ಗೌರಿಬಿದನೂರು: ನಗರಸಭೆಯ ಮುಕ್ತ ನಿಧಿಯಡಿ ವಿಶಿಷ್ಟ ಚೇತನರಿಗೆ ತ್ರಿಚಕ್ರ ವಾಹನಗಳು ಮತ್ತು ಎಂಬಿಬಿಎಸ್ ಹಾಗೂ ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಫಲಾನುಭವಿ ವಿದ್ಯಾರ್ಥಿ ಗಳನ್ನು ಪಾರದರ್ಶಕವಾಗಿ ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಿ,ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.
ನಗರದ ನಗರಸಭೆ ಕಚೇರಿಯ ಆವರಣದಲ್ಲಿ ನಗರಸಭೆ ವತಿಯಿಂದ ಎ???ಸ್ಪಿಟಿ ಮುಕ್ತ ನಿಧಿ ಅನುದಾನದಡಿ ವಿಕಲಚೇತನರಿಗೆ ಎಂಟು ತ್ರಿಚಕ್ರ ವಾಹನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ನಗರಸಭೆಯಿಂದ ಸವಲತ್ತುಗಳನ್ನು ಪಡೆದಿರುವ ಫಲಾನುಭವಿಗಳು ಸವಲತ್ತುಗಳನ್ನು ದುರುಪ ಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇದನ್ನೂ ಓದಿ: Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ
ಮುಖಂಡರಾದ ಆರ್ ಅಶೋಕ್ ಕುಮಾರ್ ಮಾತನಾಡಿ, ಶಾಸಕರಾದ ಕೆಎಚ್ ಪುಟ್ಟಸ್ವಾಮಿ ಗೌಡರು ಶಾಸಕರಾಗುವ ಮುಂಚಿನಿಂದಲೂ ತಾಲೂಕಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿ ಕೊಂಡು ಬರುತ್ತಿದ್ದರು,ಶಾಸಕರಾದ ನಂತರವೂ ಅವರು ತಮ್ಮ ಸಮಾಜಮುಖಿ ಕೆಲಸ ಗಳನ್ನು ಮುಂದುವರಿಸಿಕೊAಡು ಬರುವ ಜೊತೆಗೆ ಸರ್ಕಾರದಿಂದ ಹೆಚ್ಚಿನ ರೀತಿ ಸವಲತ್ತುಗಳನ್ನು ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್ ಉಪಾಧ್ಯಕ್ಷ ಫರೀದ್, ಪೌರಾಯುಕ್ತೆ ಡಿಎಂ ಗೀತಾ,ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್,ವಿ ರಮೇಶ್, ಪದ್ಮಾವತಿ, ಕಲ್ಲೀಂ, ಚಂದ್ರ ಮೋಹನ್, ಮಂಜುಳಾ,ಸಪ್ತಗಿರಿ,ರಾಜಕುಮಾರ್,ಶ್ರೀರಾಮಪ್ಪ,ಸುಬ್ಬರಾವು,ಗೋಪಿನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ನಗರಸಭೆಯ ಮುಕ್ತ ನಿಧಿಯಡಿ ವಿಶಿಷ್ಟ ಚೇತನರಿಗೆ ತ್ರಿಚಕ್ರ ವಾಹನಗಳು ಮತ್ತು ಎಂಬಿಬಿಎಸ್ ಹಾಗೂ ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಫಲಾನು ಭವಿ ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಿ, ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.