Indi (Vijayapura) News: 19 ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ: ಶಾಸಕ ಯಶವಂತರಾಯಗೌಡ ಪಾಟೀಲ
ರಾಜಕೀಯ ಇಚ್ಛಾಶಕ್ತಿ ಇರಬೇಕು. ಜಿಟಿಟಿಸಿ ಕಾಲೇಜು ಜಿಲ್ಲೆಗೆ ಕೊಡಬೇಕು. ಆದರೆ ನಾನು ಮುಖ್ಯ ಮಂತ್ರಿಗಳ ಮನವಿ ಮಾಡಿ ಜಿಟಿಟಿಸಿ ಕಾಲೇಜು ತಂದಿರುವೆ, ವಿದ್ಯಾರ್ಥಿಗಳಿಗೆ ದೇಶ ವಿದೇಶದಲ್ಲಿ ಉದ್ಯೋಗ ಸಿಗುತ್ತದೆ. ನೈತಿಕ ರಾಜಕಾರಣ ಮಾಡಬೇಕು, ಅನಧಿಕೃತ ಚಟುವಟಿಕೆಗಳು

ಕಪನಿಂಬರಗಿ ಕೆರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಬಾಗಿನ ಅರ್ಪಿಸಿದರು.

ಇಂಡಿ: ಇಂದು ರೈತರು ನಗುಮುಖದಲ್ಲಿದ್ದಾರೆ, ಇದಕ್ಕಿಂತ ತೃಪ್ತಿ ಮತ್ತೊಂದಿಲ್ಲ. ನೀರು ಅತ್ಯಂತ ಅಮೂಲ್ಯ ವಸ್ತು ತಾಲೂಕಿನಾದ್ಯಂತ ಸುಮಾರು ೧೯ ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಬಬಲಾದ, ಹಣಗುಣಕಿ, ಹಡಲಸಂಗ ೦೧-೦೨,ಕಪನಿಂಬರಗಿ, ಸೋನಕನಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಎಲ್ಲಾ ವರ್ಗಗಗಳಲ್ಲಿ ಅತ್ಯಂತ ಕಷ್ಟದ ಜೀವನ ಸಾಗಿಸುವ ವರ್ಗ ಎಂದರೆ ರೈತಾಪಿ ವರ್ಗ ಇವರ ಅಭಿವೃದ್ದಿ ಪ್ರಮುಖ ಕರ್ತವ್ಯ. ನೀರಾವರಿ ಯಿಂದ ವಂಚಿತವಾದ ಈ ಭಾಗದಲ್ಲಿ 40 ವರ್ಷದ ರಾಜಕೀಯ ಅನುಭವ ಧಾರೆ ಎರೆದಿರುವೆ, ತಿಡಗುಂದಿ ಮುಂದುವರೆದ ಭಾಗ. ಮುಳವಾಡ ಲಿಪ್ಟ ಆಗಿ ೩೭ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಶ್ರೀರೇವಣಸಿದ್ದೇಶ್ವರಏತನೀರಾವರಿ ಯೋಜನೆ ೩೧೦೦ ಕೋಟಿ ಯೋಜನೆ ಒಟ್ಟು ೩ ಸಾವಿರದಾ ಎಂಟು ನೂರು ಕೋಟಿ ರೂ ಯೋಜನೆ , ಒಂದು ವಿಧಾನಸಭಾ ಕ್ಷೇತ್ರಕ್ಕೆ ನೀರಾವರಿಯ ೫ ಯೋಜನೆ ಗಳು ಎಲ್ಲಿಯಾದರೂ ಬಂದಿದೆಯೇ ಬುದ್ದಿವಂತರಾದ ನೀವು ವಿಚಾರ ಮಾಡಿ ಸ್ವತಂತ್ರ ನಂತರ ಈ ಭಗದಲ್ಲಿ ದೊಡ್ಡ ಸಹಾಯ ಮಾಡಿದ ಮುಖ್ಯ ಮಂತ್ರಿ ,ಉಪಮುಖ್ಯ ಮಂತ್ರಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Indi (vijayapura) News: ಸಂಶೋಧನೆಯು ಅಲ್ಪ ವಿರಾಮ, ಮಧ್ಯವಿರಾಮದಿಂದ ಪೂರ್ಣವಿರಾಮದೆಡೆಗೆ ಹೋಗುತ್ತದೆ: ಯಶವಂತರಾಯಗೌಡ
ರಾಜಕೀಯ ಇಚ್ಛಾಶಕ್ತಿ ಇರಬೇಕು. ಜಿಟಿಟಿಸಿ ಕಾಲೇಜು ಜಿಲ್ಲೆಗೆ ಕೊಡಬೇಕು. ಆದರೆ ನಾನು ಮುಖ್ಯ ಮಂತ್ರಿಗಳ ಮನವಿ ಮಾಡಿ ಜಿಟಿಟಿಸಿ ಕಾಲೇಜು ತಂದಿರುವೆ, ವಿದ್ಯಾರ್ಥಿಗಳಿಗೆ ದೇಶ ವಿದೇಶದಲ್ಲಿ ಉದ್ಯೋಗ ಸಿಗುತ್ತದೆ. ನೈತಿಕ ರಾಜಕಾರಣ ಮಾಡಬೇಕು, ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದುದನ್ನು ನಾನು ಬಂದ ನಂತರ ಮರಳು ಮಾಫಿಯಾ ತಡೆಗಟ್ಟಿದ್ದೇನೆ.
ಕಳೆದ ೨೦೧೩ ರಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು ಅನೇಕ ತಾಯಂದಿಯರು, ಚಿಕ್ಕ ಕಂದಮ್ಮಗಳು ಕುಡಿಯುವ ನೀರಿಗಾಗಿ ಅಲೇದಾಡುವ ಸ್ಥಿತಿ ಕಣ್ಣಾರೆ ಕಂಡಿದ್ದೇವೆ, ನೋಡಿದ್ದೇವೆ. ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಹಾಗೂ ವಸ್ತಿಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಪರಸ್ಥಿತಿ ಇತ್ತು ಮತಕ್ಷೇತ್ರದ ಜನರು ನನಗೆ ಅಶೀರ್ವಾದ ಮಾಡಿರುವುದರಿಂದ್ದ ಈ ಭಾಗದಲ್ಲಿ ಕರೆ ತುಂಬುವ ಯೋಜನೆ, ಕಾಲುವೆಗಳಿಗೆ ನೀರು ಹರಿಸಿ ಬೇಸಿಗೆ ಇದ್ದರೂ ಸಹಿತ ನೀರಿನ ಸಮಸ್ಯೆ ಯಾಗದಂತೆ ಕ್ರಮ ವಹಿಸಿದ್ದೇನೆ. ೧೯ ಕೆರೆಗಳು ತುಂಬಿರುವದರಿಂದ ಕೆರೆಯ ಆಶ್ರಿತ ಪ್ರದೇಶಗಳು ರೈತರ ಬೋರವೆಲ್‌ಗಳು, ಭಾವಿಗಳ ಅಂತರ್ ಜಲಮಟ್ಟ ಹೆಚ್ಚಾಗಿವೆ ಎಂದು ರೈತರು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
೨೦೧೩ಕ್ಕಿಂತ ಹಿಂದೆ ಬೇಸಿಗೆಯಲ್ಲಿ ಕಾಲುವೆಗಳಿಗೆ ನೀರು ಹರಿಸಿದ ಉದಾಹರಣೆಗಳಿದ್ದರೆ ನೀವೇ ಹೇಳಿ. ಸಾರ್ವಜನಿಕ ಬದುಕಿನಲ್ಲಿ ಅಧಿಕಾರ ಶಾಶ್ವತ ಇರುವುದಿಲ್ಲ ನಾವು ಮಾಡಿರುವ ಕೆಲಸಗಳು ಜೀವಂತವಾಗಿರುತ್ತವೆ ಎಂದು ಪಾಟೀಲ ಮಾತನಾಡಿದರು.
ಮಹೇಶಿ ಬದ್ರಿನಾಥ, ಸಿದ್ದರಾಯಗೌಡ ಹಳಗುಣಕಿ, ಮಲ್ಲಣ್ಣಗೌಡ ಬಿರಾದಾರ, ಸಿದ್ದಣ್ಣಗೌಡ ಬಿರಾದಾರ, ಬಾಪುರಾಯಗೌಡ ಬಿರಾದಾರ, ಪ್ರೀತು ದಶವಂತ, ಗುರಣ್ಣಗೌಡ ಪಾಟೀಲ, ಸೂಪರಿಂಟೆಂಡೆಂಟ್ ಇಂಜೀನಿಯರ್ ಮನೋಜಕುಮಾರ ಗಡಬಳ್ಳಿ, ಸೂಪರಿಂಟೆಂಡೆಂಟ್ ಇಂಜಿನಿಯರ್ ಗೋವಿಂದ ರಾಠೋಡ, ಚೌಡಿಹಾಳ ಗ್ರಾ.ಪಂ ಅಧ್ಯಕ್ಷ ರಮೇಶಗೌಡ ಬಿರಾದಾರ, ಅಶೋಕ ಗೌಡ ಬಿರಾದಾರ, .ಎ.ಎಸ್ ಪಾಟೀಲ, ಅಶೋಕ ಪ್ಯಾಟಿ ಸೇರಿದಂತೆ ಹಳಗುಣಕಿ, ಬಬಲಾದ, ಕಪನಿಂಬರಗಿ, ಹಡಲಸಂಗ ಗ್ರಾಮದ ಮುಖಂಡರಿದ್ದರು.