ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಆರ್.ಎಸ್.ಎಸ್. ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಎಂ.ಎಲ್.ಸಿ. ವೈ.ಎ.ನಾರಾಯಣ( ವೈಎ.ಎನ್) ಸ್ವಾಮಿ ಕಿಡಿ

ಇದು ದೇಶದ ಕೋಟ್ಯಂತರ ಜನರ ಸೇವೆಗೆ ಮುಡಿಪಾಗಿರುವ ಮತ್ತು ಮೌಲ್ಯ ಆಧಾರಿತ ಜೀವನ ನಡೆಸಲು ಪ್ರೇರಣೆ ನೀಡುವ ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿದೆ. ವಿಪತ್ತು ನಿರ್ವಹಣೆ, ರಕ್ತದಾನ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸಾಮರಸ್ಯ ಕ್ಕಾಗಿ ಆರ್.ಎಸ್.ಎಸ್. ನೀಡುತ್ತಿರುವ ಕೊಡುಗೆಗಳು ನಿರ್ವಿವಾದ ಹಾಗೂ ಶ್ಲಾಘನೀಯವಾಗಿವೆ.

ಬಾಗೇಪಲ್ಲಿ: ಆರ್.ಎಸ್.ಎಸ್. ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಂ.ಎಲ್.ಸಿ. ವೈ. ನಾರಾಯಣ ಸ್ವಾಮಿ (ವೈಎಎನ್) ಕಿಡಿ ಕಾರಿದ್ದಾರೆ.

ಬಾಗೇಪಲ್ಲಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ತದಾರರು ಹೆಚ್ಚು ನೊಂದಣಿ ಮಾಡಿಸಬೇಕು ಎಂದು ಮನವಿ ಮಾಡಿದರು.

ತದನಂತರ  ಮಾಧ್ಯಮದೊಂದಿಗೆ ಮಾತನಾಡಿ, ಆರ್.ಎಸ್.ಎಸ್. ಬ್ಯಾನ್ ಮಾಡಬೇಕು ಎನ್ನುತ್ತಿ ದ್ದಾರೆ. ಅದು ಹೇಗೆ ಬ್ಯಾನ್ ಮಾಡಲು ಸಾಧ್ಯ. ಹಿಂದೆಯೂ ಬ್ಯಾನ್ ಮಾಡಲು ಆಗಲಿಲ್ಲ, ಮುಂದೆ ಸಹ ಮಾಡಲು ಅಸಾಧ್ಯ ಎಂದರು.

ಇದನ್ನೂ ಓದಿ: Bagepally News: ಪ್ರತಿ 6 ತಿಂಗಳಿಗೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕೆ.ಟಿ.ವೀರಾಂಜನೇಯ

ಆರ್.ಎಸ್.ಎಸ್. ಯಾವುದೇ ದ್ವೇಷ ಬಿತ್ತುವ ಸಂಘಟನೆಯಲ್ಲ. ಬದಲಿಗೆ, ಇದು ದೇಶದ ಕೋಟ್ಯಂ ತರ ಜನರ ಸೇವೆಗೆ ಮುಡಿಪಾಗಿರುವ ಮತ್ತು ಮೌಲ್ಯ ಆಧಾರಿತ ಜೀವನ ನಡೆಸಲು ಪ್ರೇರಣೆ ನೀಡುವ ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿದೆ. ವಿಪತ್ತು ನಿರ್ವಹಣೆ, ರಕ್ತದಾನ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಆರ್.ಎಸ್.ಎಸ್. ನೀಡುತ್ತಿರುವ ಕೊಡುಗೆಗಳು ನಿರ್ವಿವಾದ ಹಾಗೂ ಶ್ಲಾಘನೀಯವಾಗಿವೆ.

ಆರ್.ಎಸ್.ಎಸ್. ಎಂಬುದು ದೇಶದ ಸಂಸ್ಕೃತಿ. ಸುನಾಮಿ, ಪ್ರವಾಹ, ಅಗ್ನಿ ಅವಘಡ ಸಂಭವಿಸಿ ದಲ್ಲಿ ಜನರ ಜೀವನ ಕಾಪಾಡುವ ಆರ್.ಎಸ್.ಎಸ್. ಇವರಿಂದ ಹೇಗೆ ನಿಷೇಧಿಸಲು ಸಾಧ್ಯ. ಯಾವು ದೋ ಒಂದು ಧರ್ಮದ ಓಟಿನ ಓಲೈಕೆಗಾಗಿ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಆರ್.ಎಸ್.ಎಸ್. ದೇಶಭಕ್ತರನ್ನು ನಿರ್ಮಾಣ ಮಾಡುವ ಕೆಲಸವನ್ನು ಶಾಶ್ವತವಾಗಿ ಮಾಡುತ್ತ ಬಂದಿದೆ. ಇಂತಹ ಆರ್.ಎಸ್.ಎಸ್. ಬಗ್ಗೆ ವಿರೋಧಿಸುವ ರಾಜ್ಯ ಸರ್ಕಾರ, ದೇಶ ವಿರೋಧಿ ಚಟುವಟಿಕೆ ನಡೆಸುವ ವ್ಯಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮೊದಲು ಮಾಡಲಿ ಎಂದರು.

ಆಡಳಿತ ಪಕ್ಷ ಆರ್.ಎಸ್.ಎಸ್. ನಿಷೇಧ ಮಾಡುತ್ತೇವೆ ಎಂದು ಹೇಳಿರುವುದು ಮೂರ್ಖತನದ ಪರಮಾವಧಿ ಎಂದರು. ಈ ಸಂದರ್ಭದಲ್ಲಿ  ಬಯ್ಯಾರೆಡ್ಡಿ ಹಾಗೂ ಶಿಕ್ಷಕರು ಹಾಜರಿದ್ದರು.