ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೌಟುಂಬಿಕ ಜಂಜಾಟಗಳನ್ನು ಮರೆತು ಕ್ರೀಡೆಗಳಲ್ಲಿ ಭಾಗಿಯಾಗಿ : ಹಿರಿಯ ಸಿವಿಲ್  ನ್ಯಾಯಾಧೀಶೆ ಶಿಲ್ಪಾ.ಬಿ.ಕರೆ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಮುಕ್ತ ಅವಕಾಶವಿದೆ. ಶಿಕ್ಷಕರು, ಹಿರಿಯ ನಾಗರೀಕರು, ನಿವೃತ್ತ ಸರಕಾರಿ ನೌಕರರು,ಕಾನೂನು ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು, ಸಂಘಸAಸ್ಥೆಗಳ ಪ್ರತಿನಿಧಿಗಳು ಅರ್ಜಿ ಸಲ್ಲಿಸಿ ನಮ್ಮೊಂದಿಗೆ ಸೇವೆ ಸಲ್ಲಿಸಲು ಮುಂದಾಗಿ

ಚಿಕ್ಕಬಳ್ಳಾಪುರ : ಮಹಿಳೆಯರು ನಾಲ್ಕು ಗೋಡಗಳಿಗೆ ಸೀಮಿತರಾಗುವ ಕಾಲ ದೂರವಾಗಿರುವು ದರಿಂದ ನವರಾತ್ರಿ ಸಂದರ್ಭದಲ್ಲಾದರೂ ಕುಟುಂಬದ ಜವಾಬ್ದಾರಿಗಳನ್ನು ಒಂದು ದಿನದ ಮಟ್ಟಿಗಾದರೂ ದೂರವಿಟ್ಟು ಕ್ರೀಡೆಗಳಲ್ಲಿ ಭಾಗಿಯಾಗಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ.ಬಿ. ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಣದಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಆಟೋಟಗಳಲ್ಲಿ ಭಾಗಿಯಾಗುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ. ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ನಾಯಕತ್ವದ ಗುಣ ಬೆಳೆಯುವುದಲ್ಲದೆ. ಬಾಂಧವ್ಯ ವೃದ್ಧಿಯಾಗಲು ನೆರವಾಗಲಿದೆ ಎಂದರು.

ಇದನ್ನೂ ಓದಿ: Chikkaballapur News: ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಪ್ರತಿಭಟನೆ

ಅರೆ ಕಾಲಿಕ ಕಾನೂನು ಸ್ವಯಂಸೇವಕರಾಗಲು ಮುಕ್ತ ಅವಕಾಶವಿದೆ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಮುಕ್ತ ಅವಕಾಶವಿದೆ. ಶಿಕ್ಷಕರು, ಹಿರಿಯ ನಾಗರೀಕರು, ನಿವೃತ್ತ ಸರಕಾರಿ ನೌಕರರು,ಕಾನೂನು ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು, ಸಂಘಸAಸ್ಥೆಗಳ ಪ್ರತಿನಿಧಿಗಳು ಅರ್ಜಿ ಸಲ್ಲಿಸಿ ನಮ್ಮೊಂದಿಗೆ ಸೇವೆ ಸಲ್ಲಿಸಲು ಮುಂದಾಗಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ.ಬಿ. ಕರೆ ನೀಡಿದರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಿ ನೇಮಕವಾದವರು ಗ್ರಾಮೀಣ  ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನತೆಗೆ ಅವರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವುದೇ ಆಗಿದೆ.ಬಾಲ್ಯವಿವಾಹ ತಡೆ, ಮಾದಕ ವಸ್ತು ಕಳ್ಳಸಾಗಣೆ ತಡೆಗಟ್ಟಲು ಸಹಕಾರ, ಜೀತಪದ್ಧತಿ ನಿರ್ಮೂಲನೆ,ಸಣ್ಣಪುಟ್ಟ ಕೌಟುಂಬಿಕ ಮತ್ತು ಇತರೆ ವ್ಯಾಜ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ನ್ಯಾಯಾಲಯದ ಮೊರೆಹೋಗುವುದನ್ನು ಕಡಿಮೆ ಮಾಡಬಹುದುದಾಗಿದೆ. ಇಂತಹ ಉತ್ತಮವಾದ ಕಾರ್ಯ ಮಾಡಲು ಇಚ್ಚಿಸುವವರು ಅ.೨೦ರ ಒಳಗೆ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿಸಲ್ಲಿಸುವ ಮೂಲಕ ಸ್ವಯಂ ಸೇವಕರಾಗಿ ಕೆಲಸ ಮಾಡಬಹುದು ಎಂದರು.

ಮಹಿಳಾ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಮಹಿಳೆಯರು ಎಲ್ಲಾ ಜಂಜಾಟಗಳನ್ನು ಮರೆತು ಸಂತೋಷದಿಂದ ಆಟವಾಡಿ ನಕ್ಕು ನಲಿದರು. ಈ ಸಂದರ್ಭದಲ್ಲಿ ಪ್ಯಾನಲ್ ವಕೀಲರಾದ ಸೌಜನ್ಯ ಗಾಂಧಿ, ಶ್ರೀಮತಿ ಶಾಲಿನಿ,ಮತ್ತಿತರರು ಇದ್ದರು.