ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ

ಮುಖ್ಯಮಂತ್ರಿಯ ಭೇಟಿಯ ಹಿನ್ನೆಲೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ ಏರ್ಪಡಿಸಲಾಗಿತ್ತು. ದೇವಾ ಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಗೌರವ ವಂದನೆ  ಸಲ್ಲಿಸಿ ಸ್ವಾಗತ ಕೋರಲಾಯಿತು. ಭೋಗ ನಂದೀಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಮುಖ್ಯಮಂತ್ರಿಗಳು ದೇವರ ದರ್ಶನ ಪಡೆದು ಪುನೀತರಾದರು.

ಭರ್ಜರಿ ಬಾಡೂಟಕ್ಕೆ ಮನಸೋತ ಸಚಿವ ಸಂಪುಟ ಸಭೆ

Profile Ashok Nayak Jul 3, 2025 5:38 PM

ಪತ್ರಕರ್ತರಿಗೆ ಬ್ಯಾಗ್ ಹುಡುಗರೆಯಾಗಿ ನೀಡಿದ ಎಲ್ ಡಬ್ಲ್ಯೂ ಪಿ ಕಂಪನಿ 

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ನಡೆದ 2025ನೇ ಸಾಲಿನ 14ನೇ ಸಚಿವ ಸಂಪುಟ ಸಭೆ ಅಂಗವಾಗಿ ಮುಖ್ಯಮಂತ್ರಿಗಳು ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು 

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ನಂದಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರಲ್ಲದೆ ಕಾಂಗ್ರೆಸ್ ಪಕ್ಷದ ಬಾವುಟಗಳು ಅಭಿಮಾನಿಗಳ ಶುಭ ಹಾರೈಕೆಯ ಬ್ಯಾನರ್ಗಳು ನಂದಿ ಗ್ರಾಮವನ್ನು ಹಬ್ಬದಂತೆ ಸಿಂಗರಿಸಿದ್ದರು. ಐತಿಹಾಸಿಕ ಶ್ರೀ ಭೋಗನಂದೇಶ್ವರ ದೇವಾಲಯ ವನ್ನು ಕೂಡ ಪುಷ್ಪಾಲಂಕಾರ ಮತ್ತು ವಸ್ತ್ರಾಲಂಕಾರಗಳಿಂದ ಸಿಂಗರಿಸಲಾಗಿತ್ತು.

ಮುಖ್ಯಮಂತ್ರಿಯ ಭೇಟಿಯ ಹಿನ್ನೆಲೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ ಏರ್ಪಡಿಸಲಾಗಿತ್ತು. ದೇವಾಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಗೌರವ ವಂದನೆ  ಸಲ್ಲಿಸಿ ಸ್ವಾಗತ ಕೋರಲಾಯಿತು. ಭೋಗ ನಂದೀಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಮುಖ್ಯಮಂತ್ರಿಗಳು ದೇವರ ದರ್ಶನ ಪಡೆದು ಪುನೀತರಾದರು. 

ಇದನ್ನೂ ಓದಿ: Chikkanayakanahalli News: ನವೋದಯ ಪದವಿ ಕಾಲೇಜಿನಲ್ಲಿ ಸಮಾರೋಪ ಸಮಾರಂಭ: ವಿದ್ಯಾರ್ಥಿಗಳ ಬೆಳವಣಿಗೆಗೆ ಜ್ಞಾನ ಅಗತ್ಯ - ಶ್ರೀ ಬಿ.ಕೆ. ಚಂದ್ರಶೇಖರ್

ಮುಖ್ಯಮಂತ್ರಿಗಳು ಒಟ್ಟಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ, ವಸತಿ ಸಚಿವ ಜಮೀರ್ ಅಹಮದ್ ಖಾನ್, ಕೆ ಎನ್ ರಾಜಣ್ಣ, ಸಂಸದೀಯ ಕಾನೂನು ಸಚಿವ ಎಚ್ ಕೆ ಪಾಟೀಲ್, ಎಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್, ಶಾಸಕ ಪ್ರದೀಪ ಈಶ್ವರಯ್ಯ ಇದ್ದರು. 

ಮುಖ್ಯಮಂತ್ರಿಗಳು ನಂದಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗೆ ಶಾಸಕ ಪ್ರದೀಪ್ ಈಶ್ವರ್ ಮುಖ್ಯ ಮಂತ್ರಿಗಳನ್ನು ಗೌರವಿಸಿ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದರು. 

ಮುಖ್ಯಮಂತ್ರಿಗಳು ದೇವರ ದರ್ಶನ ಮಾಡುವವರಿಗೆ ನಂದಿ ಗ್ರಾಮದ ಎಲ್ಲಾ ಬೀದಿಗಳಿಗೆ ಅಕ್ಷರಶಃ ದಿಗ್ಬಂಧನ ಹೇರಲಾಗಿತ್ತು. 11:00 ದೇವರ ದರ್ಶನ ಪಡೆದ ಮುಖ್ಯಮಂತ್ರಿಗಳು ಅಲ್ಲಿಂದ ನೇರವಾಗಿ ನಂದಿ ಬೆಟ್ಟದ ಮೇಲೆ ಆಗಮಿಸಿದರು. 

ಈ ವೇಳೆ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಅತಿ ಆಧುನಿಕ ರೆಸ್ಟೋರೆಂಟ್ ಗೆ ಭೂಮಿ ಪೂಜೆ ನೆರವೇರಿಸಿದರು. 

ಈ ವೇಳೆ, ಮುಖ್ಯಮಂತ್ರಿಗಳ ಜೊತೆಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಇದ್ದದ್ದು ವಿಶೇಷ. 12:30 ಗಂಟೆಗೆ ಪ್ರಾರಂಭವಾದ 14ನೇ ಸಚಿವ ಸಂಪುಟ ಸಭೆ 3:00 ವರೆಗೆ ನಡೆಯಿತು. 

ಸಭೆಯ ನಂತರ ಮುಖ್ಯಮಂತ್ರಿಗಳು ಸಹೋದ್ಯೋಗಿಗಳ ಜೊತೆಗೆ ನಂದಿ ಬೆಟ್ಟದ ನೆಹರು ನಿಲಯದಲ್ಲಿ ಪುಷ್ಕಳ ಭೋಜನವನ್ನು ಸವಿದರು. ಭೋಜನದ ನಂತರ ಸುಮಾರು ನಾಲ್ಕುವರೆ ಗಂಟೆಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. 

ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಎಲ್ಲಿ ನೋಡಿದರೂ ಅಧಿಕಾರಿ ವರ್ಗ ಪೊಲೀಸ್ ವಾಹನ ಪತ್ರಕರ್ತರು ಶಾಸಕ ಸಚಿವರೆ ಬೆಟ್ಟದಲ್ಲಿ ಸುತ್ತಾಟ ನಡೆಸುತ್ತಿರುವುದು ಕಂಡುಬಂದಿತು. 

ನಂದಿ ಬೆಟ್ಟದ ಸಚಿವ ಸಂಪುಟ ಸಭೆ ಯಶಸ್ವಿಯಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್, ಗ್ರಾಮಾಂತರ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮುತುವರ್ಜಿ ವಹಿಸಿದ್ದರು. 

ಆದರೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾ ಧಿಕಾರಿ ಡಾ. ನವೀನ್ ಭಟ್, ಉಪ ವಿಭಾಗಾಧಿಕಾರಿ ಅಶ್ವಿನ್ ತಹಸಿಲ್ದಾರ್ ಅನಿಲ್ ಕುಮಾರ್, ಇಒ ಮಂಜುನಾಥ್ ಕಳೆದ ಒಂದು ತಿಂಗಳಿಂದ ಹಗಲಿರುಳೆನ್ನದೆ ಶ್ರಮಿಸಿದರು. 

ಪರಿಣಾಮ ಯಾವ ಲೋಪವೂ ಇಲ್ಲದೆ ಸಚಿವ ಸಂಪುಟ ಸಭೆ ಅತ್ಯಂತ ಸಂತೋಷ ಸಂಭ್ರಮದಿಂದ ಸುಸೂತ್ರವಾಗಿ ಮುಗಿಯಿತು.