ಬಾಗೇಪಲ್ಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ವಿಜಯ ದಶಮಿ ಪಥಸಂಚಲನವು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಗೂಳೂರು ವೃತ್ತ ದಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಮಂದಿ ಗಣವೇಷಧಾರಿ ಗಳು ಕೊತ್ತಪಲ್ಲಿ ರಸ್ತೆ, ವೆಂಕಟೇಶ್ವರ ಟಾಕಿಸ್ ಹಿಂಭಾಗದ ರಸ್ತೆ, ನೇತಾಜಿ ವೃತ್ತ, ಭಜನೆ ಮಂದಿರ ರಸ್ತೆ, ಕೋರ್ಟ್ ಹಿಂಭಾಗದ ರಸ್ತೆ ಹಾಗೂ ಬಸ್ ನಿಲ್ದಾಣ ದಿಂದ ಗುರು ರಾಘವೇಂದ್ರ ದೇವಾಲಯದ ವರಗೆ ಪಥ ಸಂಚಲನ ನಡೆಸಿದರು.
ತೆರೆದ ವಾಹನದಲ್ಲಿ ಭಾರತಾಂಬೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೆವಾರ್, ಗುರೂಜಿ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಭಾವಚಿತ್ರವಿಟ್ಟು ನಡೆದ ಮೆರವಣಿಗೆಯಲ್ಲಿ ಚಿಣ್ಣರು ಸೇರಿ ನೂರಾರು ಮಂದಿ ಶಿಸ್ತಿನ ಹೆಜ್ಜೆ ಹಾಕಿದರು.
ಇದನ್ನೂ ಓದಿ: Bagepally News: ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ; ಎಸ್‌ಎಫ್‌ಐ ಶೈಕ್ಷಣಿಕ ಜಾಥಾ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಮಾರ್ಗದುದ್ದಕ್ಕೂ ರಂಗೋಲಿ, ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಈ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಸೇರಿ ಬಿಜೆಪಿ ಮುಖಂಡರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಉತ್ಸಾಹದಿಂದ ಪಥ ಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದರು.
ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂಬ ಪ್ರಾರ್ಥನೆಯಿಂದ ಆರಂಭಗೊಂಡ ಪಥಸಂಚಲನ ವು ವಿವಿಧ ರಸ್ತೆಗಳಲ್ಲಿ ಸಂಚರಿಸಿ,ಗುರು ರಾಘವೇಂದ್ರ ದೇಗುಲದ ಆವರಣದಲ್ಲಿ ಮುಕ್ತಾಯ ಗೊಂಡಿತು. ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳಿಂದ ಈ ಪಥಸಂಚಲನಕ್ಕೆ ಕಾರ್ಯಕರ್ತರು ಆಗಮಿಸಿ ಭಾಗಿಯಾಗಿದ್ದರು.