ಚಿಕ್ಕಬಳ್ಳಾಪುರ : ನಗರದ ಕಂದವಾರ ಪೇಟೆಯಲ್ಲಿರುವ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯ ಮತ್ತು ಕಾಳಿಕಾಂಭ ಕಮಠೇಶ್ವರಸ್ವಾಮಿ ಸೇವಾಸಮಿತಿ ಆಶ್ರಯದಲ್ಲಿ 10 ನೇ ವರ್ಷದ ಹೂವಿನ ಕರಗಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಶನಿವಾರ ರಾತ್ರಿ ೧೧ ಗಂಟೆಗೆ ಪ್ರಾರಂಭವಾದ ಕರಗ ಮಹೋತ್ಸವದಲ್ಲಿ ಕರಗವನ್ನು ಹೊತ್ತ ಪೂಜಾರಿ ಚಿಕ್ಕಬಳ್ಳಾಪುರ ವಾಪಸಂದ್ರ ನಿವಾಸಿ ಅಜಿತ್ ಕುಮಾರ್ ತಮಟೆಯ ಲಯಕ್ಕೆ ತಕ್ಕಂತೆ ಕುಣಿಯುತ್ತಾ ಕರಗವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತಾಧಿಗಳ ಮನಸ್ಸಂತೋಷಪಡಿಸುವಲ್ಲಿ ಯಶಸ್ವಿಯಾದರು.
ಅಹೋರಾತ್ರಿ ನಡೆದ ಕರಗ ಮಹೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಭಕ್ತಿರಿಂದ ಪೂಜೆ ಮತ್ತು ಕಾಣಿಕೆಗಳನ್ನು ಸ್ವೀಕರಿಸಿ ಆಶೀರ್ವಧಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸೋಮವಾರ ಮಧ್ಯಾಹ್ನ ೩.೩೦ಕ್ಕೆ ಭುವನೇಶ್ವರಿ ವೃತ್ತದಲ್ಲಿ ನಡೆಯುವ ವಸಂತೋತ್ಸವದ ಮೂಲಕ ಐದು ದಿನಗಳ ಕರಗ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಕರಗ ಮಹೋತ್ಸವದ ಅಂಗವಾಗಿ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯ ಮತ್ತು ನಗರ ವನ್ನು ವಿದ್ಯುತ್ ದೀಪಾಲಂಕಾರಗಳಿAದ ಅಲಂಕರಿಸಲಾಗಿತ್ತು. ಇದೇ ವೇಳೆ ಅನ್ನಸಂತರ್ಪಣೆ, ದೀಪ ಹಾಗೂ ಕರ್ಪೂರ ಸೇವೆ,ಸುಪ್ರಸಿದ್ಧ ಕಲಾವಿದರಿಂದ ವಾದ್ಯಗೋಷ್ಠಿ,ನೃತ್ಯ ಪ್ರದರ್ಶನ, ದೇವರ ಪಲ್ಲಕ್ಕಿ ಉತ್ಸವಗಳನ್ನು ಏರ್ಪಡಿಸಲಾಗಿದ್ದು ಸಾವಿರಾರು ಮಂದಿ ಭಕ್ತರು ಆಗಮಿಸಿ ಇವನ್ನು ಕಣ್ತುಂಬಿಕೊಂಡರು.
ಕರಗ ಮಹೋತ್ಸವದಲ್ಲಿ ಕಮಿಟಿ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್, ಉಪಾಧ್ಯಕ್ಷ ಕೃಷ್ಣಾಚಾರಿ, ಕಾರ್ಯದರ್ಶಿ ಮುನಿರಾಜು, ಖಜಾಂಚಿ ಪ್ರಕಾಶ್,ಮುನಿರಾಜು,ವಾಣಿಜ್ಯೋಧ್ಯಮಿ ಎಸ್.ಆರ್. ರಾಮು, ಆಲೂಗಡ್ಡೆ ಮಹೇಶ್,ದೇವಾಸ್ಥಾನದ ಪದಾಧಿಕಾರಿಗಳು ಮತ್ತು ಕೆಕೆ ಬಾಯ್ಸ್ ಇದ್ದರು.