ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಪ್ರತಿಭಟನೆ

ಇನ್ನು ಮನೆಗಳನ್ನು ಸರದಿ ಅನುಕ್ರಮ ಪಾಲನೆ ಮಾಡದೆ, ಅಲಾಟ್ ಮಾಡಲಾಗಿದ್ದು, ಅಲ್ಲೊಂದು ಇಲ್ಲೊಂದು ಇರುವ ಮನೆಗಳ ಅಲಾಟ್‌ಮೆಂಟ್ ಮ್ಯಾಪಿಂಗ್‌ನಿಂದ ತೀವ್ರ ತೊಂದರೆ ಎದುರಾಗಿದೆ. ಒಂದು ಅಥವಾ ಎರಡು ಗ್ರಾಮಗಳಲ್ಲಿ ಮ್ಯಾಪಿಂಗ್ ಮಾಡದೆ, ಹಲವಾರು ಜನವಸತಿ ಪ್ರದೇಶಗಳಿಗೆ ಮ್ಯಾಪಿಂಗ್ ಮಾಡಲಾಗಿದೆ.

ಸಮೀಕ್ಷೆಯಲ್ಲಿನ ತಾಂತ್ರಿಕ ದೋಷಕ್ಕೆ ಬೇಸತ್ತ ಶಿಕ್ಷಕರು

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವೇಳೆ ಎದುರಾಗಿರುವ ಲೋಪಗಳನ್ನು ಸರಿಪಡಿಸುವುದು ಸೇರಿ ಇನ್ನಿತರೆ ಸಮಸ್ಯೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರು ನಗರದ ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು. -

Ashok Nayak Ashok Nayak Sep 27, 2025 1:08 AM

ಚಿಕ್ಕಬಳ್ಳಾಪುರ : ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವೇಳೆ ಎದುರಾಗಿರುವ ಲೋಪಗಳನ್ನು ಸರಿಪಡಿಸುವುದು ಸೇರಿ ಇನ್ನಿತರೆ ಸಮಸ್ಯೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರು ನಗರದ ತಾಲೂಕು ಕಚೇರಿ ಎದುರು ಪ್ರತಿಭಟಿಸಿ ದರು.

ದೋಷಪೂರಿತ ತಾಂತ್ರಿಕತೆ ದಿನಕ್ಕೊಂದು ಬದಲಾವಣೆ ಮಾಡಬೇಕಿದೆ. ಶಿಕ್ಷಕರನ್ನು ಕರ್ತವ್ಯ ನಿರ್ವಹಿಸುವ ಮತ್ತು ವಾಸ ಇರುವ ಸ್ಥಳಗಳಲ್ಲಿ ನಿಯೋಜಿಸದೆ ಅಪರಿಚಿತ ಪ್ರದೇಶಗಳಲ್ಲಿ ನಿಯೋಜಿಸಿರುವುದದಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮನೆಗಳನ್ನು ಗುರುತಿಸುವಲ್ಲಿ ತೊಡಕಾಗುತ್ತಿದ್ದು, ಸಮಯ ವ್ಯರ್ಥವಾಗುತ್ತಿದೆ. ಯುಎಚ್‌ಐಡಿ ಮೂಲಕ ಮನೆಗಳನ್ನು ಗುರುತಿ ಸಲು ಅಸಾಧ್ಯವಾಗಿದ್ದು, ಜಿಯೋ ಟ್ಯಾಗ್ ಸರಿಯಾಗಿ ಮನೆಗಳ ಬಳಿಗೆ ನ್ಯಾವಿಗೇಟ್ ಆಗುತ್ತಿಲ್ಲ ಎಂದು ಶಿಕ್ಷಕರು ಅಳವತ್ತುಕೊಂಡಿದ್ದಾರೆ.

ಇನ್ನು ಮನೆಗಳನ್ನು ಸರದಿ ಅನುಕ್ರಮ ಪಾಲನೆ ಮಾಡದೆ, ಅಲಾಟ್ ಮಾಡಲಾಗಿದ್ದು, ಅಲ್ಲೊಂದು ಇಲ್ಲೊಂದು ಇರುವ ಮನೆಗಳ ಅಲಾಟ್‌ಮೆಂಟ್ ಮ್ಯಾಪಿಂಗ್‌ನಿಂದ ತೀವ್ರ ತೊಂದರೆ ಎದುರಾಗಿದೆ. ಒಂದು ಅಥವಾ ಎರಡು ಗ್ರಾಮಗಳಲ್ಲಿ ಮ್ಯಾಪಿಂಗ್ ಮಾಡದೆ, ಹಲವಾರು ಜನವಸತಿ ಪ್ರದೇಶಗಳಿಗೆ ಮ್ಯಾಪಿಂಗ್ ಮಾಡಲಾಗಿದೆ. ಯುಎಚ್‌ಐಡಿ ಅನುಕ್ರಮದಲ್ಲಿ ಒಂದೇ ಊರಿಗೆ ಅಥವಾ ಜನವಸತಿ ಪ್ರದೇಶಕ್ಕೆ ಹಲವಾರು ಬಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Chikkanayakanahalli News: ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಕಾರ್ಯಾಗಾರ: ಯುವಕರ ಉದ್ಯೋಗಕ್ಕೆ ಕೌಶಲ್ಯಾಭಿವೃದ್ಧಿಗೆ 4,500 ಕೋಟಿ ರೂ. ಅನುದಾನ

ಮಳೆ ಮತ್ತಿತರ ಕಾರಣಗಳಿಂದ ಯುಎಚ್‌ಐಡಿ ಲಭ್ಯವಾಗುತ್ತಿಲ್ಲ, ಅವೈಜ್ಞಾನಿಕ ಸ್ಥಳಗಳಿಗೆ ಮ್ಯಾಪಿಂಗ್ ಮಾಡಲಾಗಿದೆ. ಗಣತಿ ಮಾಡುತ್ತಿರುವ ಸ್ಥಳದಿಂದ ಹಲವಾರು ಮನೆ ಬಿಟ್ಟು, ಬೇರೆ ಕಡೆ ಹೋಗಿ ನಂತರ ಅದೇ ಸ್ಥಳಕ್ಕೆ ಬರಬೇಕಾದ ಸಮಸ್ಯೆ ಇದೆ. ಯುಎಚ್‌ಐಡಿ ಅಥವಾ ಮನೆ ಯಜಮಾನನ ಹೆಸರು, ಜನವಸತಿ ಪ್ರದೇಶ ಮೊಬೈಲ್ ನಂಬರ್ ಪಟ್ಟಿ ನೀಡದಿರುವುದರಿಂದ ಸಮಸ್ಯೆ ಎದುರಿಸಬೇಕಾಗಿದೆ ಎಂದು ಕಿಡಿಕಾರಿದರು.

ಶಿಕ್ಷಕ ಕೆ.ಸಿ.ಶ್ರೀನಿವಾಸ್ ಮಾತನಾಡಿ, ಸಮೀಕ್ಷೆ ಅವೈಜ್ಞಾನಿಕವಾಗಿದೆ, ಇಷ್ಟ ವರ್ಷಗಳ ಇತಿಹಾಸ ನೋಡಿದರೆ ಗಣತಿಯಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿತ್ತು, ಗಣತಿಯಲ್ಲಿ ತುಂಬಾ ತಪ್ಪು ಮಾಡಿದ್ದಾರೆ. ಬೆಸ್ಕಾಂನವರಿಗೆ ಗುತ್ತಿಗೆ ನೀಡಲಾಗಿದೆ. ಬೆಸ್ಕಾಂನವರು ೧೫ ದಿನಗಳ ಹಿಂದೆಯೇ ಗೋಡೆಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ, ಮಳೆ ಬಂದು ಸಂಖ್ಯೆಗಳೆಲ್ಲ ಅಳಿಸಿಹೋಗಿವೆ, ಅಲ್ಲದೆ ಡ್ರಾಪ್ಟಿಂಗ್ ಬೇರೇ ಊರುಗಳನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಬಿಎಲ್‌ಒಗಳನ್ನು ಬಳಸಿಕೊಂಡು ಗಣತಿ ನಡೆಸಲಾಗುತ್ತಿತ್ತು. ಅದು ಸಲಭವಾಗಿತ್ತು. ಆದರೆ ಇದೀಗ ಬಿಎಲ್‌ಒಗಳಿಂದ ಮಾಹಿತಿ ಪಡೆದಿದ್ದರೆ ಸಮೀಕ್ಷೆ ಯಶಸ್ವಿಯಾಗುತ್ತಿತ್ತು, ಬೆಸ್ಕಾಂ ನವರು ಗೊಂದಲ ಮೂಡಿಸುತ್ತಿದ್ದಾರೆ, ಅನಾರೋಗ್ಯ ಪೀಡಿತ ಶಿಕ್ಷಕರೇ ಹೆಚ್ಚಾಗಿದ್ದಾರೆ, ಕೆಲವರಿಗೆ ಮೊಬೈಲ್ ಬಳಸುವುದೇ ಗೊತ್ತಿಲ್ಲ, ಕೆಲವರಿಗೆ ಆಪ್ ಓಪೆನ್ ಮಾಡೋದೇ ಗೊತ್ತಿಲ್ಲ, ಮ್ಯಾನುಯಲ್ ಕೊಡಲಿ, ಏರಿಯಾ ಪಿಕ್ಸ್ ಮಾಡಲಿ, ಕುಟುಂಬಗಳ ಸಂಖ್ಯೆ ಕೊಟ್ಟು ಸಮೀಕ್ಷೆಗೆ ಕಳುಹಿಸಲಿ ಎಂದು ಒತ್ತಾಯಿಸಿದರು.

ಶಿಕ್ಷಕಿ ಪ್ರೇಮಾವತಿ ಮಾತನಾಡಿ, ಈ ಹಿಂದೆ ಹಲವಾರು ಸಮೀಕ್ಷೆಗಳನ್ನು ಮಾಡಿದ್ದೇವೆ, ಯಾವ ಸಮೀಕ್ಷೆಯಲ್ಲಿಯೂ ಇಷ್ಟು ಗೊಂದಲ ಇಲ್ಲ, ನಮ್ಮ ಮೇಲೆ ನಮಗೇ ನಂಬಿಕೆ ಹೋಗುವ ಸ್ಥಿತಿ ಎದುರಾಗಿದೆ. ಆಪ್‌ಗಳನ್ನು ಓಪೆನ್ ಮಾಡಿದರೆ ಎರರ್ ಅಂತ ಬರುತ್ತಿದೆ, ಹೀಗಾದರೆ ಏನು ಎಂದು ಮಾನಸಿಕವಾಗಿ ಖಾಯಿಲೆ ಬರುವ ಸ್ಥಿತಿ ನಿರ್ಮಾಣವಾಗಿದೆ, ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದರೆ ನನ್ನನ್ನು ಸಮೀಕ್ಷೆಗೆ ದೊಡ್ಡಬಳ್ಳಾಪುರ ತಾಲೂಕಿನ ಒಂದು ಗ್ರಾಮಕ್ಕೆ ನೇಮಿಸಲಾಗಿದೆ. ಅಲ್ಲಿನ ಜನರ ಮುಖ ಪರಿಚಯ ಇಲ್ಲ, ಅವರನ್ನು ಕೇಳಿದರೆ ಅವರು ಯಾವ ರೀತಿ ನಂಬುತ್ತಾರೆ, ಗ್ರಾಮೀಣ ಜನತೆಗೆ ಸಮೀಕ್ಷೆ ಬಗ್ಗೆ ಮಾಹಿತಿಯೇ ಇಲ್ಲ, ಅವರ ಬಳಿ ಆಧಾರ್ ಸೇರಿದಂತೆ ವೈಯಕ್ತಿಕ ಮಾಹಿತಿ ಕೇಳಿದರೆ ಆನ್ ಲೈನ್ ಮೋಸಗಾರರು ಎಂದು ಒಡೆಯಲು ಬರುತ್ತಿದ್ದಾರೆ ಎಂದು ಅಲವತ್ತುಕೊಂಡರು.

ಯುಎಚ್‌ಐಡಿ ಅಥವಾ ಮನೆ ಯಜಮಾನನ ಹೆಸರು, ಜನವಸತಿ ಪ್ರದೇಶ, ಮೊಬೈಲ್ ನಂಬರ್, ಜನವಸತಿ ಪ್ರದೇಶದ ನಕ್ಷೆ ನೀಡಬೇಕು. ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು. ವಿನಾಯಿತಿಗೆ ಅರ್ಹರಿರುವ ಶಿಕ್ಷಕರನ್ನು ಪಟ್ಟಿಯಿಂದ ಕೈ ಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.