ಚಿಕ್ಕಬಳ್ಳಾಪುರ: ಮುಂಬರುವ ನ.3ರಿಂದ 6ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ರಾಜ್ಯ ಮಿನಿ ಒಲಂಪಿಕ್ಸ್ʼಗೆ ಚಿಕ್ಕಬಳ್ಳಾಪುರ ಜಿಲ್ಲಾತಂಡವನ್ನು ಆಯ್ಕೆ ಮಾಡಲಾಗಿದೆ.
14 ವರ್ಷ ವಯೋಮಿತಿಯ ಬಾಲಕ/ಬಾಲಕಿಯರಾದ ತವನೀಶ್, ಧೀರಜ್, ಸಂಜನಾ, ಹುಜ್ಲು, ಹೌಜಿ ಫರ್ದೂನ್, ದಿವ್ಯಶ್ರೀ, ನಯನಶ್ರೀ, ಚಿನ್ಮಯಗೌಡ, ತೇಜಸ್ ಮತ್ತು ಕೀರ್ತನಾರವರು ಆಯ್ಕೆ ಯಾಗಿದ್ದು, ತಂಡದ ತರಬೇತಿದಾರರಾಗಿ ಮೈತ್ರಿರವರು, ವ್ಯವಸ್ಥಾಪಕರಾಗಿ ಮಂಜುನಾಥ್ ರವರು ತಂಡದ ಜೊತೆ ತೆರೆಳುತ್ತಿದ್ದು, ಈ ಕ್ರೀಡಾಕೂಟದ ತೀರ್ಪುಗಾರರಾಗಿ ಮಂಚನ ಬಲೆ ಶ್ರೀನಿವಾಸ್ ರವರು ಆಯ್ಕೆಯಾಗಿರುತ್ತಾರೆ.
ಇದನ್ನೂ ಓದಿ: Chikkamagaluru News: ಎಂಗೇಜ್‌ಮೆಂಟ್‌ಗೆಂದು ಬಂದ ಯುವತಿ ಹೋಂ ಸ್ಟೇ ಬಾತ್‌ರೂಂನಲ್ಲಿ ಶವವಾಗಿ ಪತ್ತೆ!
ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ತರಲೆಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಕೆ.ವಿ.ನವೀನ್‍ಕಿರಣ್‍ರವರು ಶುಭ ಹಾರೈಸಿದ್ದಾರೆ.