ಗೌರಿಬಿದನೂರು: ನಗರದ ಕಲ್ಲೂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಹನ್ನೆರಡು ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ,ಎಲ್ಲಾ ಹನ್ನೆರಡು ಸ್ಥಾನಗಳಲ್ಲಿ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬೆಂಬಲಿಗರು ಆಯ್ಕೆಯಾಗುವ ಮೂಲಕ ಸ್ಥಳೀಯ ಚುನಾವಣೆಗಳಲ್ಲಿ ಶಾಸಕರ ಬೆಂಬಲಿಗರು ತಮ್ಮ ಆಧಿಪತ್ಯವನ್ನು ಮುಂದುವರಿಸಿದ್ದಾರೆ.
ಕಲ್ಲೂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಒಟ್ಟು ಹನ್ನೆರಡು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬಣದಿಂದ ಹನ್ನೆರಡು ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಎಲ್ಲಾ ಹನ್ನೆರಡು ಸ್ಥಾನಗಳಿಗೆ ನಾಮಪತ್ರವನ್ನು ಸಲ್ಲಿಸಿದ್ದರು.
ಇದನ್ನೂ ಓದಿ: Gauribidanur News: ತಂಗಿ ಮನೆ- ಪಿಂಕ್ ರೂಂ’ ಉದ್ಘಾಟನೆ: ಸರ್ಕಾರಿ ಎಸ್.ಎಸ್.ಇ.ಎ. ಪದವಿ ಪೂರ್ವ ಕಾಲೇಜು,
ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನ ಒಂದು ಗಂಟೆಗೆ ಮುಕ್ತಾಯ ವಾಯಿತು. ನಂತರ ಮತಗಳ ಏಣಿಕೆ ಕಾರ್ಯ ನಡೆದು ಎಲ್ಲಾ ಹನ್ನೆರಡು ಸ್ಥಾನಗಳಲ್ಲೂ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬೆಂಬಲಿಗರೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಪುಟ್ಟಸ್ವಾಮಿಗೌಡರ ಆಪ್ತ ಶ್ರೀನಿವಾಸ್ ಗೌಡ ಮಾತನಾಡಿ, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಮತದಾರರು ನಮ್ಮ ಬೆಂಬಲಿಗರನ್ನು ಅತಿಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಲ್ಲೂಡಿಯ ಕೆ.ಹೆಚ್.ಪಿ ಬಣದ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಬಣ್ಣ,ವಿಜಯರಾಘವ, ಗಂಗಣ್ಣ, ಸುರೇಶ್ ಬಾಬು, ಕೃಷ್ಣಪ್ಪ , ವೆಳಪಿ ಆನಂದ್, ವೆಂಕಟಾಚಲಯ್ಯ ಹಾಗೂ ನೂತನ ನಿರ್ದೇಶಕರುಗಳಾದ ಸುಬ್ರಹ್ಮಣ್ಯ ಗೌಡ, ಶಶಿಧರ್, ಲಕ್ಷ್ಮೀನರಸಪ್ಪ, ಉಮೇಶ್, ಕೆಆರ್ ನಾಗರಾಜ್, ವಿಶ್ವನಾಥ್, ಕೆಎಸ್ ನಾಗರಾಜ್, ಅಶ್ವತ್ಥಮ್ಮ, ವೀಣಾ, ಲೋಕೇಶ್, ಗಂಗಾಧರ, ಸದಾಶಿವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.