ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ನಿವೇಶನ ಕೊಡುವಲ್ಲಿ ವಿಳಂಬ, ಗುರ್ತಿಸಲ್ಪಟ್ಟ ಸ್ಥಳದಲ್ಲಿ ಗುಡಿಸಲು ಹಾಕಿದ ನಾಗರಿಕರು, ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್

ಗುಡಿಸಲು ನಿರ್ಮಾಣ ಮಾಡುತ್ತಿರುವುದು ತಪ್ಪು, ನಾವು ನಿಮ್ಮ ಮನವಿಗಳಿಗೆ ಸ್ಪಂದಿಸಿ ಸ್ಥಳವನ್ನೂ ಗುರ್ತಿಸಲಾಗಿದೆ. ಇದನ್ನು ಪುರಸಭೆಯವರಿಗೂ ಹಸ್ತಾಂತರಿಸಿದ್ದೇವೆ. ನಿವೇಶನಗಳನ್ನು ನೀಡಲು ಸಮಿತಿ ಯೊಂದಿದೆ. ಆ ಸಮಿತಿಯ ಮುಂದೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಹಾಗೇಯೆ ಅರ್ಹ ಫಲಾನು ಭವಿಗಳನ್ನು ಗುರ್ತಿಸಿ, ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ

ಬಾಗೇಪಲ್ಲಿ : ಸುಮಾರು ೧೫ ವರ್ಷಗಳಿಂದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ವಾಸ ಮಾಡು ತ್ತಿರುವ ನಿವೇಶನ ರಹಿತ ಬಡವರಿಗೆ ನಿವೇಶನಗಳನ್ನು ನೀಡದೆ ಸರಕಾರಗಳ, ಸ್ಥಳೀಯ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಮಾರ್ಕ್ಸ್ ವಾದಿ-ಲೆನಿನ್ ವಾದಿ ಪಕ್ಷ, ಅಖಿಲ ಭಾರತ ಕಿಸಾನ್ ಸಂಘ ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಏಕಾಏಕಿ ನೂರಾರು ನಾಗರಿಕರು ಪಾತಬಾಗೇಪಲ್ಲಿ ಸರ್ವೆ ನಂಬರ್ ೩೭ ರಲ್ಲಿನ ಸರಕಾರಿ ಜಮೀನಿನಲ್ಲಿ ಗುಡಿಸಿಲಿಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿ, ನಿವೇಶನಗಳಿಗೆ ಆಗ್ರಹಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಎರಡನೇ ಶನಿವಾರವಿದ್ದರೂ ಸ್ಥಳಕ್ಕೆ ತಹಸೀಲ್ದಾರ್ ಮನೀಷ ಮಹೇಶ್ ಎನ್ ಪತ್ರಿಯವರು ಪೊಲೀಸರೊಂದಿಗೆ ದೌಡಾಯಿಸಿದ್ದಾರೆ. ಗುಡಿಸಲು ನಿರ್ಮಾಣ ಮಾಡುತ್ತಿರುವುದು ತಪ್ಪು, ನಾವು ನಿಮ್ಮ ಮನವಿಗಳಿಗೆ ಸ್ಪಂದಿಸಿ ಸ್ಥಳವನ್ನೂ ಗುರ್ತಿಸಲಾಗಿದೆ. ಇದನ್ನು ಪುರಸಭೆಯವರಿಗೂ ಹಸ್ತಾಂತರಿಸಿದ್ದೇವೆ. ನಿವೇಶನಗಳನ್ನು ನೀಡಲು ಸಮಿತಿಯೊಂದಿದೆ. ಆ ಸಮಿತಿಯ ಮುಂದೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಹಾಗೇಯೆ ಅರ್ಹ ಫಲಾನುಭವಿ ಗಳನ್ನು ಗುರ್ತಿಸಿ, ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ. ಇವೆಲ್ಲ ಪ್ರಕ್ರಿಯೆಗಳಿಗೆ ಕೊಂಚ ಸಮಯಾವಾಕಾಶ ಬೇಕಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಈ ವೇಳೆ ಎಂಎಲ್ ಪಿಐ ಮುಖಂಡ ಮುಜಾಮಿಲ್ ರವರು ಮೇಡಂ ನಾವು ಕಳೆದ 15 ವರ್ಷ ಗಳಿಂದ ನಿವೇಶನಗಳಿಗಾಗಿ ಪರಿತಪಿಸುತ್ತಿದ್ದೇವೆ. ಬಹಳಷ್ಟು ಬಡವರಿಗೆ ನ್ಯಾಯ ಸಿಗುತ್ತಿಲ್ಲ ಎಂದರು. ನಂತರ ತಹಶೀಲ್ದಾರರು ನಾನು ತಾಲೂಕಿಗೆ ಬಂದಾಗ ನಿಮ್ಮ ಮನವಿಗಳಿಗೆ ಸ್ಪಂದಿಸಿದ್ದೇನೆ. ಹಾಗಾಗಿ ಯಾವುದೇ ತಾರತಮ್ಯ,ಯಾವುದೇ ಪಕ್ಷಪಾತ ಮಾಡದೇ ಸಮಿತಿ ನಿರ್ಧಾರ ತೆಗೆದುಕೊಂಡು ನಿವೇಶನಗಳ ಹಂಚಿಕೆ ಮಾಡಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಎಂಎಲ್ ಪಿಐ ತಾಲೂಕು ಕಾರ್ಯದರ್ಶಿ ಆರ್.ಎಂ ಚಲಪತಿ ಮಾತನಾಡಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಬಡವರಿಗೆ ನಿವೇಶನ ನೀಡಲು ವಿಳಂಬ ಮಾಡಲಾಗುತ್ತಿದೆ. ಮಕ್ಕಳ ಶಿಕ್ಷಣ,ಆಸ್ಪತ್ರೆ ಮತ್ತಿತರ ಹೊರೆಗಳು ಹೆಚ್ಚಾಗಿದೆ. ಬಾಡಿಗೆಗಳು ಕಟ್ಟಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದ್ದು, ನಿವೇಶನಗಳನ್ನು ನೀಡಬೇಕು ಎಂದರು.

ಇದೇ ವೇಳೆ ಎಐಕೆಎಸ್ ತಾಲೂಕು ಕಾರ್ಯದರ್ಶಿ ಆದಿಶೇಷು ಮತ್ತಿತರರು ತಹಶೀಲ್ದಾರರ ಮಾತಿಗೆ ಗೌರವ ನೀಡಿ, ತಾತ್ಕಾಲಿಕವಾಗಿ ನಿರ್ಮಿಸಿದ್ದ ಗುಡಿಸಲುಗಳನ್ನು ತೆರವುಗೊಳಿಸುತ್ತೇವೆ. ನಮ್ಮ ಬಡವರಿಗೆ ನ್ಯಾಯ ಒದಗಿಸಲು ಮುಂದಾಗಿರುವ ನಿಮಗೆ ಧನ್ಯವಾದಗಳು,ಆದಷ್ಟು ಬೇಗ ಮುಂದಿನ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಈ ಬಗ್ಗೆ ಎಐಕೆಎಸ್ ರಾಜ್ಯ ಸಂಚಾಲಕ ಕೆ.ವಿ ರಾಮಚಂದ್ರ ಪ್ರತಿಕ್ರಿಯೆ ನೀಡಿದ್ದು,ನಮ್ಮ ತಾಲೂಕು ಸಮಿತಿ ಮುಖಂಡರ ನೇತೃತ್ವದಲ್ಲಿ ಸಾಂಕೇತಿಕವಾಗಿ ಗುಡಿಸಲು ನಿರ್ಮಿಸಿ,ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಹಾಗೂ ತಹಶೀಲ್ದಾರರ ಭರವಸೆಗೆ ಗೌರವಪೂರ್ವಕವಾಗಿ ತೆರವು ಮಾಡಿದ್ದೇವೆ. ಆದರೆ ಇದೇ ರೀತಿ ವಿಳಂಬ ಧೋರಣೆ ಮುಂದುವರೆದರೆ ಪಟ್ಟಣದಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ನಿವೇಶನರಹಿತ ಬಡವರೆಲ್ಲರೂ ಬಂದು ಗುಡಿಸಲು ನಿರ್ಮಿಸಿ,ಸರಕಾರಕ್ಕೆ ಎಚ್ಚರಿಕೆ ಕೊಡುಬೇಕಾಗುತ್ತದೆ ಎಂದರು.