ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕ ಸುರೇಶ್‌ ಬಾಬುರಿಂದ ಚರ್ಚೆ ​

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ಒದಗಿಸು ವುದು ಹಾಗೂ ಜಾಗತಿಕ ಪರಿಸರದಲ್ಲಿ ನಮ್ಮ ಪಾತ್ರದ ಬಗ್ಗೆ ಜೆ.ಡಿ.ಎಲ್.ಪಿ. ನಾಯಕ ಮತ್ತು ಶಾಸಕರಾದ ಸಿ.ಬಿ. ಸುರೇಶ್‌ಬಾಬು ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕರಿಂದ ಚರ್ಚೆ ​

Ashok Nayak Ashok Nayak Aug 5, 2025 12:03 AM

ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ಒದಗಿಸು ವುದು ಹಾಗೂ ಜಾಗತಿಕ ಪರಿಸರದಲ್ಲಿ ನಮ್ಮ ಪಾತ್ರದ ಬಗ್ಗೆ ಜೆ.ಡಿ.ಎಲ್.ಪಿ. ನಾಯಕ ಮತ್ತು ಶಾಸಕರಾದ ಸಿ.ಬಿ. ಸುರೇಶ್‌ಬಾಬು ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

​ರಾಜ್ಯದಿಂದ ಉನ್ನತ ಮಟ್ಟದ ನಿಯೋಗವೊಂದು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸ್ಟ್ಯಾನ್‌ಫೋರ್ಡ್ ವಿವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಚರ್ಚೆ ನಡೆಯಿತು. ಈ ಕುರಿತು ಮಾತನಾಡಿದ ಶಾಸಕ ಸುರೇಶ್‌ಬಾಬು, "ನಮ್ಮ ಶೈಕ್ಷಣಿಕ ವ್ಯವಸ್ಥೆಯಡಿಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಲು ಈಗಾಗಲೇ ನಮ್ಮ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ ರಾಜ್ಯದಲ್ಲಿ ಇನ್ನಷ್ಟು ತಾಂತ್ರಿಕ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು" ಎಂದು ತಿಳಿಸಿದರು.

ಇದನ್ನೂ ಓದಿ: Chikkanayakanahalli News: ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

​ಅಲ್ಲದೆ, ಜಾಗತಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಪ್ರೊಫೆಸರ್‌ಗಳೊಂದಿಗೆ ಮಾತನಾಡಲಾಗಿದೆ. ಎಸ್.ಬಿ. ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಮತ್ತು ಜೆಇಇ ತರಬೇತಿಗಳನ್ನು ನೀಡಲಾಗು ತ್ತಿದೆ. ಪರಿಸರ ವೈಪರೀತ್ಯಗಳಿಗೆ ಮಾನವನೇ ಕಾರಣನಾಗಿದ್ದು, ಯುವ ಸಮುದಾಯಕ್ಕೆ ಪರಿಸರ ಸಂರಕ್ಷಣೆ ಮತ್ತು ಜಾಗತಿಕ ಪರಿಸರದಲ್ಲಿ ನಮ್ಮ ಪಾತ್ರದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

​ಜೀವ ವೈವಿಧ್ಯತೆಯ ಅಡಿಯಲ್ಲಿ ಬಯೋ ಗ್ಯಾಸ್ ಕುರಿತು ನೇಪಿಯರ್ ಹುಲ್ಲಿನಿಂದ ಗ್ಯಾಸ್ ತಯಾ ರಿಸುವ ಬಗ್ಗೆ ತಂತ್ರಜ್ಞರಿಂದ ಅಧ್ಯಯನ ನಡೆಯುತ್ತಿದೆ. ನಮ್ಮ ಸಂಪನ್ಮೂಲಗಳ ಸದ್ಬಳಕೆ ಮತ್ತು ಉಳಿತಾಯದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.

​ಈ ನಿಯೋಗದ ನೇತೃತ್ವವನ್ನು ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ವಹಿಸಿದ್ದರು.

ಶಾಸಕರಾದ ಬಿ.ಆರ್. ಪಾಟೀಲ್, ಭೀಮಣ್ಣನಾಯಕ್, ಪಿ.ಎಂ. ಅಶೋಕ್, ಗುರುರಾಜ್ ಗಂಟಿಹೊಳಿ, ಅಶೋಕ್ ರೈ, ಸುರೇಶ್ ಶೆಟ್ಟಿ, ಶ್ರೀನಿವಾಸ್ ಮಾನೆ ಮತ್ತು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸೇರಿದಂತೆ ಹಲವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.