ಚಿಂತಾಮಣಿ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಮಾಣಿಕ ಹಾಗೂ ಉತ್ತಮ ರೀತಿಯಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕಾರ್ಯನಿರ್ವಹಿಸಿ ಬೇರೆ ಕಡೆ ವರ್ಗಾವಣೆಗೊಂಡ ಚಿಂತಾಮಣಿಯ ಉಪನೋಂದಣಾ ಅಧಿಕಾರಿ ನಾರಾಯಣಪ್ಪ ಹಾಗೂ ಕಚೇರಿಯ ಪ್ರಥಮ ದರ್ಜೆಯ ಅಧಿಕಾರಿ ಸೈಯದ್ ಮೋಸಿನ್ ಇವರಿಬ್ಬರು ಬೇರೆ ಕಡೆ ವರ್ಗಾವಣೆ ಯಾಗಿದ್ದು ಇಂದು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಪತ್ರ ಬರಹಗಾರರಿಂದ ಆಯೋಜಿಸಲಾಗಿತ್ತು.
ಪತ್ರ ಬರಹಗಾರರು ವರ್ಗಾವಣೆಯಾದ ಪ್ರಾಮಾಣಿಕ ಅಧಿಕಾರಿಗಳನ್ನು ಆತ್ಮೀಯವಾಗಿ ಶಾಲು ಹೊದಿಸಿ ಮೈಸೂರು ಪೇಟ ಧರಿಸಿ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ: Chinthamani News: ಚೇಳೂರು ರಸ್ತೆಯಲ್ಲಿರುವ ಗುಂಡಿಗಳಿಗೆ ಪೂಜೆ ಮಾಡಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು
ಈ ವೇಳೆ ಮಾತನಾಡಿದ ಪತ್ರ ಬರಹಗಾರರು ರಾಜ್ಯದಲ್ಲಿ ಮಾದರಿ ಹಾಗೂ ಪ್ರಾಮಾಣಿಕ ರೀತಿಯಲ್ಲಿ ಕಾರ್ಯನಿರ್ವಹಿಸಿದ ಉಪನೋಂದಣಾ ಅಧಿಕಾರಿ ನಾರಾಯಣಪ್ಪ ರವರ ಸೇವೆ ಎಂದಿಗೂ ಮರೆಯಲಾಗದು.ಇಂತಹ ಒಬ್ಬ ನಿಷ್ಠಾವಂತ ಅಧಿಕಾರಿ ಸಾರ್ವಜನಿಕರ ಕೆಲಸ ದೇವರ ಕೆಲಸ ಎಂದು ನಿರ್ವಹಿಸಿದ್ದಾರೆ.ಅವರ ಸೇವೆ ಈ ಕ್ಷೇತ್ರಕ್ಕೆ ಇನ್ನು ಹೆಚ್ಚಾಗಿ ಅವಶ್ಯಕತೆ ಇತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಉಪನೋಂದಣಾ ಅಧಿಕಾರಿ ಕೆ ಆರ್ ರವೀಂದ್ರ ಗೌಡ, ಬ್ರಹ್ಮಾನಂದ ರೆಡ್ಡಿ, ಮಂಜುನಾಥ್,ಹರೀಶ್,ರಾಜಮ್ಮ, ಸೈಯದ್ ನಯಾಜ್, ಎನ್ ವಿ ಕೊಂಡಪ್ಪ, ಪ್ರಸಾದ್, ಎಂ ವಿ ರವಿ, ಆನಂದ್, ಶ್ರೀರಾಮರೆಡ್ಡಿ, ನರೇಶ್, ಯತೀಶ್, ನರಸಿಂಹಯ್ಯ, ರಾಜಣ್ಣ, ಪದ್ಮನಾಭ ಸೇರಿದಂತೆ ಮತ್ತಿತರರು ಇದ್ದರು.