ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಅದ್ಧೂರಿಯಾಗಿ ನಡೆದ ನಿಮ್ಮಕಾಯಲಹಳ್ಳಿ ದರ್ಗಾ ಉರುಸ್ ಕಾರ್ಯಕ್ರಮ

ಸುಪ್ರಸಿದ್ಧ ಭಕ್ತಿಯ ತಾಣ ಹಾಗೂ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಂಗಮ ವಾಗಿರುವ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ವಾರ್ಷಿಕ ಮಹಾ ಗಂಧೋತ್ಸವ ಕಾರ್ಯಕ್ರಮ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಚಿಂತಾಮಣಿ: ಸುಪ್ರಸಿದ್ಧ ಭಕ್ತಿಯ ತಾಣ ಹಾಗೂ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಂಗಮ ವಾಗಿರುವ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ವಾರ್ಷಿಕ ಮಹಾ ಗಂಧೋತ್ಸವ ಕಾರ್ಯಕ್ರಮ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ದರ್ಗಾಸಮಿತಿ,ಮುಜಾವರಗಳು,ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ನಂದಿಗಾನಹಳ್ಳಿ ಸಮೀಪವಿರುವ ಮೌಲಾ ಬಾಗ್ ದರ್ಗಾದಿಂದ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಕ್ತಾದಿಗಳು ಸೇರಿ ಗಂಧದ ಮೆರವಣಿಗೆ ಅದ್ಧೂರಿಯಾಗಿ ಮಾಡಿದರು.

ಇದನ್ನೂ ಓದಿ: Chikkanayakanahalli News: ದೇಗುಲ ಜೀರ್ಣೋದ್ಧಾರಕ್ಕೆ ಅಕ್ರಮ ಮದ್ಯ ಮಾರಾಟದ ಹಕ್ಕು ಹರಾಜು; ಸಮಿತಿ ವಿರುದ್ಧ ಭಕ್ತರ ಆಕ್ರೋಶ

ಬೃಹತ್‌ ಮೆರವಣಿಗೆ ತಡರಾತ್ರಿ ದರ್ಗಾ ಸೇರಿತು.ಬಳಿಕ ದರ್ಗಾದಲ್ಲಿ ಗಂಧ ಮತ್ತು ಉರುಸ್‌ ಆಚರಣೆ ನಡೆಯಿತು. ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉರುಸ್ ಪ್ರಯುಕ್ತ ದರ್ಗಾವನ್ನು ವಿದ್ಯುತ್ ದೀಪಗಳಿಂದ ಹಾಗೂ ವಿಧವಿಧವಾದ ಹೂಗಳಿಂದ ಅಲಂಕರಿಸಿದ್ದು ನೋಡುಗರ ಗಮನ ಸೆಳೆಯುತ್ತಿತ್ತು.

ಈ ವೇಳೆ ದರ್ಗಾ ಮುಜಾವರ್ ಎಸ್ ಮೌಲಾ ಅಲಿ.ಪ್ಯಾರೇ ಜಾನ,ಮಹಬೂಬ್ ಸಬ್,ಶಫಿವುಲ್ಲಾ,

ರಫೀಕ್, ಜಿಯಾ ಉಲ್ಲಾ, ತಾಜ್ ಪೀರ್,ಜಬೀ,ಮುಬಾರಕ್, ಇಲಿಯಾಸ್, ರಹಮತ್, ದರ್ಗಾ ಅಧ್ಯಕ್ಷರಾದ ಅಮಿರ್ ಜಾನ್ ಸೇರಿದಂತೆ ದರ್ಗಾ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಪ್ರಮುಖ ಮುಖಂಡರುಗಳು ಸ್ಥಳೀಯರು ಹಿಂದೂ ಮುಸ್ಲಿಂ ಬಾಂಧವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಉರುಸ್ ಪ್ರಯುಕ್ತ ಪೋಲಿಸ್ ನ ಸೂಕ್ತ ಬಂದೋಬಸ್ತ್ ಸಹ ಮಾಡಲಾಗಿತ್ತು