ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ : ಪುಟ್ಟು ಆಂಜಿನಪ್ಪ ಭಾಗಿ

ನಮ್ಮ ಬಳಿ ಎಷ್ಟೆ ಹಣ ಆಸ್ತಿ ಇದ್ದರೂ ಮನಶಾಂತಿ, ನೆಮ್ಮದಿಗಾಗಿ ಪರಮಾತ್ಮನ ಮೊರೆ ಹೋಗುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ದ್ವೇಷ, ಅಸೂಯೆ ಬಿಟ್ಟು ಪ್ರೀತಿ, ಸೌಹಾರ್ದ, ಸಮೃದ್ಧವಾಗಿ ಜೀವನ ಸಾಗಿಸಬೇಕಾದರೆ ಭಯ ಭಕ್ತಿ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಪೂರ್ವಜರು ದೇವಾಲಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ

-

Ashok Nayak Ashok Nayak Oct 2, 2025 7:21 AM

ಶಿಡ್ಲಘಟ್ಟ :ತಾಲೂಕಿನ ದಿಬ್ಬೂರಹಳ್ಳಿ ಗ್ರಾಮಪಂಚಾಯಿತಿ ಚಂದಗಾನಹಳ್ಳಿ ಗ್ರಾಮದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿ ಚಂದಗಾನಹಳ್ಳಿ ಗ್ರಾಮದಲ್ಲಿ ಆರ್ಥಿಕವಾಗಿ ಸಣ್ಣ ಹಳ್ಳಿಯಾದರೂ ಕೃಷಿ ಆಧಾರಿತ ಗ್ರಾಮಸ್ಥರು ಒಗ್ಗಟ್ಟಾಗಿ ದೇವರ ಸೇವೆಗೆ ಕೈ ಜೋಡಿಸಿರುವುದು ಸಂತೋಷದ ಸಂಗತಿ ಎಂದರು.

ದೇವರು ಅನ್ನುವುದು ಒಂದು ನಂಬಿಕೆ.ಜನರ ಮುಖದಲ್ಲಿ ಸಂತೋಷ ಕಾಣುವಾಗ ಆ ನಂಬಿಕೆಗೆ ನೀರು ಹಾಯಿಸಿ ಪೋಷಿಸಬೇಕು.ಈ ಗ್ರಾಮಸ್ಥರ ಕನಸು ನನಸಾದ ಹಿನ್ನೆಲೆಯಲ್ಲಿ, ಶ್ರೀ ವೀರಾಂಜ ನೇಯ ಸ್ವಾಮಿ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದು ಆಗಲಿ”ಎಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಹಾರೈಸಿದರು.

ಇದನ್ನೂ ಓದಿ: Chikkaballapur News: ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ತಪ್ಪಿಸಲು ಕ್ರಾಂತಿಕಾರಿ ಹೋರಾಟ ಅನಿವಾರ್ಯ : ಆರ್.ಆಂಜನೇಯರೆಡ್ಡಿ

ನಮ್ಮ ಬಳಿ ಎಷ್ಟೆ ಹಣ ಆಸ್ತಿ ಇದ್ದರೂ ಮನಶಾಂತಿ, ನೆಮ್ಮದಿಗಾಗಿ ಪರಮಾತ್ಮನ ಮೊರೆ ಹೋಗು ವುದು ಪ್ರತಿಯೊಬ್ಬರಿಗೂ ಅನಿವಾರ್ಯ.ದ್ವೇಷ,ಅಸೂಯೆ ಬಿಟ್ಟು ಪ್ರೀತಿ, ಸೌಹಾರ್ದ, ಸಮೃದ್ಧವಾಗಿ ಜೀವನ ಸಾಗಿಸಬೇಕಾದರೆ ಭಯ ಭಕ್ತಿ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಪೂರ್ವಜರು ದೇವಾಲಯ ಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಹೇಳಿದರು.

ಸ್ಥಳೀಯ ಮುಖಂಡ ನಾಗೇಶ್ ಮಾತನಾಡಿ ಹಲವಾರು ದಾನಿಗಳ ಸಹಾಯದಿಂದ ಕಲ್ಲಿನಿಂದ ಅಚ್ಚುಕಟ್ಟಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.ಹಿಂದೂ ಧರ್ಮದ ನಂಬಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮದ ದೀರ್ಘಕಾಲದ ಕನಸು ಇಂದು ನನಸಾಗಿದೆ.

ಗ್ರಾಮಸ್ಥರ ಒಗ್ಗಟ್ಟಿಗೆ ಬೆಂಬಲವಾಗಿ ಕಳೆದ ವರ್ಷವೇ ಪುಟ್ಟು ಆಂಜಿನಪ್ಪ ಅವರು ದೇವಾಲಯ ನಿರ್ಮಾಣಕ್ಕೆ ೨ ಲಕ್ಷದಷ್ಟು ಆರ್ಥಿಕಸಹಾಯ ಮಾಡಿ  ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದರು. ಅವರ ಸೇವೆಯನ್ನು ನೆನಪಿಸಿಕೊಂಡ ಗ್ರಾಮಸ್ಥರು, ದೇವರ ಆಶೀರ್ವಾದದಿಂದ ಅವರಿಗೆ ಆರ್ಥಿಕ ವಾಗಿ, ರಾಜಕೀಯವಾಗಿ ಹಾಗೂ ಆರೋಗ್ಯದಲ್ಲಿ ಹೆಚ್ಚಿನ ಶಕ್ತಿ ಲಭಿಸಲಿ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಭೈರಪ್ಪ, ಚಿಕ್ಕ ವೆಂಕಟರೆಡ್ಡಿ, ಚೌಡರೆಡ್ಡಿ, ಮಂಜುನಾಥ್, ಸಿ.ವಿ.ವೆಂಕಟೇಶ್,ಬಾಲಕೃಷ್ಣ, ಬೈರಾರೆಡ್ಡಿ ಬಿ.ನಾರಾಯಣಸ್ವಾಮಿ, ಮುನಿಶಾಮಿ, ,ಸೀತಹಳ್ಳಿ ಮಂಜುನಾಥ್,ತಲಕಾಯಲ ಬೆಟ್ಟ ಅಶ್ವತ್ ರೆಡ್ಡಿ,ಬೈಯಪ್ಪನಹಳ್ಳಿ ನರಸಿಂಹರೆಡ್ಡಿ, ಕಲ್ಲರ್ ಮಂಜು, ಧಡಂಘಟ್ಟ ಕೃಷ್ಣಪ್ಪ,  ಆನೂರು ಆನಂದ್ ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.