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪ ಕಾಣಿಕೆಯಾಗಿ ಸಲ್ಲಿಕೆ

ಮುರಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಭೇಟಿ ನೀಡಿ ಅಮ್ಮಾಜಾನ್ ಬಾವಾಜಾನ್ ರವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ ಮಂಗಳಮುಖಿಯರು,ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪ ದೊಂದಿಗಿನ ಹಸ್ತವನ್ನು ಕಾಣಿಕೆಯಾಗಿ ಜಿಲ್ಲಾ ವಕ್ಪ್ ಆಧಿಕಾರಿ ನವೀದ್ ಪಾಷಾ ಹಾಗೂ ಮುರುಗಮಲ್ಲ ದರ್ಗಾ ಸೂಪರ್ವೈಸರ್ ತಯೂಬ್ ನವಾಜ್ ರವರ ಮುಖಾಂತರ ಹಸ್ತಾಂತರ ಮಾಡಿದರು.

ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪ ಕಾಣಿಕೆಯಾಗಿ ಸಲ್ಲಿಕೆ

Ashok Nayak Ashok Nayak Aug 4, 2025 8:55 PM

ಚಿಂತಾಮಣಿ: ತಾಲ್ಲೂಕು ಮುರಗಮಲ್ಲದಲ್ಲಿನ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಮಂಗಳ ಮುಖಿ ಸಲ್ಮಾ ನಾಯ್ಕ್ ರವರ ನೇತೃತ್ವದಲ್ಲಿ ಮಂಗಳಮುಖಿಯರು ಆರ್ಧ ಕೆಜಿ ಬೆಳ್ಳಿಯಿಂದ ಮಾಡಿರುವ ಬೆಳ್ಳಿ ದೀಪದೊಂದಿಗಿನ ಹಸ್ತವನ್ನು ಕಾಣಿಕೆಯಾಗಿ ನೀಡಿದರು.

ಮುರಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಭೇಟಿ ನೀಡಿ ಅಮ್ಮಾಜಾನ್ ಬಾವಾಜಾನ್ ರವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ ಮಂಗಳಮುಖಿಯರು, ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪದೊಂದಿಗಿನ ಹಸ್ತವನ್ನು ಕಾಣಿಕೆಯಾಗಿ ಜಿಲ್ಲಾ ವಕ್ಪ್ ಆಧಿಕಾರಿ ನವೀದ್ ಪಾಷಾ ಹಾಗೂ ಮುರುಗಮಲ್ಲ ದರ್ಗಾ ಸೂಪರ್ವೈಸರ್ ತಯೂಬ್ ನವಾಜ್ ರವರ ಮುಖಾಂತರ ಹಸ್ತಾಂತರ ಮಾಡಿದರು.

ಇದನ್ನೂ ಓದಿ: Chikkaballapur News: ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ : ಕೋಟಿ ಹಣ ಗುಳುಂ

ಈ ವೇಳೆ ಮಂಗಳಮುಖಿಯರ ನಾಯಕಿ ಸಲ್ಮಾನಾಯ್ಕ್  ಮಾದ್ಯಮದವರೊಂದಿಗೆ ಮಾತನಾಡಿ ನಾವು ಮಂಗಳಮುಖಿಯರಾಗಿ  ಎಲ್ಲಾ ಜನರು ಸುಖಶಾಂತಿ ನೆಮ್ಮಂದಿಯಿಂದ ಬಾಳಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವವರಾಗಿದ್ದೆವೆ, ನಮಗೂ ಕೂಡ  ವಸತಿ ಸೇರಿದಂತೆ ಹಲವಾರು ರೀತಿಯ ಸಾಕಷ್ಟು ಸಮಸ್ಯೆಗಳಿದ್ದು, ನಮಗೆ ವಾಸ ಮಾಡಲು ಯಾರು ಕೂಡ ಮನೆಗಳನ್ನು ಬಾಡಿಗೆಗೆ ನೀಡಲು ಮುಂದೆ ಬರುತ್ತಿಲ್ಲ.

ಸಚಿವರು ನಮಗೆ ಸೈಟ್ ಗಳನ್ನು ನೀಡಿ ವಸತಿ ಸೌಲಭ್ಯವನ್ನು ಕಲ್ಪಿಸಬೇಕು, ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೂಡ ನಮಗೆ ಸಮರ್ಪಕವಾಗಿ ಸಿಗುತ್ತಿಲ್ಲ, ಮುರಗಮಲ್ಲ ದರ್ಗಾ ಪವಿತ್ರವಾದ ಸ್ಥಳವಾಗಿದ್ದು, ಇಲ್ಲಿಗೆ  ಬರುವ ಭಕ್ತರ ಸಮಸ್ಯೆಗಳು ಹಾಗೂ ಖಾಯಿಲೆಗಳು ವಾಸಿಯಾಗುತ್ತಿದ್ದು, ಲೋಕಾ ಕಣ್ಯಾರ್ಥವಾಗಿಲಿ ಎಂದು ಎರಡು ತಿಂಗಳ ಹಿಂದೆ ಚಿಂತಾಮಣಿ ನಗರದಲ್ಲಿನ ಗ್ರಾಮ ದೇವತೆ ಗಂಗಮ್ಮದೇವಿಗೆ ಆರ್ಧ ಕೆಜಿ ಬೆಳ್ಳಿಯನ್ನು ನೀಡಿದ್ದು ಇಂದು ಮುರುಗಮಲ್ಲ ಅಮ್ಮಾಜಾನ್ ಬಾವಾ ಜಾನ್ ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪವನ್ನು ಕಾಣಿಕೆಯಾಗಿ ನೀಡುತ್ತಿದ್ದು, ನಮ್ಮಲ್ಲಿಯೂ ಕೂಡ ವಿದ್ಯಾವಂತರಿದ್ದು ಸರಕಾರ ನಮ್ಮಲ್ಲಿನ ವಿದ್ಯಾವಂತವರನ್ನು ಗುರುತಿಸಿ ಸರಕಾರಿ ಉದ್ಯೋಗ ವನ್ನು ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಗಳಮುಖಿಯರಾದ ಪ್ರೀಯಾ, ಸಂಗೀತ, ಬಿಂದು, ಪೂನಮ್, ಆಶ್ವಿನಿ, ಪುಷ್ಪ, ಗಂಗಾ, ಮುಸ್ಕಾನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.