ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿ.ಎಸ್.ಟಿ ಸರಳೀಕರಣದಿಂದ ಬಡ, ಮಧ್ಯಮ ವರ್ಗದ ಜನತೆಗೆ ಅನುಕೂಲ: ಮುನಿರಾಜು

ಸಾಮಾನ್ಯ ರೈತ ಸಹ ಬೈಕ್ ಖರೀದಿಸಲು ಕಷ್ಟಕರವಾಗಿತ್ತು. ಇದೀಗ ಎಲ್ಲರಿಗೂ ಅನುಕೂಲವಾಗಿದೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದಿಂದ ತೆರೆಯಲಾಗಿದ್ದ ಜನೌಷಧಿ ಕೇಂದ್ರವನ್ನು ಇದೀಗ ಅಲ್ಲಿಂದ ತೆಗೆದಿದ್ದಾರೆ. ಇದರಿಂದಾಗಿ ಬಡವರಿಗೆ ಅನಾನುಕೂಲವಾಗಿದೆ. ಇದಕ್ಕೆ ಆದಷ್ಟು ಶೀಘ್ರ ಪ್ರಧಾನಿ ಮೋದಿಯವರು ಉತ್ತರ ನೀಡಲಿದ್ದಾರೆ.

ಜಿ.ಎಸ್.ಟಿ ಸರಳೀಕರಣದಿಂದ ಬಡ, ಮಧ್ಯಮ ವರ್ಗದ ಜನತೆಗೆ ಅನುಕೂಲ

ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. -

Ashok Nayak Ashok Nayak Sep 29, 2025 1:31 AM

ಗುಡಿಬಂಡೆ: ಪ್ರಧಾನಿ ನರೇಂದ್ರ ಮೋದಿಯವರು ಜಿ.ಎಸ್.ಟಿ ಅಡಿಯಲ್ಲಿ ಬರುವಂತಹ ಕೆಲ ವಸ್ತುಗಳ ಜಿ.ಎಸ್.ಟಿಯನ್ನು ಕಡಿಮೆ ಮಾಡಿ ದಸರಾ, ದೀಪಾವಳಿ ಹಬ್ಬದ ಕೊಡುಗೆ ನೀಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಮಂಡಲ ಹಾಗೂ ದೇವನ ಹಳ್ಳಿಯ ಆಕಾಶ್ ಆಸ್ಪತ್ರೆಯ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾ ಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಡೀ ವಿಶ್ವವೇ ನಮ್ಮ ಭಾರತದತ್ತ ನೋಡುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಜಿ.ಎಸ್.ಟಿ ಸರಳೀಕರಣ ಗೊಳಿಸಿ ಒಂದು ವರ್ಗ ಅಥವಾ ಒಬ್ಬರಿಗೆ ಮಾತ್ರ ಸೀಮಿತವಾಗದೇ ಬಡ ಹಾಗೂ ಮದ್ಯಮ ವರ್ಗದ ಜನತೆಗೆ ಅನುಕೂಲವಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: Gudibande News: ಗುಡಿಬಂಡೆಯ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್, ಶೀಘ್ರ ಅಗಲೀಕರಣ ಕಾರ್ಯ

ಅದರಲ್ಲೂ ವಿಮೆ ಪಡೆಯಲು ಶೂನ್ಯ ಜಿ.ಎಸ್.ಟಿ ನಿಗದಿ ಮಾಡಲಾಗಿದೆ. ಸಾಮಾನ್ಯ ರೈತ ಸಹ ಬೈಕ್ ಖರೀದಿಸಲು ಕಷ್ಟಕರವಾಗಿತ್ತು. ಇದೀಗ ಎಲ್ಲರಿಗೂ ಅನುಕೂಲವಾಗಿದೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದಿಂದ ತೆರೆಯಲಾಗಿದ್ದ ಜನೌಷಧಿ ಕೇಂದ್ರವನ್ನು ಇದೀಗ ಅಲ್ಲಿಂದ ತೆಗೆದಿದ್ದಾರೆ. ಇದರಿಂದಾಗಿ ಬಡವರಿಗೆ ಅನಾನುಕೂಲವಾಗಿದೆ. ಇದಕ್ಕೆ ಆದಷ್ಟು ಶೀಘ್ರ ಪ್ರಧಾನಿ ಮೋದಿಯವರು ಉತ್ತರ ನೀಡಲಿದ್ದಾರೆ. ಜನತೆ ಸಹ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇದೇ ಸಮಯದಲ್ಲಿ ಬಿಜೆಪಿಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ ಮಾತ ನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ಸರಳೀಕರಣಗೊಳಿಸಿ ಎಲ್ಲರಿಗೂ ಅನುಕೂಲವಾಗುವಂತೆ ಮಾಡಿದ್ದಾರೆ. 

ಕಾಂಗ್ರೇಸ್ ಸರ್ಕಾರದ ಮಾದರಿಯಲ್ಲಿ ನಾವು ಸುಳ್ಳು ಆಶ್ವಾಸನೆಗಳನ್ನು ಕೊಡುವುದಿಲ್ಲ. ಚುನಾವಣೆಯ ಸಮಯದಲ್ಲಿ ಪಂಚ ಗ್ಯಾರಂಟಿಗಳನ್ನು ಕೊಡ್ತೀವಿ ಅಂತಾ ಅಧಿಕಾರಕ್ಕೆ ಬಂದು ಇದೀಗ ಸರಿಯಾಗಿ ಕೊಡುತ್ತಿಲ್ಲ. 

ಮಹಿಳೆಯರಿಗೆ 2 ಸಾವಿರ ಹಣ ನೀಡ್ತೀವಿ ಅಂತಾ ಹೇಳಿ, ಚುನಾವಣಾ ಬಳಿಕ ಕೇವಲ ಮನೆಯ ಯಜಮಾನಿಗೆ ಮಾತ್ರ ಕೊಡ್ತೀವಿ ಅಂತಾ ಮನೆಯನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಯೊಂದು ಯೋಜನೆ ಎಲ್ಲರಿಗೂ ಅನುಕೂಲವಾಗು ವಂತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಇನ್ನೂ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇನ್ನೂ ಜಿ.ಎಸ್.ಟಿ. ಇಳಿಕೆಯ ಕುರಿತಂತೆ ಪಟ್ಟಣದ ಅಂಗಡಿ ಮಳಿಗೆಗಳಿಗೆ ತೆರಳಿ ಅಂಗಡಿ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ಅರಿವು ಮೂಡಿಸಿದರು. ಜನರಿಗೆ ಜಿ.ಎಸ್.ಟಿ. ಇಳಿಕೆಯಾಗಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಅಂಗಡಿಯವರೂ ಸಹ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಬಳಿಕ ಗುಡಿಬಂಡೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿಷ್ಟಾಪಿಸಿರುವ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂರ್ಯನಾರಾಯಣರೆಡ್ಡಿ, ಗುಡಿಬಂಡೆ ಬಿಜೆಪಿ ಅಧ್ಯಕ್ಷ ಗಂಗಿರೆಡ್ಡಿ, ಬಾಗೇಪಲ್ಲಿಯ ಪ್ರತಾಪ್ ರೆಡ್ಡಿ, ಗೌರಿಬಿದನೂರು ಬಿಜೆಪಿ ಅಧ್ಯಕ್ಷ ರಮೇಶ್, ಸ್ಥಳೀಯ ಮುಖಂಡರಾದ ಗಜನಾಣ್ಯ ನಾಗರಾಜು, ಆಶಾಜಯಪ್ಪ, ಅಮರೇಶ್, ಮಧು, ಲೋಕೇಶ್, ಶಿವಪ್ಪ, ರಾಜಗೋಪಾಲ್, ರವಿ ಸೇರಿದಂತೆ ಹಲವರು ಇದ್ದರು.