ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬೆಳೆ ವಿಮೆ ನೋಂದಣಿ ಮಾಡಿಸಲು ಮನವಿ

ಚೇಳೂರು ತಾಲ್ಲೂಕು ಕೇಂದ್ರವಾಗಿದ್ದು, ಈ ನಗರವನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆ ಗೇರಿಸಲು, ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ನೀಡಲು, ಸರ್ಕಾರಿ ಜಮೀನುಗಳನ್ನು ಒತ್ತುವರಿ ತೆರವುಗೊಳಿಸಲು, ಬಗುರ್ ಹುಕ್ಕುಂ ಅರ್ಜಿಗಳನ್ನು ವಿಲೇವಾರಿ ಮಾಡಲು, ಬಡ ರೈತ ಕುಟುಂಬ ಗಳಿಗೆ ನಿವೇಶನಗಳನ್ನು ನೀಡಲು ರೈತ ಮುಖಂಡರು ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು.

ಚಿಕ್ಕಬಳ್ಳಾಪುರ: 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮಾ ಅಧಿಸೂಚನೆ ಆದೇಶ ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಮಾವು, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳನ್ನು ವಿಮೆ ಅಡಿ ಅಧಿಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲುಕುಗಳು ಈ ಯೋಜನೆಯಡಿ ಬರುತ್ತವೆ, ಅಧಿಸೂಚಿಸಿದ ಬೆಳೆಗಳಿಗೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಇಚ್ಚೆಯನುಸಾರ ವಿಮಾ ಪಾವತಿಸಬಹುದಾಗಿರುತ್ತದೆ.

ದ್ರಾಕ್ಷಿ ಬೆಳೆಗೆ ವಿಮಾ ಮೊತ್ತವಾಗಿ 2,80,000 ರೂ.ಗಳನ್ನು ನಿಗಧಿಪಡಿಸಲಾಗಿದೆ,ವಿಮೆ ಮಾಡಿಸುವ ರೈತರು ಪ್ರತಿ ಹೆಕ್ಟೆರ್ ಗೆ ಪಾವತಿಸಬೇಕಾದ ಮೊತ್ತ 14,000 ರೂ.ಗಳನ್ನು ಪಾವತಿಸಬೇಕಾಗಿದೆ.

ಮಾವು ಬೆಳೆಗೆ ವಿಮಾ ಮೊತ್ತವಾಗಿ 80,000 ರೂ. ಗಳನ್ನು ನಿಗಧಿಪಡಿಸಲಾಗಿದೆ, ಪ್ರತಿ ಹೆಕ್ಟೆರ್ ಗೆ ರೈತರು ಪಾವತಿಸಬೇಕಾದ ಮೊತ್ತ 4,000 ರೂ ಗಳನ್ನು ಪಾವತಿಸಬೇಕಾಗಿದೆ.

ಇದನ್ನೂ ಓದಿ: Chikkanayakanahalli News: ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕ ಸುರೇಶ್‌ ಬಾಬುರಿಂದ ಚರ್ಚೆ ​

ದಾಳಿಂಬೆ ಬೆಳಗೆ ವಿಮಾ ಮೊತ್ತವಾಗಿ 1,27,000 ರೂ. ಗಳನ್ನು ನಿಗಧಿಪಡಿಸಲಾಗಿದೆ. ಪ್ರತಿ ಹೆಕ್ಟೆರ್ ಗೆ ರೈತರು ಪಾವತಿಸಬೇಕಾದ ಮೊತ್ತ 6,350 ಗಳನ್ನು ಪಾವತಿಸಬೇಕಾಗಿದೆ. ರೈತರ ವಂತಿಕೆಯನ್ನು ಸಂಬಂಧಪಟ್ಟ ಬ್ಯಾಂಕ್, ಸೇವಾ ಸಿಂಧು ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಪ್ರೀಮಿಯಂ ಪಾವತಿಸಿ ಸ್ವೀಕೃತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕ ಮಾಡಿ ರೈತರು ಹೆಚ್ಚಿನ ಮಟ್ಟದಲ್ಲಿ ಬೆಳೆ ವಿಮೆಗೆ ಜಿಲ್ಲೆಯಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಚೇಳೂರು ತಾಲ್ಲೂಕು ಕೇಂದ್ರವಾಗಿದ್ದು, ಈ ನಗರವನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆ ಗೇರಿಸಲು, ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ನೀಡಲು, ಸರ್ಕಾರಿ ಜಮೀನುಗಳನ್ನು ಒತ್ತುವರಿ ತೆರವುಗೊಳಿಸಲು, ಬಗುರ್ ಹುಕ್ಕುಂ ಅರ್ಜಿಗಳನ್ನು ವಿಲೇವಾರಿ ಮಾಡಲು, ಬಡ ರೈತ ಕುಟುಂಬ ಗಳಿಗೆ ನಿವೇಶನಗಳನ್ನು ನೀಡಲು ರೈತ ಮುಖಂಡರು ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು. ಹಾಗೂ ಚೇಳೂರು ಪಟ್ಟಣಕ್ಕೆ ಹೊಂದಿ ಕೊಂಡಿರುವ ಸರ್ವೆ ನಂ. 53ರಲ್ಲಿನ 55.33 ಎಕರೆ ಸರ್ಕಾರಿ ಜಮೀನಿನಲ್ಲಿ ನ್ಯಾಯಾಲಯ, ಆಸ್ಪತ್ರೆ, ಕಂದಾಯ ಭವನ ಹಾಗೂ ಶಾಲಾ-ಕಾಲೇಜುಗಳ ಸರ್ಕಾರಿ ಕಟ್ಟಡಳನ್ನು ನಿರ್ಮಿಸಲು ಒತ್ತಾಯಿಸಿ ರೈತ ಮುಖಂಡರಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ)ಯ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿ ಬಿ. ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಕೆ.ಬೈರರೆಡ್ಡಿ, ತಾಲ್ಲೂಕು ಅಧ್ಯಕ್ಷರಾದ ಮುನಿವೆಂಕಟ ರೆಡ್ಡಿ, ನಾರಾಯಣಸ್ವಾಮಿ, ಮುನಿರಾಜು, ಕೆ.ಎಸ್. ಸೋಮಶೇಖರ್ ಸೇರಿದಂತೆ ರೈತ ಮುಖಂಡರಾದ ನಂಜುಂಡಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.