Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ನಾವು ಇಂದು ಉನ್ನತ ಶಿಕ್ಷಣ ಪಡೆದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜದ ಕೂಲಿ,ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿರುತ್ತದೆ
ಶಾಲೆಯಲ್ಲಿ 2005-06ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು -
Ashok Nayak
Jan 19, 2025 12:10 AM
Source : Chikkaballapur Reporter
*ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಚಿಂತಾಮಣಿ: ನಾವು ಗಳಿಸಿದ ಆಸ್ತಿ,ಅಂತಸ್ತು,ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ.ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಮರುಗ ಮಲ್ಲ ಲಕ್ಷ್ಮೀನಾರಾಯಣರೆಡ್ಡಿ ಅಭಿಪ್ರಾಯಪಟ್ಟರು.
ಚಿಂತಾಮಣಿ ತಾಲೂಕಿನ ಮರುಗಮಲ್ಲ ಗ್ರಾಮದಲ್ಲಿರುವ ಬೊಗ್ಗರಂ ನಾರಾಯಣಯ್ಯ ಶೆಟ್ಟಿ ಆದಿಲಕ್ಷ್ಮಮ್ಮ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ 2005-06ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದವರು ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ನಾವು ಇಂದು ಉನ್ನತ ಶಿಕ್ಷಣ ಪಡೆದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜದ ಕೂಲಿ,ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿರು ತ್ತದೆ. ಅವರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಮೂಲಕ ಕಟ್ಟಿದ ತೆರಿಗೆಯ ಹಣದಿಂದಲೆ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾರೂ ಮರೆಯ ಬಾರದು ಎಂದರು.
ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ.ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕ ವಾಪಸ್ ಮಾಡ ಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು,ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್ ರವರು ಮಾತನಾಡಿ ಇದು ಗೌರವಪೂರ್ಣ ಕಾರ್ಯಕ್ರಮ ನೀವು ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಈ ವೇದಿಕೆಯಿಂದ ಸಾಬಿತಾಗಿದೆ ಗುರುವಿನ ಆಶಿರ್ವಾದ ಸದಾಕಾಲ ನಿಮ್ಮೆಲ್ಲರಮೇಲಿದೆ ನಿಮ್ಮ ಬದುಕಿನಲ್ಲಿ ಅವರು ತೋರಿದ ಮಾರ್ಗ ನೀವು ಮುಂದಿನ ಪಿಳಿಗೆಗೆ ಮಾರ್ಗದರ್ಶಕರಾಗಿ ಸಾಧನೆ ಮಾಡಿ ಎಂದರು.
ನಿಮ್ಮ ಹಳೆ ಸವಿನೆನಪುಗಳನ್ನು ಹಂಚಿಕೊಂಡಿದ್ದಿರಿ ಗುರುಶಿಷ್ಯರ ಸಂಬಂಧಕ್ಕೆ ಸಾಕ್ಷಿ ಯಾಗಿದ್ದಿರಿ ಅವರಿಗೆ ನೀವು ಸಲ್ಲಿಸಿದ ಪ್ರೀತಿ,ಗೌರವ,ಸತ್ಕಾರ ಇಡಿ ರಾಷ್ಟ್ರಕ್ಕೆ ಸಲ್ಲಿಸಿದಂತಾ ಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ, ನಿವೃತ್ತ ಶಿಕ್ಷಕರಾದ ಕೆಎನ್ ನರಸಿಂಹಯ್ಯ, ಎಂ ರಾಮಕೃಷ್ಣ,ರಮಣಾರೆಡ್ಡಿ,ಕೃಷ್ಣಮೂರ್ತಿ,ಇಸ್ಮಾಯಿಲ್ ಜಬಿವುಲ್ಲಾ, ಮುಖ್ಯ ಶಿಕ್ಷಕಿ ನಿರ್ಮಲ ವಿ,ರಾಜರೆಡ್ಡಿ,ಈಶ್ವರ್ ಜೆ ಬೆನ್ನೂರು, ಎಸ್ ಬಿ ಲತಾ, ಲಾವಣ್ಯ ಸೇರಿದಂತೆ ಭಾಗವಹಿಸಿದ್ದರು.