ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಹೆಸರು ಇಡುವುದು ಕೈಬಿಡಬೇಕು ಇಲ್ಲವೆ ಪ್ರತಿಭಟನೆ ಎದುರಿಸಿ : ಅನಿಲ್ ಆವುಲಪ್ಪ ಎಚ್ಚರಿಕೆ

ಬಾಗೇಪಲ್ಲಿಯ ಕೆಂಬಾವುಟ ಹೋರಾಟದ ಚರಿತ್ರೆಯನ್ನು ಹಾಗೂ ಸಿಪಿಐಎಂ ಶಾಸಕರ ಅವಧಿಯ ಅಭಿವೃದ್ದಿ ಪರ್ವವನ್ನು ಮಸುಕು ಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಜಂಟಿಯಾಗಿ ಹೆಣೆದಿರುವ ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಸಚಿವರು ಬಿಜೆಪಿ ಮುಖಂಡರ ಹೆಸರಲ್ಲಿ ಅಣೆಕಟ್ಟಿಗೆ ನಾಮಕರಣ ಮಾಡುವುದಾಗಿ ಹೇಳುತ್ತಿದ್ದಾರೆ.

ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ವತಿಯಿಂದ ಚಿತ್ರಾವತಿ ಜಲಾಶಯಕ್ಕೆ ಕಾಂ.ಜಿ.ವಿ.ಶ್ರೀರಾಮರೆಡ್ಡಿ ಹೆಸರಿಡಲು ಆಗ್ರಹಿಸಿ   ಜಿಲ್ಲಾ ಪ್ರಜಾ ಸೌಧದ ಮುಂದೆ  ಪ್ರತಿಭಟನೆ ನಡೆಸಲಾಯಿತು

ಚಿಕ್ಕಬಳ್ಳಾಪುರ: ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಕಾಂ.ಜಿ.ವಿ.ಶ್ರೀರಾಮರೆಡ್ಡಿ ಹೆಸರಿಡು ವುದೇ ಸೂಕ್ತ. ಅದನ್ನು ಬಿಟ್ಟು ರಾಜಕೀಯ ತೆವಲಿಗಾಗಿ ಎಸ್.ಎಂ.ಕೃಷ್ಣ ಅವರ ಹೆಸರಿಡಲು ಮುಂದಾದರೆ ತೀವ್ರವಾದ ಜನಚಳವಳಿಯ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಸಿಪಿಎಂ ಮುಖಂಡ ಅನಿಲ್ ಆವುಲಪ್ಪ ಶಾಸಕ ಸುಬ್ಬಾರೆಡ್ಡಿಗೆ ನೇರವಾದ ಎಚ್ಚರಿಕೆ ನೀಡಿದರು.

ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದವರೆಗೆ ಬೈಕ್ರ‍್ಯಾಲಿ ನಡೆಸಿದ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಡಾ,ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಹೆಸರು ನಾಮಕರಣ ಮಾಡುವ ಪ್ರಸ್ತಾಪವು ಅಭಿವೃದ್ಧಿ ರಾಜಕಾರಣದ ಗಂಧ-ಗಾಳಿ ಗೊತ್ತಿಲ್ಲದ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ರಾಜಕೀಯ ಚೇಷ್ಠೆಯಾಗಿದ್ದು ,ಈ ಚೇಷ್ಠೆಗೆ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.  

ಇದನ್ನೂ ಓದಿ: Chikkaballapur News: ಮಂಗಳಮುಖಿಯರಿಂದ ಮುರುಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಆರ್ಧ ಕೆಜಿ ತೂಕದ ಬೆಳ್ಳಿ ದೀಪ ಕಾಣಿಕೆಯಾಗಿ ಸಲ್ಲಿಕೆ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐಎಂನ ಶಾಸಕರಾಗಿದ್ದ ಕಾಮ್ರೇಡ್ ಜಿ.ವಿ.ಶ್ರೀರಾಮ್ ರೆಡ್ಡಿರವರ ದೂರದೃಷ್ಟಿ ಹಾಗೂ ಅವಿರತ ಶ್ರಮದ ಫಲವಾಗಿ ಮತ್ತು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟದಿಂದ ಅಸ್ತಿತ್ವಕ್ಕೆ ಬಂದಿರುವ ಬಾಗೇಪಲ್ಲಿ ತಾಲೂಕಿನ ಜೀವನಾಡಿ ಚಿತ್ರಾವತಿ ಜಲಾಶಯ ಸಂಪೂರ್ಣ ನಮ್ಮದು. ಈ ನೆಲದ್ದು, ಬಾಗೇಪಲ್ಲಿ ತಾಲ್ಲೂಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ರೀತಿ ಯಲ್ಲೂ ಸಂಬಂಧ ಇಲ್ಲದ ಬಿಜೆಪಿ ಮುಖಂಡರ ಹೆಸರು ನಾಮಕರಣ ಮಾಡುವುದಾಗಿ ಹೇಳಿರುವ, ಕಾಂಗ್ರೆಸ್‌ನವರ ಹೇಳಿಕೆ ಕುಚೋದ್ಯದಿಂದ ಕೂಡಿದೆ ಎಂದು ಹರಿಹಾಯ್ದರು.

9s

ಬಾಗೇಪಲ್ಲಿಯ ಕೆಂಬಾವುಟ ಹೋರಾಟದ ಚರಿತ್ರೆಯನ್ನು ಹಾಗೂ ಸಿಪಿಐಎಂ ಶಾಸಕರ ಅವಧಿಯ ಅಭಿವೃದ್ದಿ ಪರ್ವವನ್ನು ಮಸುಕು ಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಜಂಟಿಯಾಗಿ ಹೆಣೆದಿರುವ ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಸಚಿವರು ಬಿಜೆಪಿ ಮುಖಂಡರ ಹೆಸರಲ್ಲಿ ಅಣೆಕಟ್ಟಿಗೆ ನಾಮ ಕರಣ ಮಾಡುವುದಾಗಿ ಹೇಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿಕೊಂಡಿದ್ದ  ಅನೈತಿಕ ಮೈತ್ರಿಯು, ಈ ನಾಮಕರಣ ಪ್ರಸ್ತಾಪದ ಮೂಲಕ ಮತ್ತೊಮ್ಮೆ ಬಹಿರಂಗ ಗೊಂಡಿದೆ ಎಂದು ಆರೋಪಿಸಿದರು.

ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಹೆಸರು ನಾಮಕರಣ ಮಾಡಲು ಬಾಗೇಪಲ್ಲಿ ಪುರಸಭೆ ಯಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದೆ ಎಂಬ ಪುರಸಭೆ ಮುಖ್ಯಾಧಿಕಾರಿ ಹೇಳಿಕೆ ಬಹಳ ವ್ಯವಸ್ಥಿತವಾಗಿ ಹೆಣೆದಿರುವ ಕುತಂತ್ರವನ್ನು ಬಯಲುಗೊಳಿಸಿದೆ. ಈ ಮೂಲಕ ಪಕ್ಷಾತೀತ ವಾಗಿ ಜನ ಮನ್ನಣೆ ಗಳಿಸಿದ್ದ ಕಾಂ.ಜಿ.ವಿ.ಶ್ರೀರಾಮರೆಡ್ಡಿರವರ ಅಪಾರ ಬೆಂಬಲಿಗರನ್ನು ಹಾಗೂ ಅಣೆಕಟ್ಟು ಹೋರಾಟ ಸಮಿತಿಯ ನೇತೃತ್ವದಲ್ಲಿ ಶ್ರಮಿಸಿದ್ದ ರೈತ ಹೋ ರಾಟಗಾರರನ್ನು ಅಪಮಾ ನಿಸಿದೆ. ಈ ಕೂಡಲೇ ಪುರಸಭೆ ತೀರ್ಮಾ ನವನ್ನು ರದ್ದುಪಡಿಸಬೇಕು. ಚಿತ್ರಾ ವತಿ ಜಲಾಶಯಕ್ಕೆ ನಾಮಕರಣ ಮಾಡುವುದಾದರೆ ಈ ಜಲಾಶಯ ನಿರ್ಮಾಣಕ್ಕಾಗಿ ಎಲ್ಲಾ ರೀತಿಯಿಂದಲೂ ಶ್ರಮಿಸಿದ್ದ ಕಾಂ.ಜಿ.ವಿ ಶ್ರೀರಾಮರೆಡ್ಡಿ ರವರ ಹೆಸರನ್ನೇ ನಾಮ ಕರಣ ಮಾಡಲು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದರು.  

ಬಾಗೇಪಲ್ಲಿಯ ಕೆಂಬಾವುಟ ಹೋರಾಟದ ಪರಂಪರೆಯನ್ನು ಹಾಗೂ ಸಿಪಿಐಎಂ ಶಾಸಕರ ಅವಧಿಯ ಅಭಿವೃದ್ಧಿ ಪರ್ವವನ್ನು ಹೀಗೆಳೆಯುವ ಹಾಗೂ ಮಸುಕು ಗೊಳಿಸುವ ಕುತಂತ್ರದ ರಾಜಕೀಯ ಚೇಷ್ಠೆ ಯನ್ನು ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ರಾಜ್ಯ ರೈತಸಂಘ ಪುಟ್ಟಣ್ಣಯ್ಯ ಬಣದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನಾ ರಾಯನರೆಡ್ಡಿ, ಕೆಪಿಆರ್ ಎಸ್ ನ ಜಿಲ್ಲಾ ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ ರಮಣ, ಶಿವಪ್ಪ, ಬೈರಾರೆಡ್ಡಿ, ದೇವರಾಜ್, ಕೃಷಪ್ಪ, ರಾಜಪ್ಪ, ದಲಿತ ಹಕ್ಕುಗಳ ಸಮಿತಿಯ ನಾಗರಾಜ್, ರಘು ರಾಮರೆಡ್ಡಿ, ಮುನಿಯಪ್ಪ, ರಮಣ,  ಈಶ್ವರ ರೆಡ್ಡಿ, ರಮಾಮಣಿ ಮತ್ತಿತರರು ಇದ್ದರು.