ಇಂಡಿ: ಸಿದ್ದಸಿರಿ ಸೌಹಾರ್ದ ಸರಕಾರಿ ಇಂದು ಹೆಮ್ಮರವಾಗಿ ಹಾಗೂ ಪಾರದರ್ಶಕವಾಗಿರಲು ಮಾಜಿ ಸಚಿವ ಹಾಲಿ ನಗರ ಶಾಸಕ ಬಸವನಗೌಡ ಪಾಟೀಲರ ಕೃಪಾರ್ಶೀವಾದ ಇಂದು ೧೪೦ ಕೋಟಿ ೨೭ ಲಕ್ಷ ರೂ.ಠೇವಣಿ ಮಾಡಿದ್ದು ಒಟ್ಟು ಸುಮಾರು ೪೩೧೬ ಕೋಟಿ ಠೇವಣಿ ಮಾಡಿ ಇತಿಹಾಸ ಸೃಷ್ಠಿ ಮಾಡಿದೆ ಎಂದು ರವಿಕಾಂತ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ದಸಿರಿ ಶಾಖೆಯ ೧೯ ನೇ ವಾರ್ಷಿಕೋತ್ಸವದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಧನೇನ ದೀನಂ ಸಬಲೀ ಕುರಯತ್ವಂ ಎಂಬ ಧೈಯೋದ್ದೇಶದೊಂದಿಗೆ ಮಾಜಿ ಸಚಿವರು ಹಾಲಿ ವಿಜಯಪೂರ ನಗರ ಶಾಸಕರಾದ ಬಸವನಗೌಡ ಪಾಟೀಲರ ನೈತೃತ್ವದಲ್ಲಿ ದಕ್ಷ ಆಡಳಿತ ಮಂಡಳಿ ಹೊಂದಿದ ಶಾಖೆ ೨೦೦೬ರಲ್ಲಿ ಪ್ರಾರಂಭಗೊAಡು ಸಿದ್ದಸಿರಿ ಸೌಹಾರ್ದ ಸಹಕಾರಿಯು ರಾಜ್ಯಾದ್ಯೆಂತ ೧೬೭ ಶಾಖೆಗಳನ್ನು ಹೊಂದಿದ್ದು ತನ್ನ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆ ಪಾತ್ರವಾಗಿದೆ.
ಇದನ್ನೂ ಓದಿ: Indi (Vijayapura) News: 19 ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ: ಶಾಸಕ ಯಶವಂತರಾಯಗೌಡ ಪಾಟೀಲ
೧೯ ವರ್ಷಗಳಲ್ಲಿ ೪೩೧೫ ಕೋಟಿಗಳ ಠೇವಣಿ ಸಂಗ್ರಹಿಸಿದ್ದು ೬೯ ಕೋಟಿ ಷೇರು ಬಂಡವಾಳ ಹೊಂದಿ ಶೇರುದಾರರಿಗೆ ಸನ್ ೨೦೨೨-೨೩ರಲ್ಲಿ ಶೇ,೨೫ ಡಿವಿಡೇಂಟ್ ೨೦೨೩-೨೪ರಲ್ಲಿ ಶೇ, ೧೮ ಡಿವಿಡೇಂಟ್ ನೀಡಿದೆ ರಾಜ್ಯದ ಏಕೈಕ ಸೌಹಾರ್ದವಾಗಿ ಸರಕಾರಿ ವಲಯದಲ್ಲಿ ಇತಿಹಾಸಸೃಷ್ಠಿಸಿದೆ. ರಾಜ್ಯದ ೧೧೯೪ಸಿದ್ದಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು ೫೮೦ ಸಿದ್ದಸಿರಿ ಏಥನಾಲ್ ಪವರ ಘಟಕ, -ಚಿಂಚೊಳಿ ಸಿಬ್ಬಂದಿಗಳು ಹಾಗೂ ೫೬೪ ಪಿಗ್ಮಿಸಂಗ್ರಹಕಾರಿಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಎಷ್ಟೋ ಕುಟುಂಬಗಳಿಗೆ ಆಶ್ರಯ ನೀಡಿದ ಸೌರ್ಹಾದತಾ ಸಹಕಾರಿಯಾಗಿದೆ. ಸಿದ್ದಸಿರಿ ಸೌಹಾರ್ದ ಇಂದು ಹೆಮ್ಮರವಾಗಿ ಬೆಳೆಯಬೇಕಾದರೆ ಮಾಜಿ ಸಚಿವರು ನಗರ ಶಾಸಕರಾದ ಬಸವನಗೌಡ ಪಾಟೀಲರ ಶ್ರಮ ಹಾಗೂ ಪಾರದರ್ಶಕ ಆಡಳಿತ ಮುಖ್ಯ ಕಾರಣ ಇಂತಹ ನಿಷ ಕಲ್ಮಶ ನಾಯಕರನ್ನು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಶಿವಾನಂದ ಚಾಳಿಕಾರ ಪ್ರಾಸ್ತಾ ವಿಕ ಮಾತನಾಡಿದರು.
ಶಾಖಾ ವ್ಯವಸ್ಥಾಪಕರು, ಇಂಡಿ ಸಿದ್ದ ಸಿರಿ ಸೌಹಾರ್ದ ಸಹಕಾರಿ ಸಮಸ್ತ ಸಿಬ್ಬಂದಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.