Bagepally News: ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ: ಬಿಇಓ ವೆಂಕಟೇಶಪ್ಪಗೆ ಮನವಿ
೨೦೨೫ನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿಯಲ್ಲಿ ದಸರಾ ಹಾಗೂ ನವರಾತ್ರಿ ಹಬ್ಬಗಳಿವೆ. ಶಿಕ್ಷಕರು ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಮೀಕ್ಷೆಯನ್ನು ಒಂದು ವಾರ ಮುಂದೂಡಬೇಕು. ವರ್ಷಪೂರ್ತಿ ದುಡಿಯುವ ಶಿಕ್ಷಕರು ಕುಟುಂಬದ ಜತೆ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ ವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

ಗರ್ಭಿಣಿ, ಅಂಗವಿಕಲ ಹಾಗೂ ತೀವ್ರತರ ಕಾಯಿಲೆ ಇರುವ ಶಿಕ್ಷಕರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಬಿಇಓ ವೆಂಕಟೇಶಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. -

ಬಾಗೇಪಲ್ಲಿ: ಗರ್ಭಿಣಿ, ಅಂಗವಿಕಲ ಹಾಗೂ ತೀವ್ರತರ ಕಾಯಿಲೆ ಇರುವ ಶಿಕ್ಷಕರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಬಿಇಓ ವೆಂಕಟೇಶಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬುಧವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟ ರವಣ ಮಾತನಾಡಿ ೨೦೨೫ ನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿಯಲ್ಲಿ ದಸರಾ ಹಾಗೂ ನವರಾತ್ರಿ ಹಬ್ಬಗಳಿವೆ. ಶಿಕ್ಷಕರು ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಮೀಕ್ಷೆಯನ್ನು ಒಂದು ವಾರ ಮುಂದೂಡಬೇಕು. ವರ್ಷಪೂರ್ತಿ ದುಡಿಯುವ ಶಿಕ್ಷಕರು ಕುಟುಂಬದ ಜತೆ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.
ಗರ್ಭಿಣಿ, ಬಾಣಂತಿ ಶಿಕ್ಷಕಿಯರು, ಅಂಗವಿಕಲ ಶಿಕ್ಷಕ, ಶಿಕ್ಷಕಿಯರು, ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಶಿಕ್ಷಕಿಯರು ಹಾಗೂ ವಯೋನಿವೃತ್ತಿ ಅಂಚಿನಲ್ಲಿರುವವರು ಮನೆ–ಮನೆಗೂ ತಿರುಗಿ ಸಮೀಕ್ಷೆ ಯಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಅಂತಹ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪಧಾಧಿಕಾರಿಗಳಾದ ಸಿ.ವೆಂಕಟ ರಾಯಪ್ಪ, ರಂಗಾರೆಡ್ಡಿ, ಕದಿರಪ್ಪ, ವೈ.ಎ.ಮಂಜುನಾಥ್, ಅಂಜನಪ್ಪ ಪ್ರಭಾವತಿ, ರಮೇಶ್, ಕೆ.ವಿ.ಶ್ರೀನಿವಾಸ್, ಈಶ್ವರಪ್ಪ ಹಾಗೂ ಇತರೆ ಶಿಕ್ಷಕರು ಹಾಜರಿದ್ದರು.