Bagepally News: ಎಚ್ಐವಿ ಸೋಂಕಿತರನ್ನು ನೋಡುತ್ತಿರುವ ಸಮಾಜದ ಮನೋಸ್ಥಿತಿ ಬದಲಾಗಬೇಕು: ಮಂಜುಳಾ ಹೇಳಿಕೆ
ಏಡ್ಸ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯವಿದ್ದು ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಸೋಂಕಿತರಿಗೆ ಚುಚ್ಚಿದ ಸೂಜಿ ಅಥವಾ ಸಿರಿಂಜ್‌ಗಳ ಮರು ಬಳಕೆಯಿಂದ ಏಡ್ಸ್ ಕಾಯಿಲೆ ಹರಡುತ್ತದೆ. ಸಲಿಂಗಕಾಮದಿಂದಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಓರ್ವ ಸಂಗಾತಿ ಜೊತೆ ದೈಹಿಕ ಸಂಪರ್ಕ ಹೊಂದುವ ಮೂಲಕ ಸೋಂಕಿನಿಂದ ದೂರ ಇರಬೇಕು

-

ಬಾಗೇಪಲ್ಲಿ: ಹೆಚ್‌ಐವಿ ಏಡ್ಸ್ ಬಗ್ಗೆ ಜಾಗರೂಕತೆ ಅಗತ್ಯವಿದೆ. ಸೋಂಕಿತರನ್ನು ಸಮಾಜ ಕೀಳಾಗಿ ನೋಡಬಾರದು, ಸಮಾಜ ಎಚ್.ಐ.ವಿ ಏಡ್ಸ್ (HIV Aids)ಬಗ್ಗೆ ಜಾಗೃತರಾಗಿ ಸುಸ್ಥಿರ ಜೀವನ ನಡೆಸಬೇಕು
ಅವರು ಮನುಷ್ಯರು ಎಂದು ಭಾವಿಸಿ ಆತ್ಮಸ್ಥೈರ್ಯ ತುಂಬಿ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಅರುಣೋದಯ ಕಲಾ ತಂಡದ ಅಧ್ಯಕ್ಷೆ ಮಂಜುಳಾ ಹೇಳಿದರು.
ಪಟ್ಟಣದ ಗೂಳೂರು ವೃತ್ತದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ,ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಅರುಣೋದಯ ಕಲಾ ತಂಡ ಸಹಯೋಗದಲ್ಲಿ ಏಡ್ಸ್(AIDS) ವಿರುದ್ಧ ಜನಜಾಗೃತಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Bagepally News: ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಸಿಪಿಐಎಂ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ
ಬೀದಿ ನಾಟಕದ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ ಎಚ್‌ಐವಿ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ಮತ್ತು ಎಚ್‌ಐವಿ ಸೋಂಕಿತರ ಕಡೆಗೆ ನೋಡುತ್ತಿರುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸುವ ಸಂದೇಶವನ್ನು ನೀಡಲಾಯಿತು
ಕ್ಷಣಿಕ ಸುಖದ ಆಸೆಗಾಗಿ ಹೆಚ್‍ಐವಿ, ಏಡ್ಸ್‌ನಂತಹ ಮಾರಕ ಕಾಯಿಲೆಗೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕು. ಯುವಜನತೆ ಹೆಚ್ಚು ಜಾಗೃತರಾಗಿರಬೇಕು, ಸೋಂಕಿನ ಕುರಿತು ಇತರರಿಗೂ ಅರಿವು ಮೂಡಿಸಬೇಕು ಎಂದರು.
ಏಡ್ಸ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯವಿದ್ದು ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಸೋಂಕಿತರಿಗೆ ಚುಚ್ಚಿದ ಸೂಜಿ ಅಥವಾ ಸಿರಿಂಜ್‌ಗಳ ಮರು ಬಳಕೆಯಿಂದ ಏಡ್ಸ್ ಕಾಯಿಲೆ ಹರಡುತ್ತದೆ. ಸಲಿಂಗಕಾಮದಿಂದಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಓರ್ವ ಸಂಗಾತಿ ಜೊತೆ ದೈಹಿಕ ಸಂಪರ್ಕ ಹೊಂದುವ ಮೂಲಕ ಸೋಂಕಿನಿಂದ ದೂರ ಇರಬೇಕು. ಸಮುದಾಯದಲ್ಲೂ ರೋಗದ ಬಗ್ಗೆ ತಿಳಿವಳಿಕೆ ಅಗತ್ಯವಿದೆ ಎಂದರು.
ಹೆಚ್‍ಐವಿ, ಏಡ್ಸ್ ಸೋಂಕು ತಗುಲಿರುವ ಬಗ್ಗೆ ಅನುಮಾನವಿದ್ದರೆ ತಕ್ಷಣ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು
‘ಎಚ್ಐವಿ–ಏಡ್ಸ್ ಮುಕ್ತ ಕರ್ನಾಟಕ (Free Karnataka from HIV-AIDS) ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಮರೋಪಾದಿ ಯಲ್ಲಿ ಕೆಲಸ ಮಾಡುತ್ತಿದೆ. ಬೀದಿ ನಾಟಕ ಇತರ ಮಾಧ್ಯಮಗಳ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಏಡ್ಸ್ ರೋಗಿಗಳ ಬಗ್ಗೆ ಅಪಹಾಸ್ಯ ಮಾಡುವ ಬದಲು ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಗಳು ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು’ ಹಾಗೂ ಹೆಚ್‍ಐವಿ, ಏಡ್ಸ್ ಸೋಂಕಿತರ ಜೊತೆ ಪ್ರೀತಿ ಯನ್ನು ಹಂಚಿರಿ ಹೆಚ್.ಐ.ವಿ.ಯನ್ನು ತಡೆಗಟ್ಟಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್.ಐ.ವಿ ಸೋಂಕಿತ ಆಪ್ತ ಸಮಾಲೋಚಕರು ಐಸಿಟಿಸಿ ಕೇಂದ್ರ ಬಾಗೇಪಲ್ಲಿ ಆರೋಗ್ಯ ಇಲಾಖೆ ನರಸಿಂಹ ಮೂರ್ತಿ, ಅನುಷ ಕೆ ಎಸ್ ,ರಾಚಯ್ಯ, ನಾಗಯ್ಯಸ್ವಾಮಿ , ಮಂಜುನಾಥ್ ಬಿ ಎಸ್,ಬಿ ವಸಂತಕುಮಾರಿ, ಮಂಜುನಾಥ್ ಎಂ ಸಿ,ಸೈಫುಲ್ಲಾ ಕೆ, ಸಿದ್ದೇಶ ಜೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.